May 3, 2024

Bhavana Tv

Its Your Channel

ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಶೇ.100 ಸಾಧನೆ

ಭಟ್ಕಳ: ಕವಿವಿ ಧಾರವಾಡ ಇವರು ನಡೆಸಿದ ಬಿಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗುವುದರೊಂದಿಗೆ 100% ಫಲಿತಾಂಶ ದಾಖಲಾಗಿದೆ. ಸೀಮಾ ನಾಯ್ಕ ಶೇ.91.2, ರಾಹುಲ ಶಿರೂರಕರ ಶೇ.90.50, ಅನಿತಾ ನಾಯ್ಕ ಹಾಗೂ ಸಿಂಧು ಮೊಗೇರ ಶೇ.85.7 ಅಂಕ ಪಡೆದು ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಈ ಸಾಧನೆಗೆ ಎಲ್ಲ ವಿದ್ಯಾರ್ಥಿಗಳನ್ನು ಭಟ್ಕಳ ಎಜುಕೇಶನ್ ಟ್ರಸ್ಟ’ನ ಆಡಳಿತ ಮಂಡಳಿಯವರು, ಕಾಲೇಜಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

error: