February 6, 2023

Bhavana Tv

Its Your Channel

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023; ಭಟ್ಕಳ
ತಾಲೂಕಾ ಆಡಳಿತ ಸೌಧದಿಂದ ರ‍್ಯಾಲಿ

ಭಟ್ಕಳ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಅಂಗವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭಟ್ಕಳ ತಾಲೂಕಾ ಆಡಳಿತ ಸೌಧದಿಂದ ರ‍್ಯಾಲಿ ಆರಂಭಿಸಿ ಮತ್ತೆ ಪುನಃ ತಾಲೂಕಾ ಆಡಳಿತ ಸೌಧದ ತನಕ ಬಂದು ಮುಕ್ತಾಯಗೊಳಿಸಲಾಯಿತು.

ತಾಲೂಕಾ ಆಡಳಿತ ಸೌಧದ ಎದುರು ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿದ ತಹಸೀಲ್ದಾರ್ ಡಾ. ಸುಮಂತ್ ಬಿ.ಇ. ಅವರು ಮಾತನಾಡಿ ಚುನಾವಣಾ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು ಎಲ್ಲಾ ಅರ್ಹ ಮತದಾರರು ಪಟ್ಟಿಯಲ್ಲಿ ತಮ್ಮ ತಮ್ಮ ಹೆಸರುಗಳು ಸೇರ್ಪಡೆಯ ಆಗಿದೆಯೇ ಇಲ್ಲವೇ ಎಂದು ನೋಡಿಕೊಳ್ಳಬೇಕು. ಯಾವುದೇ ಪರಿಷ್ಕರಣೆ, ತಿದ್ದುಪಡಿ, ವರ್ಗಾವಣೆ ಇದ್ದಲ್ಲಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಜನರಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಕುರಿತು ಮಾಹಿತಿ ನೀಡಲು ಜಾಥಾ ಮಾಡಲಾಗುತ್ತಿದ್ದು ಎಲ್ಲರೂ ಪಾಲ್ಗೊಂಡು ಯಶಸ್ವೀಗೊಳಿಸುವಂತೆ ಕರೆ ನೀಡಿದರು.
ಜಾಥಾದಲ್ಲಿ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನುಭಾಗ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್, ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನುಭಾಗ್, ಕೃಷಿ ಅಧಿಕಾರಿ ಎ.ಬಿ. ಇಟ್ನಾಳ್, ಅಲ್ಪಸಂಖ್ಯಾಕರ ಇಲಾಖೆಯ ಶಂಶುದ್ಧೀನ್ ಶೇಖ್, ಪುರಸಭಾ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಸೇರಿದಂತೆ ತಾಲೂಕಿನ ಅಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

About Post Author

error: