April 20, 2024

Bhavana Tv

Its Your Channel

ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರೋಪ ಸಮಾರಂಭ ಡಿಸೆಂಬರ್ ಕೊನೆಯ ವಾರ

ಭಟ್ಕಳ: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಇವರ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುಝಾಮಿಲ್ ಖಾಜಿಯಾ ಹೇಳಿದರು.

ಅವರು ಭಟ್ಕಳ, ಅಂಜುಮನ್ ಸಂಸ್ಥೆಯ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿಯವರೆಗೆ, ಇಂಜಿನೀಯರಿAಗ ಕಾಲೇಜು ಸೇರಿದ0ತೆ 22 ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಮಹಿಳೆಯರ ಶಿಕ್ಷಣದ ಉನ್ನತಿಯನ್ನು ಗಮನದಲ್ಲಿಟ್ಟುಕೊಂಡು ಬಾಲಕಿಯರಿಗಾಗಿಯೇ ಪ್ರತ್ಯೇಕ ಶಾಲಾ ತೆರೆಯಲಾಗಿದೆ. ಜಾತಿ, ಧರ್ಮ ಭೇದ ಇಲ್ಲದೇ ಸಂಸ್ಥೆಯು ಲಕ್ಷಾಂತರ ಜನರಿಗೆ ವಿದ್ಯಾ ದಾನ ಮಾಡಿದೆ. ಮಾಜಿ ಶಾಸಕ ಜೆ.ಡಿ. ನಾಯ್ಕ, ಹಾಲಿ ಶಾಸಕ ಸುನಿಲ್, ನಾಯ್ಕ ಸೇರಿದಂತೆ ಹಲವಾರು ಗಣ್ಯರು ಈ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಭಟ್ಕಳ, ಅಂಜುಮನ್ ಶಿಕ್ಷಣ ಸಂಸ್ಥೆಯು 2019ರಲ್ಲಿ ಶತಮಾನವನ್ನು ಪೂರೈಸಿದ್ದು.
ಅದೇ ವರ್ಷ ಶತಮಾನೋತ್ಸವಕ್ಕೆ ಚಾಲನೆ ನೀಡಲಾಗಿದೆ. ಆದರೆ ಕೋವಿಡ್,ಮಹಾಮಾರಿಯ ಕಾರಣದಿಂದಾಗಿ
ಸಮಾರೋಪ ಸಮಾರಂಭವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇದೀಗ 2022ರ ಡಿಸೆಂಬರ್ ಕೊನೆಯ ವಾರದಲ್ಲಿ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಆಯೋಜಿಸಿದ್ದೇವೆ.
ಡಿ. 28ಕ್ಕೆ ರಾಜ್ಯಪಾಲರ ಅಂಜುಮನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರೋಪದ ಅಂಗವಾಗಿ ತಾಲೂಕಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಗುತ್ತದೆ. ಸಂಸ್ಥೆಯ ಭಟ್ಕಳ ಅಂಜುಮನ್ ಬಾಲಕಿಯರ ಪ್ರೌಢಶಾಲೆ 50 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನ.13ಕ್ಕೆ ಶಾಲಾ ಸುವರ್ಣೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಬಾಲಕಿಯರು, ಯುವತಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಡಿ. 28 ರಂದುನಡೆಯುವ . ಅಂಜುಮನ್ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದ್ದು,ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಎಂದರು. ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ದಿಕ್ ಇಸ್ಟೈಲ್, ಸಮಾರೋಪ ಸಮಾರಂಭದ ಸಂಚಾಲಕ ತನ್ವೀರ್ ಕಾಸರಗೋಡ, ಮೊಹಿದ್ದೀನ್ ಕೊಚಾಪಾ,ಸಾದೀಕ್ ಪಿಲ್ಲೂರ್,
ರಮೀಝ್ ಕೋಲಾ,ಮುಬಾಶೀರ್ ಹಲ್ಲಾರೆ,ಮೌಲಾನಾ ಅಮೀನ್ ರುಕ್ನುದ್ದೀನ್,ಹಾಶೀಮ್ ಬರನಿ,ಮುಂತಾದವರು ಉಪಸ್ಥಿತರಿದ್ದರು.

error: