April 27, 2024

Bhavana Tv

Its Your Channel

ಬಸ್ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಬಸ್ ಡೀಪೋ ಮ್ಯಾನೆಜರ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಭಟ್ಕಳ ತಾಲೂಕಿನ ಅಳಿವೆಕೋಡಿಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ. ಇದರಿಂದ ಪ್ರತಿದಿನ ನಮ್ಮ ಬೆಳಗ್ಗಿನ ವ್ಯಾಸಾಂಗ ಹಾಳಾಗುತ್ತಿದೆ ಎಂದು ಅಳಿವೆಕೋಡಿ ಭಾಗದ ನೂರಾರು ವಿದ್ಯಾರ್ಥಿಗಳು ಬಸ್ ಡೀಪೋ ಮ್ಯಾನೆಜರ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಅಳಿವೆಕೋಡಿ ಪುರಾಣ ಪ್ರಸಿದ್ದ ಸ್ಥಳವೂ ಹೌದು. ಇಲ್ಲಿ ಪ್ರತಿದಿನ ನೂರಾರು ಸಂಖ್ಯೆಯ ಭಕ್ತರು ಇಲ್ಲಿನ ಪ್ರಸಿದ್ದ ಆಳಿವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡುತ್ತಾರೆ. ಇಲ್ಲಿಂದ ಪ್ರತಿದಿನ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಶಿರಾಲಿ, ಭಟ್ಕಳ, ಹೊನ್ನಾವರ, ಸರ್ಪನಕಟ್ಟೆ, ಕುಂದಾಪುರ ಕಾಲೇಜುಗಳಿಗೆ ತೆರಳುತ್ತಾರೆ. ಮೊದಲು ಬೆಳಗಿನ ಜಾವ ಎರಡು ಬಸ್ಸು ಬರುತ್ತಿದ್ದು ಇತ್ತೀಚಿಗೆ ಒಂದೆ ಬಸ್ಸು ಬರಲು ಆರಂಭವಾಗಿದೆ. 50ಸಂಖ್ಯೆ ಆಸನದ ಸಾಮರ್ಥ್ಯವುಳ್ಳ ಬಸ್ಸಗಳಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಜೋತಾಡುತ್ತಾ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಬರುವ ಒಂದು ಬಸ್ಸು ಕೂಡಾ ಸಮಯಕ್ಕೆ ಬರುತತಿಲ್ಲಾ ಎನ್ನುವದು ವಿದ್ಯಾರ್ಥಿಗಳ ಆರೋಪ
ತಾಲೂಕಿನ ಅಳಿವೆಕೋಡಿಯಲ್ಲಿ ಬಸ್ ವಿಳಂಬದ ಕುರಿತು ಈಗಾಗಲೆ ಬಸ್ ಡೀಪೋ ಮ್ಯಾನೆಜರ್‌ಗೆ ಮನವಿ ನೀಡಿ ಬೇಸತ್ತ ವಿದ್ಯಾರ್ಥಿಗಳಿಗೆ ಸೋಮವಾರವೂ ಇದೆ ಅನುಭವವಾಗಿದೆ. ಪಾಸ್ ಇದ್ದರೂ ಪ್ರತಿದಿನ ಅಟೋರಿಕ್ಷಾದಲ್ಲಿ ತೆರಳಬೇಕಾಗಿದ್ದು ನಿಲ್ದಾಣದ ವ್ಯವಸ್ಥಾಪಕರನ್ನು ಕೇಳಿದರೆ ಪಾಸ್ ಹಣ ವಾಪಾಸ್ ತೆಗೆದುಕೊಂಡಿ ಹೋಗಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಇದರಿಂದ ಆಕ್ರೋಶಗೊಂಡ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಮೊದಲು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ವ್ಯವಸ್ಥಾಪಕರಿಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲಿ ಅವರು ಹಾರಿಕೆಯ ಉತ್ತರ ನೀಡಿದ್ದು ಕೆರಳಿದ ನೂರಾರು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೆ ಸುಮಾರು 5ಕಿ.ಮಿ ದೂರವಿರುವ ಬಸ್ ಡೀಪೋಗೆ ತೆರಳಿ ಅಲ್ಲಿನ ಘಟಕ ವ್ಯವಸ್ಥಾಪಕರಿಗೆ ಮುತ್ತಿಗೆ ಹಾಕಿದ್ದಾರೆ. ನಾಳೆ(ಮಂಗಳವಾರ)ದಿAದ ಹಿಂದಿನ ತರವೆ ಬಸ್ ಬಿಡುವದಾಗಿ ಮ್ಯಾನೆಜರ್ ಭರವಸೆ ನೀಡಿದರು ಲಿಖಿತವಾಗಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಬಳಿಕ ವಿದ್ಯಾರ್ಥಿಗಳ ಮನವೋಲಿಸಿ ತರಗತಿಗಳಿಗೆ ಹಾಜರಾಗುವಂತೆ ಬಸ್ ಡೀಪೋ ಮ್ಯಾನೆಜರ ಜನಾರ್ಧನ ದಿವಾಕರ ಕಳುಹಿಸಿದ್ದಾರೆ. ಪ್ರತಿಭಟನೆಯಲ್ಲಿ ಭಟ್ಕಳ ನ್ಯೂ ಇಂಗ್ಲೀಷ ಪಿ.ಯು ಕಾಲೇಜು, ಸಿದ್ದಾರ್ಥ ಕಾಲೇಜು, ಸರ್ಪನಕಟ್ಟೆ ಐಟಿಐ ಕಾಲೇಜು ಸೇರಿದಂತೆ ಇತರ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

error: