May 3, 2024

Bhavana Tv

Its Your Channel

ಮಸೀದಿ ದರ್ಶನದ ಮೂಲಕ ಸತ್ಯದರ್ಶನವಾಗಲಿ-ಪರಮೇಶ್ವರ ದೇವಾಡಿಗ

ಭಟ್ಕಳ: ಸಮಾಜದಲ್ಲಿ ಗಲಭೆ-ಗೊಂದಲಗಳನ್ನು ಸೃಷ್ಟಿ ಮಾಡುವವ ರಾಜಕೀಯ ಪ್ರೇರಿತ ಮನಸ್ಸುಗಳಿಗೆ ಮಸೀದಿ ದರ್ಶನದ ಮೂಲಕ ಸತ್ಯದರ್ಶನವಾಗಬೇಕು ಎಂಬ ಅಭಿಪ್ರಾಯವನ್ನು ಭಟ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ದೇವಾಡಿಗ ಸಮಾಜದ ಮುಖಂಡ ಪರಮೇಶ್ವರ ದೇವಾಡಿಗ ವ್ಯಕ್ತಪಡಿಸಿದರು.
ಅವರು ಭಾನುವಾರ ಇಲ್ಲಿನ ಖಲಿಫಾ ಮರ್ಕಝಿಜಮಾಅತುಲ್ ಮುಸ್ಲಿಮೀನ್ ವತಿಯಿಂದ ಖಲಿಫಾಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮ ದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ ಬೇರೆ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಪಾರ್ಟಿಗಳನ್ನು ಮಾಡುತ್ತಾರೆ. ಕೆಳ ಮಟ್ಟದ ಕಾರ್ಯಕರ್ತರು ಅವರ ಮಾತುಗಳನ್ನು ಕೇಳಿಕೊಂಡು ಏನೆಲ್ಲ ಮಾಡುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಬಾರದು ಎಂದಾದರೆ ಇಂತಹ ಸತ್ಯದರ್ಶನ ಮಾಡುವ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕುಎಂದರು.
ಸದ್ಭಾವನ ಮಂಚ್‌ಅಧ್ಯಕ್ಷ ಸತೀಶ್‌ಕುಮಾರ್ ಮಾತನಾಡಿ, ಮಸೀದಿ ದರ್ಶನದ ಮೂಲಕ ನಾವೆಲ್ಲರೂ ಪರಸ್ಪರ ವಿಶ್ವಾಸ ನಂಬಿಕೆಗಳಿದ್ದಾಗ ಮಾತ್ರ ನಮ್ಮಲ್ಲಿ ಶಾಂತಿ, ಸೌಹಾರ್ದತೆ ಉಂಟಾಗಲು ಸಾಧ್ಯ. ದೂರದಿಂದ ನಿಂತು ನಾವು ಹಲವಾರು ಅನುಮಾನಗಳನ್ನು ವ್ಯಕ್ತಪಡುತ್ತೇವೆ. ಆದರೆ ಸನಿಹಕ್ಕೆ ಬಂದಾಗ ಮಾತ್ರ ಅದರ ಒಳವು ಬಿಚ್ಚಿಕೊಳ್ಳುತ್ತದೆ. ನಾವು ಪರಸ್ಪರ ಸನಿಹಕ್ಕೆ ಬರಲುಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮರ್ಕಝಿ ಖಲಿಫಾಜಮಾಅತುಲ್ ಮುಸ್ಲಿಮೀನ್ ನ ಪ್ರಧಾನಕಾಝಿ ಮೌಲಾನಕ್ವಾಜಾ ಮೋ ಈನುದ್ದಿನ್ ಅಕ್ರಮಿ ಮದನಿ, ನದ್ವಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮೌಲಾನ ಉಬೈದುಲ್ಲಾ ನದ್ವಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ರಖೀಬ್‌ಎಂ.ಜೆ, ನ್ಯಾಯವಾದಿ ನಾಗರಾಜ್‌ಇ.ಎಚ್., ಮೊಗೇರ ಸಮಾಜ ಅಧ್ಯಕ್ಷ ಅಣ್ಣಪ್ಪ ಮೊಗೇರ್, ಕರಿಕಾಲ್ ಚರ್ಚ್ ನ ಫಾದರ್ ಲಾರೆನ್ಸ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಬಿ.ನಾಯ್ಕ, ಅಂಜುಮನ್ ಪಿಯು ಕಾಲೇಜಿನ ಉಪನ್ಯಾಸಕ ಗುರುರಾಜ್, ಕ.ಸಾ.ಪ. ಅಧ್ಯಕ್ಷ ಗಂಗಾಧರ್ ನಾಯ್ಕ, ನ್ಯೂಇಂಗ್ಲಿಷ್ ಪ್ರೌಢಶಾಲೆಯ ವಿಶ್ರಾಂತ ಮುಖ್ಯಾದ್ಯಾಪಕ ಎಂ.ಕೆ.ನಾಯ್ಕ ಪತ್ರಕರ್ತ ಎಂ.ಆರ್.ಮಾನ್ವಿ ಮತ್ತಿತರರು ಮಾತನಾಡಿದರು.
ಹಿರಿಯ ಸಾಹಿತಿಡಾ.ಸೈಯ್ಯದ್ ಝಮಿರುಲಾ ್ಲಷರೀಫ್ ಪ್ರಸ್ತಾವಿಕವಾಗಿ ಮಾತನಾಡಿದರು. ಖಲಿಫಾಜಮಾಅತ್ ನ ಅಂಝುಮ್ ಗಂಗೋಳಿ ಕಾರ್ಯಕ್ರಮ ನಿರೂಪಿಸಿದರು. ತಲ್ಹಾ ಸಿದ್ದಿಬಾಪ ಧನ್ಯವಾದ ಅರ್ಪಿಸಿದರು

error: