April 20, 2024

Bhavana Tv

Its Your Channel

ಶ್ರೀ ಭುವನೇಶ್ವರಿ ಕನ್ನಡ ಸಂಘದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಭಟ್ಕಳ: ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರಿದರೆ ನಮ್ಮ ಗಡಿಭಾಗವಾದ ಕಾರವಾರ ಮತ್ತು ಬೆಳಗಾವಿಯನ್ನು ಕಳೆದುಕೊಳ್ಳಬೇಕಾದೀತು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ಅವರು ನಗರದ ಆಸರಕೇರಿಯ ಶ್ರೀ ಭುವನೇಶ್ವರಿ ಕನ್ನಡ ಸಂಘದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ, ನೆಲ ಜಲಕ್ಕಾಗಿ ಕನ್ನಡಿಗರು ಒಟ್ಟಾಗಬೇಕಾದ ಪರಿಸ್ಥಿತಿ ಬಂದೊದಗಿದ್ದು ಕನ್ನಡವನ್ನು ನಿರ್ಲಕ್ಷ ಮಾಡಿದರೆ ನಮಗೆ ಉಳಿಗಾಲವಿಲ್ಲ. ಭಟ್ಕಳದಲ್ಲಿ ಸತತ 25 ವರ್ಷಗಳಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದ ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘ ದ ಕಾರ್ಯ ಶ್ಲಾಘನೀಯವಾಗಿದೆ ಇವರು ಭಟ್ಕಳದಲ್ಲಿ ಕನ್ನಡಕ್ಕೆ ಅಗೌರವವಾದಾಗ ಮುಂದೆ ಬಂದು ನಿಂತು ಹೋರಾಟ ಮಾಡಿ ಜಯಿಸಿ ಕನ್ನಡದ ಗೌರವವನ್ನು ಎತ್ತಿಹಿಡಿದ್ದಾರೆ. ಇರುವ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಲ್ಲುವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಲಾಗಿ ಉಪಸ್ಥಿತರಿದ್ದ ಮಾಜಿನ ಶಾಸಕ ಜೆ.ಡಿ. ನಾಯ್ಕ, ಉಪವಿಭಾಗಾಧಿಕಾರಿ ಮಮತಾ ದೇವಿ, ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ, ಅರ್ಬನ್ ಬ್ಯಾಂಕ ನಿರ್ದೇಶಕ ಶ್ರೀಧರ ನಾಯ್ಕ, ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿದರು. ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪತ್ರಕರ್ತ ಮನಮೋಹನ ನಾಯ್ಕ, ಪುರಸಭಾ ನಾಮನಿರ್ಧೇಶಿತ ಸದಸ್ಯ ಶ್ರೀಕಾಂತ ನಾಯ್ಕ, ಸೋನಾರಕೇರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟೇಶ ನಾಯ್ಕ, ಮಹೇಶ ನಾಯ್ಕ, ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷ ವಸಂತ ನಾಯ್ಕ, ಶಿವಾನಂದ ಮಹಾಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಸಾಹಿತಿ ಮಂಜುನಾಥ ನಾಯ್ಕ ಮುರುಡೇಶ್ವರ ಇವರ ಕವನ ಸಂಕಲನ “ಲೀಲಾವೃತ” ವನ್ನು ಶಾಸಕ ಸುನೀಲ ನಾಯ್ಕ ಬಿಡುಗಡೆಗೊಳಿಸಿದರು. ಕವಿ ಶ್ರೀಧರ ಶೇಟ್ ಕೃತಿ ಪರಿಚಯಿಸಿದರು. ವೇದಿಕೆಯಲ್ಲಿ ಮಾಜಿ ಸೈನಿಕ ಹಾಗು ದೇಹದಾನ ಮಾಡಿದ ರಾಮಾ ನಾಯ್ಕ ದಂಪತಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಭುವನೇಶ್ವರಿ ಕನ್ನಡ ಸಂಘದ ಕಾರ್ಯದರ್ಶಿ ಪಾಂಡುರAಗ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರಕಾಶ ನಾಯ್ಕ ವಂದಿಸಿದರು. ಶಿಕ್ಷಕ ನಾರಾಯಣ ನಾಯ್ಕ ಹಾಗೂ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ನಂತರ ವೇದಿಕೆಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿಸೂಲಿಬೆಲೆ ಕನ್ನಡದ ಬಗ್ಗೆ ಮಾತನಾಡಿದರು. ನಂತರ ನಡೆದ ಸಾಂಸ್ಕçತಿಕ ವೇದಿಕೆಯಲ್ಲಿ ಜೂನಿಯರ್ ಪುನೀತ್ ರಾಜ್‌ಕುಮಾರ ಎಂದು ಖ್ಯಾತಿ ಪಡೆದ ಚಂದ್ರ ಮೌರ್ಯ ಮೈಸೂರು ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

error: