April 6, 2025

Bhavana Tv

Its Your Channel

ಪಾಕಿಸ್ತಾನದ ಮಹಿಳೆಗೆ ಆರು ತಿಂಗಳ ಸಜೆಗೆ ಆದೇಶಿಸಿದ ಕಾರವಾರ ಜಿಲ್ಲಾ ನ್ಯಾಯಾಲಯ

ಭಟ್ಕಳ: ವಿಸಾ ನಿಯಮ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಭಟ್ಕಳದ ದಂಪತಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಕಾರವಾರದ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

ಭಟ್ಕಳ ನಗರದ ಮೌಲಾನ ಆಜಾದ್ ರಸ್ತೆಯ ಮಹ್ಮದ್ ಇಲಿಯಾಸ್ ಹಾಗೂ ಪಾಕಿಸ್ತಾನದ ನಾಸಿರಾ ಪರವೀನ್ ಶಿಕ್ಷೆಗೊಳಗಾದ ದಂಪತಿಗಳಾಗಿದ್ದು ಮಹ್ಮದ್ ಇಲಿಯಾಸ್ ಗೆ ?10000-00 ದಂಡ, ಒಂದು ತಿಂಗಳ ಜೈಲು ,ನಾಸಿರಾ ಪರವೀನ್ ಗೆ ?10000-00 ದಂಡ ಆರು ತಿಂಗಳ ಸಜೆ ಗೆ ಆದೇಶ ಮಾಡಲಾಗಿದೆ.
ಪಾಕಿಸ್ತಾನದ ಮಹಿಳೆ ನಾಸಿರಾ ರವರು ಭಟ್ಕಳದ ಮಹ್ಮದ್ ಇಲಿಯಾಸ್ ರನ್ನು ವಿವಾಹವಾಗಿ ಭಟ್ಕಳದಲ್ಲಿ ಪ್ರವಾಸಿ ವಿಸಾದಡಿ ನೆಲಸಿದ್ದರು. ವಿಸಾ ಅವಧಿ ಮುಗಿದಿದ್ದು ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ವಿಸಾ ನಿಯಮ ಉಲ್ಲಂಘಿಸಿ ಪಾಕಿಸ್ತಾನದ ಮಹಿಳೆ ಹಾಗೂ ಆಕೆಯ ಪತಿ ದೆಹಲಿಗೆ ಪ್ರಯಾಣ ಬೆಳಸಿದ್ದರು.ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಾದ ವಿವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಲಯ ಈ ಆದೇಶ ಮಾಡಿದೆ.

error: