May 14, 2024

Bhavana Tv

Its Your Channel

‘ಹಿಂದೂ-ಮುಸ್ಲಿಮ್ ಧರ್ಮ ಸಮನ್ವಯತೆ’ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹೇಮಾ ಮತ್ತು ದ್ಯಾನೇಶ್ ಪ್ರಥಮ

ಭಟ್ಕಳ: ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಭಟ್ಕಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮುಂಡಳ್ಳಿಯ ಹೇಮಾ ಮಂಜು ಭಟ್ರಹಿತ್ಲು (ಕನ್ನಡ) ಹಾಗೂ ಸಿ.ಎ.ದ್ಯಾನೇಶ್ (ಇಂಗ್ಲಿಷ್) ಪ್ರಥಮ ಪಡೆದುಕೊಂಡಿದ್ದಾರೆ.
ಗುರುವಾರ ನಡೆದ ಕೋಮು ಸೌಹಾರ್ದತಾ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದುರೂ. 20ಸಾವಿರ ಬಹುಮಾನ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ದ್ವಿತೀಯ (ಬಹುಮಾನ ರೂ 15 ಸಾವಿರ ನಗದು ಹಾಗೂ ಸ್ಮರಣಿಕೆ) ಕೀರ್ತಿಎನ್.ನಾಯ್ಕ(ಕನ್ನಡ) ಫಾತಿಮಾ ರ‍್ಹಾಎಸ್.ಎಂ. (ಇಂಗ್ಲಿಷ್) ತೃತೀಯಾ ಬಹುಮಾನರೂ. 10ಸಾವಿರ ನಗದು ಹಾಗೂ ಸ್ಮರಣಿಕೆ ಸೀಮಾ ರಮೇಶ್ ನಾಯ್ಕ(ಕನ್ನಡ) ದರ್ಶನ್ ಎಂ.ನಾಯ್ಕ (ಇಂಗ್ಲಿಷ್) ಪಡೆದುಕೊಂಡಿದ್ದು ವಿಜೇತರಿಗೆ ಬೆಳಗಾವಿ ಬಸವಪೀಠಾಧಿಪತಿ ಶ್ರೀ ಬಸವಪ್ರಕಾಶ ಸ್ವಾಮಿಜಿ ಬಹುಮಾನ ವಿತರಿಸಿದರು.
ಅಲ್ಲದೆ 30 ಸ್ಪರ್ಧಾಳುಗಳಿಗೆ ರೂ. 500 ನಗದು ಹಾಗೂ ಸ್ಮರಣಿಕೆ ಮತ್ತುಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಸೆಂಟ್‌ಥಾಮಸ್ ಪ್ರೌಢಶಾಲೆ, ಸಕಾರಿ ಪ್ರೌಢಶಾಲೆ ಬೆಳಕೆ ಹಾಗೂ ಸಿದ್ದಾರ್ಥ ಪ್ರೌಢಶಾಲೆಗೆತಲಾ 3000 ರೂ ನಗದು ಹಾಗು ಸ್ಮರಣಿಕೆಯನ್ನು ನೀಡಿಗೌರವಿಸಲಾಯಿತು.
ಕಾರ್ಯಕ್ರಮದಅಧ್ಯಕ್ಷತೆಯನ್ನುಜಮಾಅತುಲ್ ಮುಸ್ಲಿಮೀನ್ ಭಟ್ಕಳ ಇದರಅಧ್ಯಕ್ಷ ಮುಹಮ್ಮದ್ ಶಫಿ ಶಾಬಂದ್ರಿ ಪಟೇಲ್ ವಹಿಸಿದ್ದರು.
ತಂಝೀಮ್‌ಅಧ್ಯಕ್ಚಇನಾಯತುಲ್ಲಾ ಶಾಬಂದ್ರಿ, ಮೌಲಾನ ಮುಹಮ್ಮದ್‌ಇಲ್ಯಾಸ್ ನದ್ವಿ, ಅಖಿಲಾ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಪ್ರ.ಕಾ. ಮೌಲಾನಖಾಲಿದ್ ಸೈಫುಲ್ಲಾರಹ್ಮಾನಿ, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆಮಾಜಿ ಶಾಸಕ ಜೆ.ಡಿ.ನಾಯ್ಕ, ಮಾಂಕಾಳ್ ವೈದ್ಯ, ಕರ್ನಾಟಕಕೈಗಾರಿಕಾಕೋಶದಅಧ್ಯಕ್ಷ ಪ್ರದೀಪ್‌ಜೆ.ಪೈ ಉಪಸ್ಥಿತರಿದ್ದರು.

error: