April 23, 2024

Bhavana Tv

Its Your Channel

ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿದ ದರ್ಶನ್ ಹೆಬ್ಬಾರ್

ಭಟ್ಕಳ ತಾಲೂಕಿನ ಎಂ.ಆರ್.ಎಸ್. ಸ್ಪೋರ್ಟ್ಸ್ ಕ್ಲಬ್ ಮಣ್ಕುಳಿ ಇವರ ಆಶ್ರಯದಲ್ಲಿ ನಡೆದ 65 ಕೆಜಿ ತೂಕದ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಹೆಬ್ಬಾರ್ ಇಲೆಕ್ಟ್ರಿಕಲ್ ಮಾಲೀಕರಾದ ದರ್ಶನ್ ಹೆಬ್ಬಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕ್ರೀಡೆಯಲ್ಲಿ ಸ್ಪರ್ಧೆ ಇರುವುದು ಸಹಜ. ಆದರೆ ಆ ಸ್ಪರ್ಧೆ ವೈಮನಸ್ಸಿಗೆ ಕಾರಣವಾಗಬಾರದು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದ ಅವರು ಕ್ರೀಡೆಯಲ್ಲಿ ಪ್ರತಿಯೊಬ್ಬ ಆಟಗಾರನು ಕ್ರೀಡಾಂಗಣದಲ್ಲಿ ಮಾತ್ರ ತಮ್ಮ ರೋಷ ,ದ್ವೇಷವನ್ನು ತೋರಿಸಬೇಕು. ಅದೇ ಕ್ರೀಡಾಂಗಣದಿAದ ಹೊರ ಬಂದ ನಂತರ ನಾವೆಲ್ಲರೂ ಸ್ನೇಹಿತರಾಗಿರ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿ ನಡೆಯುವ ಜಗಳವನ್ನು ಕ್ರೀಡಾಂಗಣದಿAದ ಹೊರ ಬಂದ ನಂತರವೂ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಇಂತಹ ಘಟನೆಗಳು ಎಲ್ಲಿಯೂ ಕೂಡ ನಡೆಯ ಬಾರದು ಎಂದು ಹೇಳಿದ ಅವರು ಎಂ.ಆರ್.ಎಸ್ ಸ್ಪೋರ್ಟ್ ಕ್ಲಬ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರು ಕೃಪಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ ಎಂ.ಆರ್.ಎಸ್. ಸ್ಪೋರ್ಟ್ಸ್ ಕ್ಲಬ್ ಎನ್ನುವುದು ನಮ್ಮ
ಮಣ್ಕುಳಿಯ ಹೆಸರಾಂತ ಸ್ಪೋರ್ಟ್ಸ್ ಕ್ಲಬ್ ಆಗಿದ್ದು. ಮಣ್ಕುಳಿಯ ದಿಗ್ಗಜ ಯುವಕರು ಆಟವಾಡಿ ಭಟ್ಕಳ ತಾಲೂಕಿನಲ್ಲೆ ಹೆಮ್ಮೆ ತಂದು ಕೊಟ್ಟ ಈ ಸ್ಪೋರ್ಟ್ಸ್ ಕ್ಲಬ್ ಎಂದರೆ ಅದು ನಮ್ಮ ಹೆಮ್ಮೆಯ ಎಂ.ಆರ್.ಎಸ್ ಸ್ಪೋರ್ಟ್ಸ್ ಕ್ಲಬ್ ಎಂದು ಹೇಳಬಹುದಾಗಿದೆ. ಈ ಸ್ಪೋರ್ಟ್ಸ್ ಕ್ಲಬ್ ಕಳೆದ 35 ವರ್ಷಗಳಿಂದ ಅಸ್ತಿತ್ವದಲ್ಲಿದ್ದು. ಜಿಲ್ಲಾ ಹಾಗೂ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗೆದ್ದುಕೊಂಡು ಬಂದಿದೆ ಎಂದರು.

ರಾಜ್ಯ ಕಬ್ಬಡಿ ರೆಫರೀ ಬೋರ್ಡ ಕನ್ವಿಯರ್ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ ಕಬ್ಬಡಿ ಪಂದ್ಯಾಟದಲ್ಲಿ ಭಟ್ಕಳದ ಯುವಕರು ರಾಜ್ಯ ರಾಷ್ಟ ಮಾಡಿದ ಸಾಧನೆಯ ಬಗ್ಗೆ ವಿವರಿಸಿ ತಂಡಕ್ಕೆ ಶುಭಹಾರೈಸಿದರು.ಎಂ.ಆರ್.ಎಸ್. ಸ್ಪೋರ್ಟ್ಸ ಕ್ಲಬ್ ಸಂಸ್ಥಾಪಕ ಸದಸ್ಯ ದಿನೇಶ ನಾಯ್ಕ ಮಾರಿಮನೆ ಮಾತನಾಡಿದರು.

ಇದೇ ವೇಳೆ ಎಂ.ಆರ್.ಎಸ್.ಸ್ಪೋರ್ಟ್ಸ್ ಕ್ಲಬ್ ನ ಸಂಸ್ಥಾಪಕ ಶ್ರೀನಿವಾಸ ನಾಯ್ಕ ಹಾಗೂ ಮಣ್ಕುಳಿಯ ಹಿರಿಯ ಮುಖಂಡ ಪರಮೇಶ್ವರ ನಾಯ್ಕ ಅವರ ಪ್ರಥಮ ಪುತ್ರ ಹಾಗೂ ಊರಿನ ಚಿರ ಪರಿಚಿತ ಯುವಕ ಅಕಾಲಿಕ ಮರಣದಿಂದ ಇತ್ತೀಚೆಗೆ ಮ್ರತಪಟ್ಟಿದ್ದ ಲೋಹಿತ ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಇದಕ್ಕೂ ಪೂರ್ವದಲ್ಲಿ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಸಾಧನೆ ಗೈದ ಕಬ್ಬಡಿ ಆಟಗಾರರಾದ ರತನ್ ನಾಯ್ಕ ಹಾಗೂ ರಂಜಿತ್ ನಾಯ್ಕಗೆ ಎಂ.ಆರ್.ಎಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಎಂ.ಆರ್.ಎಸ್. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತೀಶ ನಾಯ್ಕ, ದಿನೇಶ ನಾಯ್ಕ ಮಾರಿಮನೆ, ಪಿ.ಎಲ್.ಡಿ ಬ್ಯಾಂಕ್ ಸದಸ್ಯ ಹರೀಶ ನಾಯ್ಕ, ಶ್ರೀಧರ ನಾಯ್ಕ ಅಧ್ಯಕ್ಷರು ರಾಜ್ಯ ಕಬ್ಬಡ್ಡಿ ರೆಫರೀ ಬೋರ್ಡ್ ಕನ್ವಿಯರ್, ಉಮೇಶ ನಾಯ್ಕ ,ಗುರು ಕೃಪಾ ಪತ್ತಿನ ಸಹಕಾರಿ ಸಂಘದ ಸದಸ್ಯ ಕುಮಾರ ನಾಯ್ಕ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.

error: