ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬೇಡಿಕೆ ಹೆಚ್ಚಾಗುತಲಿದ್ದು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬುಧವಾರ ತಂಝೀಮ್ ಕಚೇರಿಗೆ ಬಂದ ನೂರಕ್ಕೂ ಅಧಿಕ ಮಹಿಳೆಯರು ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಒಂದು ವೇಳೆ ತಂಝಿಮ್ ತನ್ನ ನಿರ್ಣಯದಿಂದ ಹಿಂದೆ ಸರಿಯದೆ ಇದ್ದಲ್ಲಿ ಚುನಾವಣೆಯಲ್ಲಿ ತಾವು “ನೋಟಾ” ಮತಕ್ಕೆ ಮೊರೆಹೋಗಬೇಕಾಗುತೆ ಎಂದು ಎಚ್ಚರಿಸಿದ್ದು ಈ ಕುರಿತಂತೆ ತಂಜೀಮ್ ಸಂಸ್ಥೆಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ.
ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿ ಕಣಕ್ಕಿಳಿಸುವ ಸಂಬAಧ ನಡೆಯುತ್ತಿರುವ ಚರ್ಚೆಯಲ್ಲಿ ಮಂಗಳವಾರದAದು ಸಭೆ ಸೇರಿದ ಸರ್ವ ಜಮಾಅತ್ ಪ್ರತಿನಿಧಿಗಳ ಸಭೆಯು ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂಬ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ವಿರುದ್ಧ ಹಲವು ಯುವಕರು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ಇದರ ನಡುವೆ ಬುಧವಾರ ಹೊಸ ಬೆಳವಣೆಗೆಯೊಂದಿಗೆ ಮಹಿಳೆಯರು ಕೂಡ ತಮ್ಮ ದ್ವನಿಯನ್ನು ಎತ್ತಿದ್ದಾರೆ.
ಭಟ್ಕಳ ಯುತ್ ಗರ್ಲ್ಸ್ ವಿಂಗ್ ಸಂಘಟನೆಯ ಆಯಿಶಾ ತುರ್ಫಾ ಅಜಾಯಿಬ್ ಎನ್ನುವವರು ತಂಝೀಮ್ ಸಂಸ್ಥೆಗೆ ಮನವಿಯನ್ನು ಸಲ್ಲಿಸಿದ್ದು ಮಾ.20ರಂದು ತಂಝೀಮ್ ತೆಗೆದುಕೊಂಡ ನಿರ್ಣಯವನ್ನು ಕಟುವಾಗಿ ಟೀಕಿಸಲಾಗಿದ್ದು ತಂಝೀಮ್ ತನ್ನ ನಿರ್ಣಯವನ್ನು ಮರುಪರಿಶೀಲಿಸುವುದರೊಂದಿಗೆ ಮುಸ್ಲಿಂ ಅಭ್ಯರ್ಥಿಯ ಪರ ನಿರ್ಣಯವನ್ನು ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ತಂಝೀಮ್ ನ ಕಾರ್ಯಕಾರಿ ಸಮಿತಿ ಹಾಗೂ ರಾಜಕೀಯ ಸಮಿತಿ (ಪೊಲಿಟಿಕಲ್ ಪೆನಲ್) ಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿಯವರ ಅನುಪಸ್ಥಿತಿಯಲ್ಲಿ ಮನವಿ ಪತ್ರ ಸ್ವೀಕರಿಸಿದ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ತಮ್ಮ ಬೇಡಿಕೆಯನ್ನು ಕಾರ್ಯಕಾರಿ ಸಬೆಯಲ್ಲಿ ಇಡುವುದಾಗಿ ತಿಳಿಸಿದರು.
60 ಸಾವಿರಕ್ಕೂ ಹೆಚ್ಚು ಮುಸ್ಲಿಮ್ ಮತದಾರರನ್ನು ಹೊಂದಿರುವ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವುದು ವಿಪರ್ಯಾಸವಾಗಿದೆ. ಈ ವರೆಗೆ ಶಾಸಕರಾಗಿದ್ದವರೆಲ್ಲರೂ ಕೂಡ ನಮ್ಮ ಯಾವುದೇ ಸಮಸ್ಯೆಯನ್ನು ಆಲಿಸಿಲ್ಲ. ಹಿಜಾಬ್, ಎನ್.ಆರ್.ಸಿ., ಸಿ.ಎಎ ವಿಷಯದಲ್ಲಿ ಮಾತನಾಡಿಲ್ಲ. ಕೋವಿಡ್ ನಂತಹ ಕಠಿಣ ಸ್ಥಿತಿಯಲ್ಲೋ ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ. ತಂಜೀA ಸಂಸ್ಥೆ ನಮಗೆ ಎಲ್ಲ ಸೌಲಭ್ಯಗಳನ್ನು ಮಾಡಿಕೊಟ್ಟಿದೆ. ಹಾಗಾಗಿ ಮುಸ್ಲಿಂ ಅಭ್ಯರ್ಥಿ ಶಾಸಕರಾದರೆ ಮುಸ್ಲಿಮ್ ಸಮುದಾಯದ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತದೆ ಎಂದು ಮನವಿ ಪತ್ರ ನೀಡಲು ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ