May 2, 2024

Bhavana Tv

Its Your Channel

ನಿನಾದ ಯುಗಾದಿ ಸಾಹಿತ್ಯ ಸಂಭ್ರಮದಲ್ಲಿ ರೇಷ್ಮಾ ಉಮೇಶ ಅವರ ಆತ್ಮ ನಿವೇದನೆ ಕೃತಿ ಲೋಕಾರ್ಪಣೆ

ಭಟ್ಕಳ- ಸಾಹಿತ್ಯ ಸಮಾಜಕ್ಕೆ ಒಂದು ಸಂದೇಶ ಕೊಡುವಂತಿರಬೇಕು. ಸಾಹಿತ್ಯ ಸ್ವಾಸ್ಥ ಸಮಾಜದ ನಿರ್ಮಾಣದಲ್ಲಿ ಅಮೂಲ್ಯ ಪಾತ್ರವಹಿಸುವಂತದ್ದು ಎಂದು ಶಿರಾಲಿ ಜನತಾ ವಿದ್ಯಾಲಯದ ಪ್ರಾಂಶುಪಾಲರಾದ ಅಮೃತ ಬಿ ರಾಮರಥ ಅವರು ನುಡಿದರು. ಅವರು ಭಟ್ಕಳದ ನಿನಾದ ಸಾಹಿತ್ಯ ಸಂಗೀತ ಸಂಚಯ ಇವರು ಬುಧುವಾರ ಜನತಾ ವಿದ್ಯಾಲಯ ಸಭಾಭವನದಲ್ಲಿ ಆಯೋಜಿಸಿದ್ದ ನಿನಾದ ಯುಗಾದಿ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ, ಲೇಖಕಿ ರೇಷ್ಮಾ ಉಮೇಶ ಅವರ ಆತ್ಮ ನಿವೇದನೆ ಕಥಾ ಸಂಕಲನವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಹೊಂಗೆಯ ನೆರಳು ಕವನ ಸಂಕಲನ ನಂತರ ಸುದೀರ್ಘ ಹನ್ನೆರಡು ವರ್ಷಗಳ ಅಂತರದಲ್ಲಿ ಪ್ರಕಟವಾದ ರೇಷ್ಮಾ ಉಮೇಶ ಅವರ ಆತ್ಮ ನಿವೇದನೆ ಕೃತಿ ಅತ್ಯಂತ ಸತ್ವ ಪೂರ್ಣವಾಗಿ ಬಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರದ ನೆರವಿನಿಂದ ಪರಿಷತ್ತುಗಳು ದೊಡ್ಡ ದೊಡ್ಡ ಸಂಘಟನೆಗಳು ಕಾರ್ಯಕ್ರಮವನ್ನು ಸುಲಭವಾಗಿ ಮಾಡುತ್ತದೆ.ಆದರೆ ಈರೀತಿ ಯಾರ ನೆರವು ಬಯಸದೆ ತಮ್ಮದೇ ಖರ್ಚಿನಲ್ಲಿ ಸದ್ದಿಲ್ಲದೆ ಸಾಹಿತ್ಯ ಸಂಗೀತ ಚಟುವಟಿಕೆ ಗಳನ್ನು ನಡೆಸುತ್ತಾ ಬರುವವರು ಬಹಳ ವಿರಳ.ಅಂತಹ ವಿರಳ ಸಂಘಟನೆಯಲ್ಲಿ ನಿನಾದ ಸಾಹಿತ್ಯ ಸಂಗೀತ ಸಂಚಯ ಮುಂಚೂಣಿಯಲ್ಲಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ನ್ಯಾಯವಾದಿಗಳು ಕಸಾಪ ನಿಕಟ ಪೂರ್ವ ಅಧ್ಯಕ್ಷ ಶಂಕರ ನಾಯ್ಕ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ ಹಿರಿಯ ಶಿಕ್ಷಕಿ ಲೇಖಕಿಯಾದ ರಾಜಂ ಹಿಚ್ಕಡ ಅವರು ಮಾತನಾಡಿ ಸಾಹಿತ್ಯ ಎಂದಾಕ್ಷಣ ಅದು ಕ್ರಾಂತಿಯೇ ಅಲ್ಲ. ಭಾವನಾತ್ಮಕವಾಗಿ ಹೆಚ್ಚು ಬೆಸೆಯುವಂತದ್ದು ನಿಜವಾದ ಸಾಹಿತ್ಯ. ಇಂತಹ ಭಾವನಾತ್ಮಕ ಬರವಣಿಗೆ ಸಾಹಿತ್ಯ ಮಾತ್ರ ಬಹುಕಾಲ ಉಳಿಯಬಲ್ಲದು. ಆತ್ಮ ನಿವೇದನೆ ಅಂತಹ ಸಾಲಲ್ಲಿ ನಿಲ್ಲಬಲ್ಲ ಕೃತಿಯಾಗಿದೆ ಹಾಗೂ ನಿನಾದ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು. ಲೇಖಕಿ ರೇಷ್ಮಾ ಉಮೇಶ ಅವರು ಆತ್ಮ ನಿವೇದನೆ ಕೃತಿಯ ಒಳಗಿರುವ ಕೆಲವು ಕಥೆಯು ಹುಟ್ಟಿದ ಸಂದರ್ಭವನ್ನು ಹಂಚಿಕೊAಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿನಾದದ ಸಂಚಾಲಕ ಲೇಖಕ ಉಮೇಶ ಮುಂಡಳ್ಳಿ ನಿನಾದದ ಮುಂದಿನ ಆಶೋತ್ತರಗಳ ಬಗ್ಗೆ ಮುಂದಿನ ದಿನಗಳಲ್ಲಿ ಆಯೋಜಿಸಲಿರುವ ಕಾರ್ಯಕ್ರಮಗಳ ಬಗ್ಗೆ ಪ್ರಸ್ಥಾಪಿಸಿದರು. ಮೊದಲಿಗೆ ನಿನಾದ ಉಮೇಶ ಪ್ರಾರ್ಥನೆ ಹಾಡಿದರು. ನಿನಾದ ಸಂಚಾಲಕಿ ರೇಷ್ಮಾ ಉಮೇಶ ಸ್ವಾಗತಿಸಿದರು,ಗೋಪಾಲ ನಾಯ್ಕ ವಂದಿಸಿದರು.ಶಿಕ್ಷಕಿ ರಮ್ಯಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಕವಿಗೋಷ್ಠಿ ನಡೆಯಿತು.ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಜಿ.ಟಿ.ನಾಯ್ಕ, ನಂದನ ನಾಯ್ಕ, ಪೂರ್ಣಿಮಾ ನಾಯ್ಕ,ಸುಮಲತಾ ನಾಯ್ಕ,ಶಂಕರ ನಾಯ್ಕ,ರೇಷ್ಮಾ ಉಮೇಶ, ಉಮೇಶ ಮುಂಡಳ್ಳಿ ತಮ್ಮ ಕವಿತೆ ವಾಚಿಸಿದರು.

error: