September 16, 2024

Bhavana Tv

Its Your Channel

ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡೆ ಮತ್ತು ಹೊಸ ಪ್ರಶಿಕ್ಷಣಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಆಗಮನ-2023’

ಭಟ್ಕಳ:- ಜೀವನದಲ್ಲಿ ಸಾಧನೆಗೈಯಲು ಬಯಕೆ, ಉತ್ಸಾಹ ಮತ್ತು ತಾಳ್ಮೆ ಅತ್ಯಗತ್ಯ ಎಂದು ಶಿಕ್ಷಣ ತಜ್ಞ ವಿ.ಜಿ ಹೆಗಡೆ ಹೇಳಿದರು. ತಾಲೂಕಿನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ವಾರ್ಷಿಕ ಕ್ರೀಡೆ ಮತ್ತು ಹೊಸ ಪ್ರಶಿಕ್ಷಣಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಆಗಮನ-2023’ ಉದ್ಘಾಟಿಸಿ ಮಾತನಾಡಿದ ಅವರು “ಇಂದಿನ ಜಾಗತೀಕರಣದ ಯುಗದಲ್ಲಿ ಆನ್ಲೆöÊನ್ ಮಾರುಕಟ್ಟೆಯಿಂದ ಕಸದಿಂದ ತಯಾರಿಸಿದ ವಸ್ತುಗಳಿಗೂ ಸಹ ಜಾಗತಿಕ ಮಾರುಕಟ್ಟೆ ಸೃಷ್ಟಿಯಾಗುತ್ತಿದ್ದು, ಶಿಕ್ಷಕರೂ ಸಹ ಇದರ ಲಾಭವನ್ನು ಪಡೆದುಕೊಳ್ಳಬೇಕು.” ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಹೊನ್ನಾವರದ ಉದ್ಯಮಿ ಡಾ. ಗಣೇಶ ಹೆಗಡೆ ಮಾತನಾಡಿ ”ಪಠ್ಯೇತರ ಚಟುವಟಿಕೆಗಳಿಂದ ಕ್ರೀಯಾಶಿಲತೆ ಮತ್ತು ನಾಯಕತ್ವದ ಗುಣ ಬೆಳೆಯುತ್ತದೆ” ಎಂದರು. ಭಟ್ಕಳ್ ಎಜುಕೇಶನ್ ಟ್ರಸ್ಟöನ ಡಾ.ಸುರೇಶ ವಿ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ವೀರೇಂದ್ರ ವಿ ಶಾನಭಾಗ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಿಕ್ಷಣಾರ್ಥಿ ವೀಣಾ ಸ್ವಾಗತಿಸಿದರು. ಗಾಯತ್ರಿ ಶೆಟ್ಟಿ ಹಾಗೂ ಮಮತಾ ನಿರೂಪಿಸಿದರು ಮತ್ತು ಕವನಾ ವಂದಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಕ್ಲಬ್ ಪದಾಧಿಕಾರಿಗಳನ್ನು ಮತ್ತು ಶೈಕ್ಷಣಿಕ ಸಾಧನೆಗೈದ ಪ್ರಶಿಕ್ಷಣಾರ್ಥಿಗಳನ್ನು ಗೌರವಿಸಲಾಯಿತು.

error: