May 3, 2024

Bhavana Tv

Its Your Channel

ಮೊಗೇರ ಸಮುದಾಯದಿಂದ ಭಟ್ಕಳ ತಾಲೂಕು ಆಡಳಿತದ ಎದುರು ಬೃಹತ್ ಪ್ರತಿಭಟನೆ

ಭಟ್ಕಳ: ಕಳೆದ ಒಂದು ವರ್ಷದಿಂದ ಧರಣಿ ನಡೆಸಿದರೂ ಸ್ಫಂದನೆ ನೀಡದ ಸರ್ಕಾರದ ವಿರುದ್ದ ಆಕ್ರೋಶಗೊಂಡ ಮೊಗೇರ ಸಮುದಾಯ ಗುರುವಾರ ಭಟ್ಕಳ ತಾಲೂಕು ಆಡಳಿತದ ಎದುರು ಬೃಹತ್ ಪ್ರತಿಭಟನೆ ನಡೆಸಿತು.

ಮೊಗೇರ ಸಮಾಜದವರಿಗೆ ಪರಿಶಿಷ್ಟ ಜಾತಿ ಸೌಲಭ್ಯ ನೀಡುವಂತೆ ಮಾರ್ಚ 23, 2022ರಂದು ಮೊಗೇರ ಸಮಾಜದಿಂದ ತಾಲೂಕಿನ ವೆಂಕಟಾಪುರದಿAದ ಬೃಹತ್ ಪ್ರತಿಭಟನೆ ಆರಂಭವಾಗಿ ನಂತರ ಅಲ್ಲಿಂದ ಸರ್ಕಲವರೆಗೆ ಬೃಹತ್ ಪಾದಯಾತ್ರೆ ನಡೆಸಿ ಪ್ರತಿಭಟನೆ ಧರಣಿ ಆರಂಭಿಸಿದ್ದರು. ಕಳೆದ  15 ವರ್ಷಗಳಿಂದ ಭಟ್ಕಳ ತಾಲೂಕಿನ ಮೊಗೇರ ಸಮುದಾಯ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ.  ಉಚ್ಚನ್ಯಾಯಲಯ, ಕೇಂದ್ರ ಪರಿಶಿಷ್ಟ ಜಾತಿ ಪಂಗಡ ಆಯೋಗ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಅದಕ್ಕೆ ತಡೆ ಹಾಕಿ ನಿಂತಿದೆ. ರಾಜ್ಯ ಸರ್ಕಾರದ ಈ ಧೋರಣೆ ವಿರುದ್ದ ನ್ಯಾಯ ದೊರೆಯುವವರೆಗೂ ಕಾನೂನಾತ್ಮಕ ಸೌಲಭ್ಯಕ್ಕಾಗಿ ಹೋರಾಟ ಒಂದು ವರ್ಷ ಮಾತ್ರವಲ್ಲ ನ್ಯಾಯ ದೊರೆಯುವವರೆಗೂ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು
ಸರ್ಕಾರವು ನಮ್ಮನ್ನು ಮೀನುಗಾರ ಮೊಗೇರರು  ಎಂದು ವಿಶೇಷವಾಗಿ ಪರಿಗಣಿಸಿ ನಮ್ಮನ್ನು ಪರಿಶಿಷ್ಟಜಾತಿಯವರಲ್ಲ ಎಂದು ಸಾರುತ್ತಿದೆ ಹೈಕೋರ್ಟಗಳು, ಸುಪ್ರೀಂಕೋರ್ಟ್,  ಆಯೋಗದ ಆದೇಶವನ್ನು ಕೂಡ ಸರಿಯಾಗಿ ಅರ್ಥೈಸಿಕೊಳ್ಳದೆ ನಮ್ಮ ಮೇಲೆ ಗದಾ ಪ್ರಹಾರವನ್ನು ಮಾಡುತ್ತಿದೆ ಸರ್ಕಾರದವರ ಈ ನಡೆಯಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತಿದೆ.ನಮ್ಮ ಸಮಾಜಕ್ಕೆ ನ್ಯಾಯವಾಗಿ ಸಿಗಬೇಕಾಗಿರುವ ಸೌಲಭ್ಯವನ್ನು ಅಧಿಕಾರಿವರ್ಗದವರು ಸರಿಯಾಗಿ ಒದಗಿಸಬೇಕು ಇಲ್ಲದಿದ್ದರೆ ನಾವು ನಮ್ಮ ಹೋರಾಟವನ್ನು  ಮುಂದುವರಿಸುತ್ತೇವೆ. ಕಳೆದ 6 ತಿಂಗಳ ಹಿಂದೆ ಸಮತಿಯೊಂದನ್ನು ರಚಿಸಿ ನಮ್ಮ ಕಿವಿ ಮೇಲೆ ಹೂವು ಇಡಲು ಸರ್ಕಾರ ಯತ್ನಿಸಿದೆ. ಇದೊಂದು ಅಪ್ರಯೋಜಕ ಸಮಿತಿಯಾಗಿದ್ದು ಸಮಿತಿಯ ತಿರ್ಮಾನ ನಮಗೆ ಅವಶ್ಯಕತೆ ಇಲ್ಲ. ನ್ಯಾಯಾಲಯ ನೀಡಿದ ತೀರ್ಪು ಸರ್ಕಾರ ಪಾಲನೆ ಮಾಡಲಿ ಎಂದು ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಂ ಕರ್ಕಿ ಹೇಳಿದರು.
ಮೊಗೇರ ಸಮಾಜದ ತಾಲೂಕಾಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿ ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತದೆ  2010ನೇ ಇಸವಿಯಲ್ಲಿ ಕೂಡ ಬಿಜೆಪಿ ಸರ್ಕಾರವಿದ್ದಾಗ ಮೊಗೇರ ಸಮಾಜದವರಿಗೆ ಜಾತಿ ಪ್ರಮಾಣ ಪತ್ರವನ್ನು ನಿರಾಕರಿಸಲಾಗಿತ್ತು. ಈಗಲೂ ಕೂಡ ಅದೇ ಪುನರಾವರ್ತನೆ ಆಗುತ್ತಿದೆ. ಮೊಗೇರ ಸಮಾಜದವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಅವರಿಗೆ ಸಿಗಬೇಕಾಗಿರುವ ಸೌಲಭ್ಯಗಳನ್ನು ಸಿಗದಂತೆ ಮಾಡಿ ವಂಚಿಸಲಾಗುತ್ತಿದೆ. ಮೊಗೇರ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವ ತನಕ ಈ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದರು.  

ಮೊಗೇರ ಸಮಾಜದ ಮುಖಂಡರಾದ ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಎಫ್ ಕೆ ಮೊಗೇರ, ಪ್ರಮುಖರಾದ ಶ್ರೀಧರ ಮೊಗೇರ, ಭಾಸ್ಕರ್ ಮೊಗೇರ, ಕೃಷ್ಣ ಮೊಗೇರ್,ಜಟಕಾ ಮೊಗೇರ, ಮುಕುಂದ ಮೊಗೇರ, ಕೃಷ್ಣ ಮೊಗೇರ, ಶ್ರೀಧರ ಮೊಗೇರ, ದೇವಿದಾಸ ಮೊಗೇರ ,ದಾಸಿ ಮೊಗೇರ ಸೇರಿದಂತೆ ಮೊಗೇರ್ ಸಮಾಜದ ಮುಖಂಡರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಹಸ್ರಾರು ಸಂಖ್ಯೆಯ ಮೊಗೇರ ಸಮಾಜದವರು ತಾಲೂಕುಆಡಳಿದ ಕಚೇರಿಯಲ್ಲಿ ಪ್ರತಿಭಟನೆ ಆರಂಭಸಿದ್ದರು. ಪ್ರತಿಭಟನೆ ಹೋರಾಟದ ಸ್ವರೂಪ ಪಡೆಯುತ್ತಿರುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಎಸ್.ಪಿ ವಿಷ್ಣುವರ್ಧನ್ ಸ್ಥಳಕ್ಕೆ ದೌಡಾಯಿಸಿದರು. ಸರ್ಕಾರ ಜಿಲ್ಲಾಡಳಿತ ತಮ್ಮ ಹಕ್ಕನ್ನು ಕಸಿಯುತ್ತಿದೆ. ನ್ಯಾಯಾಲಯ ನಮ್ಮ ಪರವಾದ ತೀರ್ಪು ನೀಡಿದರು ಅಧಿಕಾರಿಗಳು ನೀಡುತ್ತಿಲ್ಲ. ಅನ್ಯಾಯದ ವಿರುದ್ದ ನಮ್ಮ ಮನವಿ ಆಲಿಸಲು ಉಸ್ತುವಾರಿ ಸಚಿವರಾದ ಯುವ ಪೀಳಿಗೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ನಿಲುವನ್ನು ಖಂಡಿಸಿದರು. ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಮುಖಂಡರ ಸಭೆ ನಡೆಸಿ 15 ದಿನದ ಒಳಗೆ ಸಮಿತಿ ನಿರ್ದಾರವನ್ನು ಸರ್ಕಾರಕ್ಕೆ ತಿಳಸಲಿದ್ದು ಸೂಕ್ತ ತಿರ್ಮಾನ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮೊಗೇರ ಸಮಾಜದ ಅಹವಾಲು ಆಲಿಸಿ, ಮುಖಂಡರ ಸಭೆ ನಡೆಸಿ ಕಾರವಾರಕ್ಕೆ ತೆರಳಲು ಯತ್ನಿಸಿದ್ದ ಜಿಲ್ಲಾಧಿಕಾರಿಗಳ ಕಾರನ್ನು ಪ್ರತಿಭಟನಾಕಾರರು ತಡೆದರು. ಸ್ವಲ್ಪ ಸಮಯದ ಮಾತಿನ ವಾಗ್ವಾದ ನಡೆದು ಬಳಿಕ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿ ಕಾರವಾರಕ್ಕೆ ಮರಳಿದರು.

error: