September 16, 2024

Bhavana Tv

Its Your Channel

ತಂಝೀಮ್ ನೇತೃತ್ವದಲ್ಲಿ ನಡೆದ ಸರ್ವಜಮಾಅತ್ ಪ್ರತಿನಿಧಿಗಳ ಸಭೆ

ಭಟ್ಕಳ: ಮಾ.20 ರಂದು ತಂಝೀಮ್ ನೇತೃತ್ವದಲ್ಲಿ ನಡೆದ ಸರ್ವಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ ಭಟ್ಕಳದಲ್ಲಿ ತಂಝೀಮ್ ಸಂಸ್ಥೆಯು ಮುಸ್ಲಿಮ್ ಅಭ್ಯರ್ಥಿಯನ್ನು ಚುನಾವಣ ಕಣಕ್ಕಿಳಿಸುವುದರ ವಿರುದ್ಧ ನಿರ್ಣಯವಾಗಿದೆ ಹೊರತು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸುವುದರ ವಿರುದ್ಧ ಅಲ್ಲ ಎಂದು ತಂಝೀಮ್ ರಾಜಕೀಯ ಪೆನಲ್ ಸಂಚಾಲಕ ನ್ಯಾಯವಾದಿ ಇಮ್ರಾನ್ ಲಂಕಾ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸಂಜೆ ತಂಝೀಮ್ ಕಾರ್ಯಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ತಂಝೀಮ್ ಸಂಸ್ಥೆಯ ರಾಜಕೀಯ ಪೆನಲ್ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ತಂಝೀಮ್ ವತಿಯಿಂದಲೇ ಕಣಕ್ಕಿಳಿಸಬಹುದೆ ಎಂದು ತಂಝೀಮ್ ಸರ್ವಜಮಾಅತ್ ಸಮಿತಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಆ ಪ್ರಸ್ತಾವನೆಯ ಕುರಿತು ಚರ್ಚಿಸಲು ಕರೆದ ಸಭೆಯಲ್ಲಿ ತಂಝೀಮ್ ಸಂಸ್ಥೆಯಿAದ ಯಾವುದೇ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಕೂಡದು ಎಂದು ನಿರ್ಣಯಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮುಸ್ಲಿಮ್ ಅಭ್ಯರ್ಥಿಗೆ ಬೆಂಬಲ ನೀಡುವಲ್ಲಿ ತಂಝೀಮ್ ವಿರೋಧ ವ್ಯಕ್ತಪಡಿಸುತ್ತಿದೆ ಎಂಬAತೆ ಬಿಂಬಿಸಲಾಗುತ್ತಿದೆ ಇದು ಸರಿಯಲ್ಲ ಎಂದ ಲಂಕಾ, ಚುನಾವಣೆ ಘೋಷಣೆಯಾಗಿ ಕೊನೆಯ ದಿನದ ವರೆಗೂ ನಾವು ಯಾರನ್ನು ಬೆಂಬಲಿಸಬೇಕು, ಬಿಡಬೇಕು ಎಂಬ ನಿರ್ಣಯ ತೆಗೆದುಕೊಳ್ಳುತ್ತೇವೆ. ಸೆಕ್ಯುಲರ್ ಅಭ್ಯರ್ಥಿ ಮುಸ್ಲಿಮ್ ಆಗಿರಬಹುದು ಹಿಂದೂ ಆಗಿರಬಹುದು ಯಾರನ್ನೂ ಬೇಕಾದರೂ ನಾವು ಬೆಂಬಲಿಸಬಹುದು ಎಂದರು.
ಈ ಸಂದರ್ಭದಲ್ಲಿ ರಾಜಕೀಯ ಸಮಿತಿ ಉಪಸಂಚಾಲಕ ಅಝೀರ‍್ರಹ್ಮಾನ್ ರುಕ್ನುದ್ದೀನ್ ಉಪಸ್ಥಿತಿದ್ದರು.
ಇನಾಯತುಲ್ಲಾ ಶಾಬಂದ್ರಿಗೆ ತೆರೆದುಕೊಂಡ ರಾಜಕೀಯ ದ್ವಾರ:
ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ತಂಝಿಮ್ ನಿರ್ಣಯದಿಂದ ಜೆ.ಡಿ.ಎಸ್ ನ ಪ್ರಭಲ ಆಕಾಂಕ್ಷಿ ಇನಾಯತುಲ್ಲಾ ಶಾಬಂದ್ರಿಗೆ ಹಿನ್ನೆಡೆಯುಂಟಾಗಿತ್ತು. ಆದರೆ ಇಂದಿನ ತಂಝೀಮ್ ರಾಜಕೀಯ ಪೆನಲ್ ನೀಡಿದ ಸ್ಪಷ್ಟೀಕರಣದಿಂದಾಗಿ ಶಾಬಂದ್ರಿಯ ಚುನಾವಣೆಗೆ ಸ್ಪರ್ಧಿಸುವ ದ್ವಾರಗಳು ಮತ್ತೇ ತೆರೆದುಕೊಂಡಿದ್ದು ಜೆ.ಡಿ.ಎಸ್. ನಿಂದ ಟಿಕೆಟ್ ಪಡೆದು ತಮಗೆ ಬೆಂಬಲ ನೀಡುವಂತೆ ತಂಝೀಮ್ ಸಂಸ್ಥೆಗೆ ಮನವಿ ಮಾಡಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಹಾಗೂ ಭಟ್ಕಳದಲ್ಲಿ ಈ ಬಾರಿ ಮುಸ್ಲಿಮ್ ಅಭ್ಯರ್ಥಿ ಕಣಕ್ಕಿಳಿಸುವ ಯುವಕರು ಮತ್ತು ಸಾಮಾಜಿಕ ಜಾಲತಾಣಗಳು ನಡೆಸುತ್ತಿರುವ ಅಭಿಯಾನಕ್ಕೆ ಮತ್ತೇ ಜೀವ ಬಂದoತಾಗಿದೆ.

error: