ಭಟ್ಕಳ ನಗರ ಪ್ರದೇಶದ ಜಂಬರ್ ಮಠಕ್ಕೆ ಸಾಗುವ ಮಾರ್ಗದ ವಾರ್ಡನಂಬರ್ 10 ಮತ್ತು 11 ರ ರಸ್ತೆ ಸೇರಿದಂತೆ ಇತರೇ ಮೂಲ ಸೌಕರ್ಯಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡೆಬೇಕಾದಂತಹ ಪರಿಸ್ಥಿತಿ ಬಂದೊಗಿದೆ. ಇಲ್ಲಿನ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಇಲ್ಲಿನ ಸ್ಥಳಿಯ ನಿವಾಸಿಗಳು ಈ ಬಗ್ಗೆ ಎಷ್ಟೇ ಬಾರಿ ಈ ಬಗ್ಗೆ ಮನವಿಯನ್ನು ನೀಡಿದರು ಪುರಸಭೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಲವಾರು ಬಾರಿ ಸ್ಥಳಿಯಾಡಳಿತ ಹಾಗೂ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾದರೂ ಪ್ರಯೋಜನ ವಾಗಿಲ್ಲ , ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ಇಲ್ಲಿನ ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ವಾರ್ಡ ಸಂಬರ್ 10 ಮತ್ತು 11ರ ಸತಳಿಯರು ಈ ಅವ್ಯವಸ್ಥೆಯಿಂದ ಬೇಸತ್ತು ರಸ್ತೆಯಲ್ಲಿರುವ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಸಾಂಕೇತಿಕವಾಗಿ ಪ್ರತಿಭಟಿಸಿದರು.
ಈ ಬಗ್ಗೆ ವಾಹಿನಿಯೊಂದಿಗೆ ಸ್ಥಳಿಯರಾದ ಸಚಿನ್ ಮಹಾಲೆ ಮಾತನಾಡಿ ಜನರು ನಿತ್ಯ ಸಂಚಾರಕ್ಕೆ ಅನೂಕೂಲ ಕಲ್ಪಿಸುವ ರಸ್ತೆಯು ಕಳೆದ 5 -6 ವರ್ಷಗಳಿಂದ ಹಾಳಾಗಿದ್ದು ಈ ಬಗ್ಗೆ ನಗರೋತ್ಥಾನ ಯೊಜನೆಯಡಿ ಕಳೆದ 2 ತಿಂಗಳ ಹಿಂದೆ ಭೂಮಿ ಪೂಜೆ ಜರುಗಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕುಂದಾಪುರ ಮೂಲದ ಗುತ್ತಿಗೆದಾರು ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ಆರಂಭಿಸಲು ಮೀನ ಮೇಷ ಎಣಿಸುತ್ತಿದ್ದು ಈ ಬಗ್ಗೆ ಪುರಸಭೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ ಈ ಬಗ್ಗೆ ಪುರಸಭೆ ನೋಟಿಸ್ ನೀಡಿದ್ದರು ಕಾಮಗಾರಿ ಆರಂಭಿಸಿಲ್ಲ. ಸ್ಥಳಿಯರು ಗುತ್ತಿಗೆದಾರನನ್ನು ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ತಿಸಿದರು ಗುತ್ತಿಗೆದಾರನಿಂದ ಯಾವುದೇ ರೀತಿಯ ಸಮರ್ಪಕವಾದಂತಹ ಉತ್ತರ ದೊರೆಯದಾಗಿದೆ.
ಈ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ಕಬ್ಬಿಣದ ಸರಳುಗಳು ರಸ್ತೆಯಲ್ಲಿ ಎದ್ದು ನಿಂತಿದ್ದು ಇದರಿಂದ ವಾಹನ ಸವಾರರು ಗಾಡಿಗಳನ್ನು ಚಲಾಯಿಸುವುದು ಕಷ್ಟ ಎಂಬAತಾಗಿದೆ. ಅಲ್ಲದೆ ನೀರಿನ ಬಾವಿಗಳು ಅವೈಜ್ಣಾನಿಕವಾಗಿ ನಿರ್ಮಾಣಗೊಂಡ ಯುಜಿಡಿ ಅಂಡರ್ ಗ್ರೌಂಡ್ ಡ್ರಾಯನೇಜ್ ಕಾಮಗಾರಿಯಿಂದಾಗಿ ಈ ಭಾಗದ ಹಲವು ಮನೆಗಳು ನೀರಿನ ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ರಥೋತ್ಸವದ ಸಮಯದಲ್ಲಿ ದೇವರ ಪಲ್ಲಕ್ಕಿ ಉತ್ಸವವು ಈ ಮಾರ್ಗದಿಂದಲೇ ಸಂಚರಿಸುವುದಿದ್ದು. ಈ ಬಗ್ಗೆ ಪುರಸಭೆಯಾದರೂ ಗಮನಹರಿಸಿ ಶೀಘ್ರವಾಘಿ ಕಾಮಗಾರಿಯನ್ನು ನಡೆಸಿ ನಾಗರಿಕರಿಗೆ ಮೂಲ ಸೌಕರ್ಯಗಳನ್ನು ಆದಷ್ಟು ಶೀಘ್ರದಲ್ಲಿ ಒದಗಿಸುವಲ್ಲಿ ಪ್ರಮಾಣಿಕವಾದ ಪ್ರಯತ್ನ ನಡೆಸಲಿ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ವರೆಗೂ ಇ ಬಗ್ಗೆ ಮಾಹಿತಿ ಸಲ್ಲಿಸಲಾಗಿದದು ಇಲ್ಲಿಯ ತನಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಇಂದು ಸಾಂಕೆತಿಕವಾಗಿ ಹೊರಾಟ ಮಾಡಿದ್ದು ಮುಂದಿನದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೊಟಾಟ ನಡೆಸುವ ಬಗ್ಗೆ ಎಚ್ಚರಿಕೆಯನ್ನು ನೀಡಿದರು
ಈ ಸಂಧರ್ಭದಲ್ಲಿ ವಿನಾಯಕ್ ಶೇಟ್, ಶ್ರೀಕಾಂತ ಮೋಗೇರ , ಅಮಿತ ಮಹಾಲೆ,,ವಿಶ್ವನಾಥ ಶೇಟ್, ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ