May 10, 2024

Bhavana Tv

Its Your Channel

ಚಿಣ್ಣರ ಮೇಳ೨ ಬೇಸಿಗೆ ಶಿಬಿರ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ

ಭಟ್ಕಳ ; ಕಳೆದ ವರ್ಷ ಅತ್ಯಂತ ಯಶಸ್ವಿಯಾಗಿ ನಡೆದು ವಿದ್ಯಾರ್ಥಿ ಮತ್ತು ಪಾಲಕರಿಂದ ಪ್ರಶಂಸೆಗೆ ಒಳಪಟ್ಟ ಚಿಣ್ಣರ ಮೇಳ ಬೇಸಿಗೆ ಸಿಬಿರದ ಯಶಸ್ಸಿನಿಂದ ಪ್ರೇರೇಪಿತರಾಗಿ ಈ ವರ್ಷ ಮತ್ತೆ ಚಿಣ್ಣರ ಮೇಳ೨ ಬೇಸಿಗೆ ಶಿಬಿರವನ್ನು ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಅಸ್ಥೆಟಿಕ್ ಕಲ್ಷರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್‌ನ ಸುದರ್ಶನ ಭಟ್ಕಳ ಇವರ ನೇತ್ರತ್ವದಲ್ಲಿ ಆಯೋಜಿಸಲಾಗಿದ್ದು, ಥಿಯೇಟರ್(ನಟನೆ), ಕಿರುಚಿತ್ರ, ಸಂಗೀತ, ನೃತ್ಯ, ಚಿತ್ರಕಲೆ, ಮಣ್ಣಿನ ಮಾದರಿ, ಕ್ರಾಫ್ಟ್, ವಾದ್ಯಗಳ ತರಬೇತಿ, ಜನಪದ ಆಟಗಳು, ಚಂಡೆ, ಮುಖವಾಡ ತಯಾರಿಕೆ, ಜಾದು ಮುಂತಾದ ಕಲಾಪ್ರಕಾರಗಳಲ್ಲಿ ತರಬೇತಿ ನೀಡಲಾಗುವುದು ಎಂದು ಸರಕಾರಿ ನೌಕರರ ಸಂಘದರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಹೇಳಿದರು. ಅವರು ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಏಪ್ರಿಲ್ ೩ ರಿಂದಏಪ್ರಿಲ್ ೧೫ ರವರೆಗೆ ೬ ರಿಂದ ೧೫ ವರ್ಷದ ವಯೋಮಿತಿಯ ಮಕ್ಕಳಿಗಾಗಿ ನಡೆಯಲಿರುವ ಚಿಣ್ಣರ ಮೇಳ ೨ ಬೇಸಿಗೆ ಶಿಬಿರದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು. ದಿ ನ್ಯೂಇಂಗ್ಲೀಷ್ ಪಿ ಯುಕಾಲೇಜಿನ ಪ್ರಾಂಶುಪಾಲರಾದ ಡಾ.ವೀರೇಂದ್ರ ವಿ. ಶಾನಬಾಗ ಮಾತನಾಡುತ್ತರಾಷ್ಟç ಹಾಗೂ ಅಂತರಾಷ್ಟಿçÃಯ ಕಲಾವಿದರಿಂದ, ಕಾಮಿಡಿಕಿಲಾಡಿ ಮತ್ತು ಡ್ರಾಮಾ ಜುನಿರ‍್ಸ್ ಮೆಂರ‍್ಸ್ ಮುಂತಾದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಭಟ್ಕಳದ ವಿದ್ಯಾರ್ಥಿಗಳಿಗೆ ಒಂದು ಹೊಸ ಅವಕಾಶವನ್ನು ಸುದರ್ಶನ ಭಟ್ಕಳ ಒದಗಿಸಿಕೊಡುತ್ತಿದ್ದು, ಮಕ್ಕಳು ಟಿವಿಯ ಮುಂದೆ ಅಥವಾ ಮೊಬೈಲ್ ನೊಂದಿಗೆ ಸಮಯವನ್ನ ವ್ಯರ್ಥ ಮಾಡುವುದಕ್ಕಿಂತ ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಮುಖ್ಯಾಧ್ಯಾಪಕಿ ಶೈಲಜಾ ಪ್ರಭು,ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಶಿಕ್ಷಕ ರಾಘವೇಂದ್ರ ಕಾಮತ್ ಮತ್ತು ಅಸ್ಥೆಟಿಕ್‌ಕಲ್ಷರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್‌ನ ಪ್ರಸನ್ನ ಆಚರ‍್ಯ ಉಪಸ್ಥಿತರಿದ್ದರು.

error: