May 20, 2024

Bhavana Tv

Its Your Channel

ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿ ಶೇಕಡ 92.78% ಫಲಿತಾಂಶ ಸಾಧನೆ

ಹೊನ್ನಾವರ : 2023 – 24ನೇ ಸಾಲಿನ ಎಸ್. ಎಸ್. ಎಲ್ .ಸಿ .ಪರೀಕ್ಷೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿ ಶೇಕಡ 92.78% ಫಲಿತಾಂಶ ಸಾಧನೆ ಮಾಡಿದ್ದು ಹೆಮ್ಮೆಪಡುವ ವಿಷಯವಾಗಿದೆ. ಕುಮಾರಿ ಧನ್ಯಾ ತಿಮ್ಮಣ್ಣ ನಾಯ್ಕ 596/625,95.36% ಪಡೆದು ಪ್ರಥಮ ಸ್ಥಾನವನ್ನು, ಕುಮಾರಿ ಮೇಘಾ ರಾಮ ಗೌಡ, 582/625, 93.12% ಪಡೆದು ದ್ವಿತೀಯ ಸ್ಥಾನವನ್ನು, ಕುಮಾರಿ ಬಿಂದು ಗೋವಿಂದ ನಾಯ್ಕ 571/625,91.36% ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಈ ಬಾರಿ 97 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಾಜರಾಗಿ ಅತ್ಯುತ್ತಮ ಶ್ರೇಣಿಯಲ್ಲಿ 7 ವಿದ್ಯಾರ್ಥಿಗಳು,63 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

error: