May 21, 2024

Bhavana Tv

Its Your Channel

ಸ್ವರ ಸಂಗಮ ೨೦೨೩ – ಸಂಗೀತ ಕಾರ್ಯಕ್ರಮ

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ ೨೫ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಹಾಂಗ್ಯೋ ಐಸಕ್ರೀಮ್ಸ್ ಸಹಭಾಗಿತ್ವದಲ್ಲಿ ದಿ. ೨೯.೦೩.೨೦೨೩ ಬುಧವಾರ ರಾತ್ರಿ ೯ ಘಂಟೆಗೆ ಭಟ್ಕಳದ ವಿ.ವಿ.ರಸ್ತೆಯಲ್ಲಿನ ವಡೇರ ಮಠದ ಮೈದಾನದಲ್ಲಿ ಹಾಂಗ್ಯೋ ಸ್ವರ ಸಂಗಮ-೨೦೨೩ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪುಣೆಯ ಪ್ರಖ್ಯಾತ ಸಂಗೀತ ವಿದ್ವಾಂಸ ನಾಗೇಶ ಅಡಗಾಂವಕರ ರವರ ನೇತೃತ್ವದಲ್ಲಿ ನಡೆಯಲಿರುವ ಈ ಸಂಗೀತ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ಕಲಾವಿದರಾದ ವಿಘ್ನೇಶ ಪ್ರಭು, ಸುರಜ ಗಂಗೊಳ್ಳಿ, ಹೇಮಂತ ಭಗವತ, ವಾಸುದೇವ ಕಿಣಿ, ಸಂಪ್ರೀತ ಶೆಣೈ ಮುಂತಾದವರು ಸಾಥ ನೀಡಲಿದ್ದಾರೆ.
ಈ ವಿಶೇಷ ಸಂಗೀತಕಾರ್ಯಕ್ರಮಕ್ಕೆ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: