September 16, 2024

Bhavana Tv

Its Your Channel

ದಾಖಲೆ ಇಲ್ಲದೆ ಬೆಳ್ಳಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

ಭಟ್ಕಳ: ದಾಖಲೆ ಇಲ್ಲದೆ ಬೆಳ್ಳಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಾಹನ ಸಮೇತ ಭಟ್ಕಳ ಶಹರಠಾಣೆ ಪೊಲೀಸರು ಭಾನುವಾರ ಭಟ್ಕಳ ಪುರವರ್ಗ ಚೆಕ್ ಪೋಸ್ಟನಲ್ಲಿ ವಶಕ್ಕೆ ಪಡೆದಿದ್ದಾರೆ.
ಉಡುಪಿ ತಾಲೂಕಿನ ಇಂದ್ರಳ್ಳಿ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಉಮೇಶ ಜನಾರ್ಧನ ಆಚಾರ್ಯ ಹಾಗೂ ಉಡುಪಿಯ ಅಂಬಾಬಾಗಿಲು ಕುಕ್ಕಂಜೆ ನಿವಾಸಿ ರವಿ ಶೀನಾ ಆಚಾರ್ಯ ಬಂಧಿತರು. ಇವರು ಉಡುಪಿಯಿಂದ ಹೊನ್ನಾವರದ ಕಡೆಗೆ ೭.೫ಲಕ್ಷ ಮೌಲ್ಯದ ೧೦ಕೆಜಿ ೮೨೦ ಗ್ರಾಂ ತೂಕದ ಬೆಳ್ಳಿಯನ್ನು ದಾಖಲೆ ಇಲ್ಲದೆ ಸಾಗಿಸುತ್ತಿದ್ದರು. ಪುರವರ್ಗ ಚೆಕ್‌ಪೋಸ್ಟನಲ್ಲಿ ಪೊಲೀಸರು ತಪಾಸಣೆ ನಡೆಸುವಾಗ ಸಂಶಯಾಸ್ಪದವಾಗಿ ಸಿಕ್ಕಿದ್ದರಿಂದ ಭಟ್ಕಳ ಶಹರ ಪೊಲೀಸರು ಇವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಶಹರ ಠಾಣೆಯ ಪಿ.ಎಸ್.ಐ ಯೋಗೇಶ ತನಿಖೆ ನಡೆಸುತ್ತಿದ್ದಾರೆ.

error: