September 16, 2024

Bhavana Tv

Its Your Channel

ಮಿಸ್ಟರ್ ಉತ್ತರಕನ್ನಡ -೨೦೨೩: ನೋಡುಗರ ಗಮನ ಸೆಳೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

ಭಟ್ಕಳ : ತಾಲ್ಲೂಕಿನ ಸಾಗರ ರಸ್ತೆಯ ಆನಂದ ಆಶ್ರಮ ಶಾಲೆ ಮೈದಾನ ದಲ್ಲಿ ಭಟ್ಕಳ ಬ್ರದರ್ಸ್ ಹಾಗೂ ಉತ್ತರ ಕನ್ನಡ ಜಿಲ್ಲಾ ದೇಹ ದಾರ್ಢ್ಯ ಸಂಘದ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು
ಸ್ಪರ್ಧೆಯಲ್ಲಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನ ೬೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಏಳು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ .”ಮಿಸ್ಟರ್ ಉತ್ತರ ಕನ್ನಡ – ೨೦೨೩” ಯಾಗಿ ಹೋರ ಹಮ್ಮಿದ ಶಂಕರ್ ಹಳ್ಳೆರ್ ಹೊನ್ನಾವರ, ರನ್ನರ್ ಅಪ್ ಆಗಿ ಹಳಿಯಾಳದ ಪ್ರಾನ್ಸಿಸ್ ನಾಯ್ಕ, ಬೆಸ್ಟ್ ಪೊಸರ್ ಆಗಿ ಫ್ರೆಂಡ್ಸ್ ಜಿಮ್ ಭಟ್ಕಳ ಸದಸ್ಯರಾದ ನಿತಿನ್ ಚಂದ್ರ ನಾಯ್ಕ ಆಯ್ಕೆಯಾಗಿದ್ದಾರೆ.

೫೫ ಕೆಜಿ ವಿಭಾಗದಲ್ಲಿ ಹೊನ್ನಾವರದ ಲೋಹಿತ ಗೌವಡ ಪ್ರಥಮ, ೬೦ ಕೆಜಿ ವಿಭಾಗದಲ್ಲಿ ಹೊನ್ನಾವರದ ಮಾರುತಿ ಎಂ.ಎಚ್.ಗೌಡ ಪ್ರಥಮ, ೬೫ ಕೆಜಿ ವಿಭಾಗದಲ್ಲಿ ಶಿರಸಿಯ ಮಂಜುನಾಥ ಎನ್ ಬೋರಕರ್ ಪ್ರಥಮ, ೭೦ಕೆಜಿ ವಿಭಾಗದಲ್ಲಿ ಹಳಿಯಾಳದ ಪ್ರಾನ್ಸಿಸ್ ನಾಯ್ಕ,ಪ್ರಥಮ,೭೫ಕೆಜಿ ಕುಮಟಾದ ಮೋಶಿನ್ ಶೇಖ್,ಪ್ರಥಮ ೮೦ಕೆಜಿ ವಿಭಾಗದಲ್ಲಿ ಹೊನ್ನಾವರದ ಶಂಕರ್ ಹೊನ್ನಾವರ ಪ್ರಥಮ,೮೦ ಕೆ. ಜಿ ಗಿಂತ ಮೇಲ್ಪಟ್ಟ ವಿಭಾಗದಲ್ಲಿ ಕುಮಾರ ನಾಯ್ಕ ಪ್ರಥಮ ಸ್ಥಾನ ಗಳಿಸಿದ್ದಾರೆ.

ಯುವಕರು ತಮ್ಮ ಕಟ್ಟು ಮಸ್ತಾದ ದೇಹ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಸ್ಪರ್ಧೆಯ ತೀರ್ಪುಗಾರರಾಗಿ ಉತ್ತರ ಕನ್ನಡ ಜಿಲ್ಲಾ ದೇಹ ದಾರ್ಢ್ಯ ಸಂಘದ ಅಧ್ಯಕ್ಷರಾದ ಎಸ್ ಡಿ ನಾಯ್ಕ್, ರಾಜ್ಯ ದೇಹ ದಾರ್ಢ್ಯಯ ಸಂಘದ ಪ್ರಧಾನ ಕಾರ್ಯದರ್ಶಿಯಾದ ಜಿಡಿ ಭಟ್ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮವನ್ನು ಖ್ಯಾತ ವಕೀಲರಾದ ವಿಕ್ಟರ್ ಗೋಮ್ಸ್ ಉದ್ಘಾಟಿಸಿದರು,ತಾಲೂಕ ದೇಹ ದಾರ್ಢ್ಯ ಸಂಘದ ಗೌರವಾಧ್ಯಕ್ಷರಾದ ಅಕ್ಷಯ್ ನಾರಾಯಣ್ ಉಪಾಧ್ಯಕ್ಷರಾದ ನಜೀರ್ ಖಾಸಿಂ ಜಿ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ್ ನಾಯ್ಕ್ ಪ್ರಕಾಶ್ ನಾಯ್ಕ್ ಉದ್ಯಮಿಗಳಾದ ನೇನ್ ಸಿಂಗ್ ಉಪಸ್ಥಿತರಿದ್ದರು.

error: