September 16, 2024

Bhavana Tv

Its Your Channel

ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯಿಂದ ಕೊಲೆ ಬೆದರಿಕೆ: ದೂರು ದಾಖಲು

ಭಟ್ಕಳ: ತಾಲೂಕಿನ ಆರೋಗ್ಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಸ್ಥಳೀಯ ಯುವಕನೊರ್ವ ಅವಾಚ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಲ್ಲಿಂದ ಪರಾರಿಯಾದ ಘಟನೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಪಟ್ಟಣದ ಹನುಮಾನನಗರ ನಿವಾಸಿ ಸಂಜಯ ಯಶೋಧರ ಪೂಜಾರಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮೇಲೆ ಹಲ್ಲೆ ನಡೆಸಿದ ಆರೋಪಿ. ಭಾನುವಾರ ಮದ್ಯಾಹ್ನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಪಘಾತಗೊಂಡ ವ್ಯಕ್ತಿಯೊರ್ವ ಚಿಕಿತ್ಸೆಗಾಗಿ ಆಗಮಿಸಿದ್ದ. ಅವನ ಚಿಕಿತ್ಸೆ ಪೂರ್ಣಗೊಂಡಿದ್ದು ಅವನನ್ನು ಶೂಷ್ರೂಷಕಿಯರು ಆರೈಕೆ ಮಾಡುತ್ತಿದ್ದರು. ಅಷ್ಟರಲ್ಲಿ ಆಸ್ಪತ್ರೆಗೆ ಬಂದ ಆರೋಪಿ ಮೊದಲು ಔಷಧಿ ವಿತರಣೆ ಮಾಡುವ ಯುವತಿ ಮೇಲೆ ಏರಿದ್ದಾನೆ. ಬಳಿಕ ಒಳಗೆ ನುಗ್ಗಿ ಶೂಷ್ರೂಷಕಿಯನ್ನು ನಿಂದಿಸಿ ಹಲ್ಲೆಗೆ ಮುಂದಾಗಿದ್ದ. ಅದನ್ನು ಕೇಳಿದ ವೈದ್ಯ ಡಾ. ಲಕ್ಷಿö್ಮÃಶ ನಾಯ್ಕ ಮೇಲೂ ಹಲ್ಲೆ ನಡೆಸಲೂ ಯತ್ನಿಸಿ ಆಸ್ಪತ್ರೆಯಲ್ಲಿ ಬೀತಿಯ ವಾತವರಣವನ್ನೆ ನಿರ್ಮಿಸಿದ್ದ. ಬಳಿಕ ಅಲ್ಲಿದ್ದ್ ಸಿಬ್ಬಂದ ತಾಲೂಕು ಆರೋಗ್ಯ ವೈದ್ಯಾಧಿಕಾರಿಯಾಗಿರುವ ಡಾ. ಸವಿತಾ ಕಾಮತ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಡಾ. ಸವಿತಾ ಕಾಮತ ಅವರ ಮೇಲೆ ಏರಗಲು ಹೋಗಿ ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಆಸ್ಪತ್ರೆಯ ಆವರಣದಲ್ಲಿ ವೈದ್ಯರ ಕರ್ತವ್ಯಕ್ಕೆ ಅಡ್ಡಿಯಾಗಿದ್ದು ರೋಗಿಗಳಿಗೂ ತೊಂದರೆ ಅನುಭವಿಸಿದರು. ಇವೆಲ್ಲಾ ಘಟನೆಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

error: