ಭಟ್ಕಳ: ತಾಲೂಕಿನ ಹಿಂದೂ ಹೋರಾಟಗಾರ ಗೋವಿಂದ ನಾಯ್ಕ ಅವರ ಹೋರಾಟಕ್ಕೆ ೩೦ವರ್ಷ ಸಂದ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಬೃಹತ್ ಬೈಕ್ ರ‍್ಯಾಲಿ ನಡೆಸಿ ಅವರ ಮನೆಗೆ ತೆರಳಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಹಳಿ ನೀಡಿ ಗೌರವಿಸಲಾಯಿತು.
ತಾಲೂಕಿನ ಮುರ್ಡೇಶ್ವರದಿಂದ ಹೋರಟ ಬೃಹತ್ ಬೈಕ ರ‍್ಯಾಲಿ ಸಾರದಹೊಳೆ, ಶಿರಾಲಿ, ವೆಂಕಟಾಪುರದ ಮೂಲಕ ಭಟ್ಕಳದ ಹಮುಮಾನನಗರದ ಅವರ ಮನೆಗೆ ತಲುಪಿತು.ನೂರಾರು ಯುವಕರ ಪಡೆ ಬೈಕ್ ಮುಖಾಂತರ ಅವರ ಮನೆಗೆ ತೆರಳಿ ಅವರನ್ನು ಗೌರವಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಹಿಂದೂ ಹೋರಾಟಗಾರ ಗೋವರ್ದನ ನಾಯ್ಕ, ೧೯೯೨ರಲ್ಲಿ ಭಟ್ಕಳದ ಸ್ಥಿತಿ ಈಗಿನಂತಿರಲಿಲ್ಲ. ಅಂದು ಮನೆಯಿಂದ ಹೋರಹೋದವರು ಮತ್ತೆ ಮನೆಗೆ ಮರಳುತ್ತಾರೆ ಎನ್ನುವ ಯಾವುದೆ ಭರವಸೆ ಇರಲಿಲ್ಲ. ಅಂದು ಭಟ್ಕಳದ ಹಿಂದೂ ಜಾಗರಣ ವೇದಿಕೆ ಹಿಂದೂಗಳ ರಕ್ಷಣೆಗೆ ಪಭತೊಟ್ಟು ನಿಂತಿದ್ದು ಅದರ ಫಲ ಇಂದು ನಾವೆಲ್ಲರೂ ಸುಭಿಕ್ಷೆಯಿಂದ ದಿನ ಕಳೆಯುವಂತಾಗಿದೆ. ಭಟ್ಕಳದಲ್ಲಿ ಎನ್.ಜಿ.ಕೊಲ್ಲೆ, ನರೇಂದ್ರ ನಾಯಕ, ಸುರೇಂದ್ರ ಶ್ಯಾನಭಾಗ, ಎ.ಡಿ ಖಾರ್ವಿ, ಗೋವಿಂದ ಖಾರ್ವಿ, ರಾಮದಾಸ ಖಾರ್ವಿ, ವಿವೇಕ ಭಟ್, ಲಕ್ಷö??ಣ ನಾಯ್ಕ, ಜಿ.ಪಿ. ನಾಯ್ಕ, ತಿಮ್ಮಪ್ಪ ನಾಯ್ಕ ಮಂಜಪ್ಪ ನಾಯ್ಕ ಮಾಸ್ತಪ್ಪ ನಾಯ್ಕ, ಪುರುಷೊತ್ತಮ ಶ್ಯಾನಭಾಗ ಕುಟುಂಬ, ಹನುಮಂತ ಶ್ಯಾನಭಾಗ, ಗೊರ್ಟೆ ಬಾಬು ಸೇರಿ ಅನೇಕ ಹಿಂದೂ ಮುಖಂಡರೊAದಿಗೆ ಭಟ್ಕಳದ ಹಿಂದೂ ಫೈರ್ ಬ್ರಾಂಡ್ ಗೋವಿಂದ ನಾಯ್ಕ ನೇತ್ರತ್ವದಲ್ಲಿ ಹೋರಾಟದ ಪರಿಣಾಮ ಗಲಭೆ ಶಾಂತಗೊಳ್ಳುವAತಾಯಿತು. ಅಂದಿನ ದಿನದ ಘಟನೆಗಳನ್ನು ಸವಿಸ್ತಾರವಾಗಿ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಗೋವಿಂದ ನಾಯ್ಕ ಮಾತನಾಡಿ ಅಂದು ಹೋರಾಟಕ್ಕೆ ಗೋವಿಂದ ನಾಯ್ಕ ಮಾತ್ರವಲ್ಲದೆ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಅಂದು ಹೋರಾಟದಲ್ಲಿ ತಮ್ಮನ್ನು ತಾವು ಸಮಿರ್ಪಿಸಿಕೊಂಡಿದ್ದರು. ಹತ್ತಾರು ಕೇಸುಗಳನ್ನು ಮೈಲೇಲೆ ಎಳೆದುಕೊಂಡಿದ್ದರು. ರಾಜ್ಯದ ಹಲವು ಜೈಲುವಾಸಗಳನ್ನು ಅನುಭವಿಸುವಂತಾಯಿತು. ಹಿಂದುತ್ವಕ್ಕೆ ಧಕ್ಕೆಯಾದಗಲೆಲ್ಲಾ ಈ ಹೋರಾಟ ನಿರಂತರವಾಗಿ ಮುಂದುವರೆದಿದೆ. ಹರನ ಮತ್ತು ಜನರ ಆಶೀರ್ವಾದದಿಂದ ಇಂದು ನಿಮ್ಮೆಲ್ಲರನ್ನು ನೋಡುವಂತ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಮುಂಡಳ್ಳಿ ರಾಜು ನಾಯ್ಕ ಮಾತನಾಡಿ ಹಿಂದುತ್ವದ ಸೋಗು ಹಾಕಿಕೊಂಡವರು, ಕೇಸರಿ ಶಾಲು ಹಾಕಿಕೊಂಡವರಿ0ದ ಇಂದು ನಾವು ಹಿಂದುತ್ವದ ಪಾಠ ಕಲಿಯಬೇಕಾಗಿರುವದು ನಮ್ಮ ದೌರ್ಬಾಗ್ಯ ಎಂದರು.ಉದಯ ನಾಯಕ ಮುರ್ಡೇಶ್ವರ,ನಾಗೇಂದ್ರ ಶೆಟ್ಟಿ, ರವಿ ಜಾಲಿ, ತಿಮ್ಮಪ್ಪ ಕೊಣಿಮನೆ, ರಾಘು ನಾಯ್ಕ ಮುಟ್ಟಳ್ಳಿ ಸೇರಿ ಇತರರು ಸಭೆಯಲ್ಲಿ ಇದ್ದರು
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ