ಭಟ್ಕಳ ತಾಲೂಕಿನ ಶಿರಾಲಿಯ ಸಾರದಹೊಳೆ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವರ ಪ್ರಥಮ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮವು ಏಪ್ರಿಲ್ ೪ ರಿಂದ ೬ ರ ತನಕ ನಡೆಯಲಿದೆ ಎಂದು ಮಾವಳ್ಳಿ ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ಎಮ್ ನಾಯ್ಕ ತಿಳಿಸಿದರು.
ಅವರು ಶಿರಾಲಿ ಸಾರದಹೊಳೆಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸಾರದಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿನ ನಮ್ಮ ಶ್ರೀ ಕ್ಷೇತ್ರ ಹಳೇ ಕೋಟೆ ಹನುಮಂತ ದೇವಸ್ಥಾನವು ವಿಜ್ರಂಭಣೆಯಿAದ ಪ್ರತಿಷ್ಠಾಪನೆಗೊಂಡು ಏಪ್ರಿಲ್ ೬ ಕ್ಕೆ ಒಂದು ಸಂವತ್ಸರವು ತುಂಬಿರುತ್ತದೆ. ಇದರ ಪ್ರಥಮ ವರ್ಷದ ವರ್ಧಂತ್ಯೋತ್ಸವವು ಏಪ್ರಿಲ್ ೪ ಮಂಗಳವಾರದಿAದ ಏಪ್ರಿಲ್ ೬ ಗುರುವಾರದ ತನಕ ನಡೆಯಲಿದೆ. ಏಪ್ರಿಲ್ ೪ ರಂದು ಪರಮಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನೆರವೆರಲಿದೆ. ಅಂದು ಶ್ರೀ ಹನುಮಂತ ದೇವರ ಏಕೋತ್ತರ ಸಹಸ್ರ ಕಳಸಾರಾಧನಾ ಕುಂಭಾಭೀಷೇಕ ವಾರ್ಷಿಕ ಮಹೋತ್ಸವವು ಪಾಂಚರಾತ್ರಗಮೋಕ್ತ ತ್ರಿದಿನ ಸಂಕಲ್ಪ ಪೂರ್ವಕ ವೇದ ಮೂರ್ತಿ ಆಗಮ ಪ್ರವೀಣ ಶ್ರೀ ಲಕ್ಷ್ಮೀಪತಿ ಗೋಪಾಲಾಚಾರ್ಯ ಆಸ್ಥಾನ ಪುರೋಹಿತರು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನA, ಕನ್ಯಾಡಿ ಧರ್ಮಸ್ಥಳ ಇವರ ಪೌರೋಹಿತ್ಯದಲ್ಲಿ ನೆರವೇರಲಿದೆ ಎಂದರು.
ಏಪ್ರಿಲ್ ೪ ರಂದು ಸಂಜೆ ೫ ಗಂಟೆಗೆ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ ೯ ಗಂಟೆಗೆ ವೇದಿಕೆ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಲಿದೆ. ಏಪ್ರಿಲ್ ೫ ರಂದು ಬೆಳಿಗ್ಗೆ ೬ ಗಂಟೆಗೆ ವೈದಿಕ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ೧ ಗಂಟೆಗೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೪.೩೦ ಗಂಟೆಗೆ ಶ್ರೀ ಗುರುಗಳ ಮೆರವಣಿಗೆಯು ದೇವಸ್ಥಾನ ಮಹಾದ್ವಾರದಿಂದ ಪೂರ್ಣಕುಂಭ ಸ್ವಾಗತ ಹಾಗೂ ಚಂಡೆ ವಾದನದೊಂದಿಗೆ ಶ್ರೀ ಕ್ಷೇತ್ರಕ್ಕೆ ಗುರುಗಳ ಪುರಪ್ರವೇಶ ಹಾಗೂ ಮಹಾ ಪೂಜೆ ನಡೆಯಲಿದೆ. ಸಂಜೆ ೬ ಗಂಟೆಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಜೊತೆಗೆ ವೈದಿಕ ಕಾರ್ಯಕ್ರಮಗಳು ನಡೆದು ಮಹಾಮಂಗಳಾರತಿ ನಡೆಯಲಿದೆ. ರಾತ್ರಿ ೮ ಗಂಟೆಯಿAದ ೧೦ ಗಂಟೆಯ ತನಕ ಮಹಾ ಅನ್ನ ಸಂತರ್ಪಣೆ ಹಾಗೂ ರಾತ್ರಿ ೯ ಗಂಟೆಗೆ ವೇದಿಕೆ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಏಪ್ರಿಲ್ ೬ ರಂದು ಬೆಳಿಗ್ಗೆ ೬ ಗಂಟೆಗೆ ವೈದಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೯ ಗಂಟೆಗೆ ೧೧ ಗಂಟೆಯ ತನಕ ೧೦೦೧ ಕಳಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ೧೨ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ೧೨.೩೦ ಕ್ಕೆ ಗುರು ಪೂಜೆ ಹಾಗೂ ಗುರುಗಳಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ೧ ಗಂಟೆಯಿAದ ೩ ಗಂಟೆಯ ತನಕ ಮಹಾ ಅನ್ನ ಸಂತರ್ಪಣೆ, ಸಂಜೆ ೪ ಗಂಟೆಗೆ ಶ್ರೀ ದೇವರ ಪಲ್ಲಕ್ಕಿ ಶ್ರೀ ಕೋಟೆ ಜಟಗನ ಕ್ಷೇತ್ರಕ್ಕೆ ತೆರಳಲಿದೆ. ರಾತ್ರಿ ೯ ಗಂಟೆಗೆ ವೇದಿಕೆ ಹಾಗೂ ಸಮಾರೋಪ ಸಮಾರಂಭ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.
ಈ ಎಲ್ಲಾ ಕಾರ್ಯಕ್ರಮಕ್ಕೆ ಸಮಾಜದ ಬಾಂದವರು ಹಾಗೂ ವಿವಿಧ ಸಮಾಜದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಜೆ. ನಾಯ್ಕ, ನಾಮಧಾರಿ ಸಮಾಜದ ಅಭಿವೃದ್ಧಿ ಸಂಘದ ಗೌರ ಕಾರ್ಯದರ್ಶಿ ಜೆ.ಜೆ. ನಾಯ್ಕ, ಸದಸ್ಯರಾದ ರಾಮಚಂದ್ರ ನಾಯ್ಕ, ರವೀಂದ್ರ ವಿ.ನಾಯ್ಕ, ಚಂದ್ರಕಾAತ ಎಲ್. ನಾಯ್ಕ, ಲಕ್ಷ್ಮಣ ನಾಯ್ಕ ಸೇರಿದಂತೆ
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಹಾಗೂ ನಾಮಧಾರಿ ಸಮಾಜದ ಪ್ರಮುಖ ಮುಖಂಡರು ಇದ್ದರು.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ