May 21, 2024

Bhavana Tv

Its Your Channel

ಮೊಗೇರರಿಗೆ ಧರಣಿ ಕೈಬಿಡುವಂತೆ ಚುನಾವಣಾಧಿಕಾರಿ ಸೂಚನೆ: ಧರಣಿ ನಿರತರಿಂದ ಆಕ್ಷೇಪ

ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಮೊಗೇರ ಸಮಾಜದವರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಧರಣಿ ಮುಂದುವರೆಸಿದ0ತೆ ಚುನಾವಣಾಧಿಕಾರಿ ಮಮತಾ ದೇವಿ ತಾಕಿತ್ತು ಮಾಡಿದ್ದಾರೆ.
ಈ ಕುರಿತು ಸಮಾಜದ ಮುಖಂಡರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಮೊದಲು ಧರಣಿ ನಡೆಸುತ್ತಿರುವ ಸ್ಥಳವನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಧರಣಿ ನಿರತರು, ನಾವು ಸಂವಿಧಾನಾತ್ಮಕವಾಗಿಯೇ ಕಳೆದ ಒಂದು ವರ್ಷದಿಂದ ಧರಣಿ ನಡೆಸುತ್ತಿದ್ದೇವೆ. ನಮ್ಮಿಂದ ತೊಂದರೆಯಾಗದAತೆ ನೋಡಿಕೊಂಡಿದ್ದೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ನಮ್ಮ ಹೋರಾಟದಿಂದ ಚುನಾವಣೆ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗ ಧರಣಿ ನಡೆಯುತ್ತಿರುವ ಸ್ಥಳದಲ್ಲಿ ನಿಷೇಧ ಹೇರಿದರೆ ನಾವು ಅಲ್ಲಿಂದ ಆಚೆ ರಸ್ತೆಯ ಅಂಚಿನಲ್ಲಿ ಕುಳಿತು ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಎಲ್ಲಿಯೇ ಆಗಲಿ ಮತ್ತೆ ಧರಣಿ, ಹೋರಾಟ ನಡೆಸುವುದಾದರೆ ಮೇಲಾಧಿಕಾರಿಗಳಿಂದ ಅನುಮತಿಯನ್ನು ಪಡೆದು ಮುಂದುವರೆಯಬಹುದು. ಯಾವುದೇ ಕಾರಣಕ್ಕೂ ಚುನಾವಣಾಧಿಕಾರಿಯಾಗಿ ನಾನು ಅವಕಾಶ ನೀಡುವುದಿಲ್ಲ ಎಂದು ಭಟ್ಕಳ ತಾಲೂಕು ಚುನಾವಣಾಧಿಕಾರಿ ಮಮತಾದೇವಿ ಜಿ.ಎಸ್ ತಿಳಿಸಿದ್ದಾರೆ.
ಇದಕ್ಕೂ ಚುನಾವಣಾಧಿಕಾರಿಗಳು ಅನುಮತಿ ನಿರಾಕರಿಸಿದ್ದು ಇದಕ್ಕೆ ಜಗ್ಗದ ಮೊಗೇರ ಸಮಾಜದವರು ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಟಗಾ ಮೊಗೇರ, ಸದಾನಂದ ಮೊಗೇರ, ಈಶ್ವರ ಮೊಗೇರ ಗೊರಟೆ, ಉಪೇಂದ್ರ ಮೊಗೇರ, ಕೃಷ್ಣ ಮೊಗೇರ ಹೊನ್ನೆಗದ್ದೆ, ಬಾಬು ಮೊಗೇರ ಕರಿಕಲ್, ಭಾಸ್ಕರ ಮೊಗೇರ ಅಲ್ಲೇಕೋಡಿ, ಚೆನ್ನಯ್, ಮೊಗೇರ, ಸುದರ್ಶನ ಮೊಗೇರ ಇದ್ದರು.

error: