September 16, 2024

Bhavana Tv

Its Your Channel

ಬುಲೆಟ್ ಬೈಕ್ ಕಳ್ಳತನ ಮಾಡಿಕೊಂಡು ಕಾರೊಂದಕ್ಕೆ ಬುಲೆಟ್ ಕಟ್ಟಿಕೊಂಡು ಹೋಗುತ್ತಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆ

ಭಟ್ಕಳ ಬಂದರ ರೋಡ್ 2ನೇ ಕ್ರಾಸ್ ನಲ್ಲಿ ಮನೆ ಮುಂದೆ ನಿಲ್ಲಿಸಿಟ್ಟ ಬುಲೆಟ್ ಬೈಕ್ ಕಳ್ಳತನ ಮಾಡಿಕೊಂಡು ಹೋದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ಭಟ್ಕಳ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳತನ ಆರೋಪಿಯನ್ನು ಉಡುಪಿ ಮೂಲದ ಕುಂಜೆಬೆಟ್ಟ ನಿವಾಸಿ ಇಮ್ರಾಜ್ ಉಸ್ಮಾನ್ ಸಾಹೇಬ್ ಹಾಗೂ ಬಂಟ್ವಾಳ ಫರಂಗಿಪೇಟೆ ಮೂಲದ ಮಹ್ಮದ ನೌಪಾಲ್ ಎಂದು ತಿಳಿದು ಬಂದಿದೆ. ಇವರು ಮಾರ್ಚ್ 14 ರ ನಸುಕಿನ ವೇಳೆ ಬಂದರ ರೋಡ್ 2ನೇ ಕ್ರಾಸ್ ನಲ್ಲಿರುವ ನೀಲಾವರ ಅಪಾರ್ಟ್ಮೆಂಟ್ ಮುಂದೆ ನಿಲ್ಲಿಸಿಟ್ಟ ಶಝೀಬ್ ಹಶಿಮ್ ಎಂಬುವರ ಬುಲೆಟ್ ಬೈಕ್ ಕಳ್ಳತನವಾಗಿದೆ. ಬಳಿಕ ಬೆಳ್ಳಿಗ್ಗೆ ಎದ್ದು ನೋಡಿದಾಗ ಮನೆಮುಂದೆ ನಿಲ್ಲಸಿಟ್ಟ ಬೈಕ್ ಕಳ್ಳತನವಾಗಿರುವುದು ತಿಳಿದು ಬಂದಿದೆ. ನಂತರ ಈ ಕುರಿತು ಶಝೀಬ್ ಹಶಿಮ್ ಸಹೋದರ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆಯ ಪೊಲೀಸರು ತನಿಕೆ ಕೈಗೊಂಡ ವೇಳೆ ಬೈಕ್ ಕಳ್ಳತನ ಮಾಡಿದ ಕಳ್ಳರು ಕಳ್ಳತನವಾದ ಬೆಳ್ಳಿಗ್ಗೆ 7.18ರ ಸುಮಾರಿಗೆ ಶಿರೂರು ಟೋಲ್ ಗೇಟ್ ಬಳಿ ಕಾರೊಂದಕ್ಕೆ ಕಳ್ಳತನ ಮಾಡಿದ ಬುಲೆಟ್ ಕಟ್ಟಿಕೊಂಡು ಹೋಗುತ್ತಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಕಳ್ಳರ ಜಾಡು ಹಿಡಿದ ಪೊಲೀಸರನ್ನು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಕಳ್ಳತನವಾಗಿರುವ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಆಸಿಫ್ ಹಾಸಿಮ್ ಶೇಖ್ ಮಾಹಿತಿ ನೀಡಿದ್ದು ಬೈಕ್ ಕಳ್ಳತನ ಮಾಡಿಕೊಂಡು ಮಂಗಳೂರಿಗೆ ಹೋದ ಕಳ್ಳರು ಮಾರ್ಚ್ 17 ರಂದು ಬೈಕ್ ಚಲಾಯಿಸುತ್ತಿದ್ದ ವೇಳೆ ಅಲ್ಲಿನ ಟ್ರಾಫಿಕ್ ಪೊಲೀಸರು ದಾಖಲೆ ಇಲ್ಲದೆ ಬೈಕ್ ಚಲಾಯಿಸುತ್ತಿರುವ ಹಿನ್ನೆಲೆ ಬೈಕ್ ವಶಕ್ಕೆ ಪಡೆದು ಕದ್ರಿ ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು. ಬಳಿಕ ಮತ್ತೆ ಮಾರ್ಚ್ 18 ರಂದು ಕಳ್ಳರು ಅಲ್ಲಿಂದ ಬೈಕ್ ಕಳ್ಳತನ ಮಾಡಿದ್ದಾರೆ. ನಂತರ ಬೈಕ್ ಮಾಲೀಕನ ಆರ್.ಸಿ ಪರಿಶೀಲಿಸಿದಾಗ ಭಟ್ಕಳದಲ್ಲಿ ಬೈಕ್ ಕಳ್ಳತನವಾಗಿ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ್ದು ಆರೋಪಿಗಳು ಬಿಡುಗಡೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

error: