May 21, 2024

Bhavana Tv

Its Your Channel

ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ದೇವರ ಪುರನ್ ಪ್ರತಿಷ್ಟಾ ವರ್ಧಂತ್ಯುತ್ಸವ

ಮನೆಯಲ್ಲಿ ತಾಯಂದಿರು ಆದ್ಯಾತ್ಮದತ್ತ ಒಲವು ಹೊಂದಿದವರಾಗಿದ್ದರೆ ಇಡೀ ಸಂಸಾರವೇ ಆದ್ಯಾತ್ಮದತ್ತ ವಾಲುತ್ತದೆ. ತಾಯಂದಿರು ಹೆಚ್ಚು ಹೆಚ್ಚು ಆದ್ಯಾತ್ಮದತ್ತ ಹೋಗಬೇಕು ಎಂದು ಉಜಿರೆಯ ಶ್ರೀ ರಾಮ ಕ್ಷೇತ್ರದ ಗುರುಗಳು ಹಾಗೂ ನಾಮಧಾರಿ ಸಮಾಜದ ಕುಲಗುರುಗಳೂ ಆದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.

ಭಟ್ಕಳ ; ಅವರು ಭಟ್ಕಳ ತಾಲೂಕಿನ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ದೇವರ ಪುರನ್ ಪ್ರತಿಷ್ಟಾ ವರ್ಧಂತ್ಯುತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು.
ಆದ್ಯಾತ್ಮದತ್ತ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ, ಭಗವಂತನ ಚಿಂತನೆ ಹೆಚ್ಚು ಮಾಡಿದಾಗ ನಮಗೆ ಕಷ್ಟ ಸಹಿಸುವ ಶಕ್ತಿ ದೊರೆಯುತ್ತದೆ. ದೇಹಾರೋಗ್ಯಕ್ಕೆ ಕೂಡಾ ಇದುವೇ ಮದ್ದು ಎಂದ ಅವರು ನವಗ್ರಹಗಳ ದೋಷಕ್ಕೆ ಕೂಡಾ ಆದ್ಯಾತ್ಮದಲ್ಲಿ ಪರಿಹಾರವಿದೆ ಎಂದೂ ಹೇಳಿದರು. ಪ್ರತಿ ದಿನ ಧ್ಯಾನ ಮಾಡುತ್ತಾ ಭಗವಂತನಲ್ಲಿ ತಲ್ಲೀನರಾಗುವವರಿಗೆ ಯಾವುದೇ ಕಾಯಿಲೆ ಕೂಡಾ ಬಾಧಿಸಲಾರದು. ನಮ್ಮ ನಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟು ಕೊಳ್ಳಲು ಕೂಡಾ ಇದು ಸಹಕಾರಿಯಾಗಿದೆ ಎಂದು ಅವರು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಕೂಡಾ ಸಹಕಾರಿ ಎಂದರು.
ಸದಾ ನಾವು ನಮ್ಮ ಪರಿಧಿಯಲ್ಲಿಯೇ ಬದುಕುತ್ತಾ ಸಂಶಯದ ಗೋಡೆವೆಗಳೊಂದಿಗೆ ಇರುತ್ತೇವೆ. ನಾವು ಸಂಶಯದ ಸುಳಿಯಿಂದ ಹೊರಗೆ ಬಂದು ವಿಚಾರ ಮಾಡಿದಾಗ ಬದುಕು ಹಸನಾಗುತ್ತದೆ. ಜೀವನದ ಸಂವಿಧಾನದಲ್ಲಿ ತಪ್ಪು ಮಾಡಿದರೆ ಜೈಲು ಪಾಲಾಗಬೇಕಾಗುತ್ತದೆ ಆದರೆ ಬದುಕಿನ ಸಂವಿಧಾನದಲ್ಲಿ ತಪ್ಪು ಮಾಡಿದಲ್ಲಿ ಅದರ ಪರಿಣಾಮ ಧೀರ್ಘವಾಗಿರುತ್ತದೆ, ಜೀವನ ಬಹಳಷ್ಟು ಹಿಂದಕ್ಕೆ ಹೋಗುತ್ತದೆ. ನಾವು ಮಾಡುವ ಕೆಲಸವನ್ನು ಶೃದ್ಧೆಯಿಂದ ಮಾಡಿದಾಗ ಭಗವಂತನ ಕೃಪೆಯಾಗುತ್ತದೆ ಎಂದೂ ಹೇಳಿದ ಶ್ರೀಗಳು ಪ್ರತಿಯೋರ್ವರೂ ಕೂಡಾ ಭಗವಂತನ ಕೃಪೆಗೆ ಪಾತ್ರರಾಗುವಂತೆ ಕರೆ ನೀಡಿದರು.

ವರ್ಧಂತ್ಯುತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಶ್ರೀ ಹನುಮಂತ ದೇವರಲ್ಲಿ ಅನೂಜ್ಞೆ ಸ್ವಸ್ತಿವಾಚನ, ಋತ್ವಿಗಾವರಣ, ಗಂಗೆಪೂಜೆ, ಧ್ವಜಕುಂಭದ್ವಾರ ತೋರಣ ಪೂಜೆ, ಯಾಗಶಾಲಾ ಪ್ರವೇಶ, ಅನೀರ್ವಾಣ ದೀಪಾರೋಹಣ, ವಿಶ್ವಕ್ಸೇನ ಮಹಾಗಣಪತಿ ಪೂಜೆ, ಸಂಕಲ್ಪ, ಭಗವದ್ವಾಸುದೇವ, ಮೃತ್ಸಂಗ್ರಹಣ, ಅಂಕುರಾರ್ಪಣ, ಕಳಸಾರಾಧನೆ, ಅಗ್ನಿ ಪ್ರತಿಷ್ಟೆ, ವಿಶ್ವಕ್ಸೇನ ಮಹಾಗಣಪತಿ ಹೋಮ, ನೈವೇದ್ಯ, ಬಲಿಹರಣ, ಮೂಲ ದೇವರಿಗೆಪಂಚಾಮೃತಾಭಿಷೇಕ, ಆದಾರಶಕ್ಯಾದಿ ಹೋಮ, ಪ್ರಧಾನ ಮೂರ್ತಿ ಹೋಮ, ಪರಿವಾರಾದಿ ದೇವತಾ ಹೋಮಗಳು, ಶ್ರೀ ಸುದರ್ಶನ ಹೋಮ, ಪ್ರಾಯಶ್ಚಿತ್ತಾಂಗ ಹೋಮ, ಅಷ್ಟಾವಧಾನ ಸೇವೆ, ಮಹಾ ಅನ್ನಸಂತರ್ಪಣೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಧ್ವಜಕುಂಭದ್ವಾರ ತೋರಣ ಪೂಜೆ, ಭಗನ್ನಿತ್ಯಾರಾಧನೆ, ಪಂಚ ಸೂಕ್ತ ಹವನಗಳು, ಪ್ರಾಯಶ್ಚಿತಾಂಗ ಹೋಮ, 1001 ಕಲಶಾಭಿಷೇಕ ಹಾಗೂ ಕೋಟೆ ಜಟಗನ ಕ್ಷೇತ್ರದ ತನಕ ಶ್ರೀ ದೇವರ ಪಲ್ಲಕ್ಕಿ ಉತ್ಸವ ವಿಷೇಶವಾದ ಬಲಿ ಉತ್ಸವ ಕಾರ್ಯಕ್ರಮ ಇತ್ಯಾದಿಗಳು ಜರುಗಿದವರು.
ಇದೆ ಸಂದರ್ಬದಲ್ಲಿ ಹೊನ್ನಾವರದ ಮಹೇಶ ಗೌಡ ಅವರು ಬಿಡಿಸಿದ ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಭಾವಚಿತ್ರವನ್ನು ಶ್ರೀಗಳಿಗೆ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಕಾಸ್ಕಾರ್ಡ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಕಾಯ್ಕಿಣಿ, ಶ್ರೀಧರ ನಾಯ್ಕ ಆಸರಕೇರಿ, ಜೆ.ಜೆ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಚಿತ್ರಕಾರ ಮಹೇಶ ಗೌಡ ಈತನಿಗೆ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಹರಿಸಿದರು.

error: