September 16, 2024

Bhavana Tv

Its Your Channel

ಭಟ್ಕಳ ಹೊನ್ನಾವರ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸುನಿಲ್ ನಾಯ್ಕ ಘೋಷಣೆ

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಲವಾದ ತ್ರಿಕೋನಸ್ಪರ್ಧೆಗೆ ಚುನಾವಣಾ ಅಖಾಡ ಸಿದ್ಧ .. ಬಿಜೆಪಿ ಅಭ್ಯರ್ಥಿಯಾಗಿ ಸುನಿಲ್ ನಾಯ್ಕ ಘೋಷಣೆ .. ಕ್ಷೇತ್ರದಲ್ಲಿ ಸಂಚಲನ ಮೂಡಲಿದೆಯೇ..?
ಉತ್ತರ ಕನ್ನಡ ಜಿಲ್ಲೆ ಬಿಜೆಪಿ ಸೀಟು ಹಂಚಿಕೆ ಹಳಿಯಾಳ : ಸುನಿಲ್ ಹೆಗಡೆ, ಕಾರವಾರ : ರೂಪಾಲಿ ನಾಯ್ಕ, ಕುಮಟಾ : ದಿನಕರ ಶೆಟ್ಟಿ, ಭಟ್ಕಳ : ಸುನಿಲ್ ನಾಯ್ಕ, ಶಿರಸಿ : ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ.
ಭಟ್ಕಳ ಹೊನ್ನಾವರ ವಿಧಾನಸಭಾ ಅಖಾಡಕ್ಕೆ ಕಾಂಗ್ರೇಸ್, ಜೆಡಿಎಸ್ ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದೆ, ಹಾಗೂ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸುನಿಲ್ ನಾಯ್ಕ ಘೋಷಣೆ ಆಗಿದೆ. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಹೈವೋಲ್ಟೇಜ್ ಜಿದ್ದಾಜಿದ್ದಿ ಏರ್ಪಟ್ಟಿದ್ದು ಪ್ರಭಲವಾದ ತ್ರಿಕೋನ ಸ್ಪರ್ಧೆಯು ಉಂಟಾಗಲಿದೆ.
ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಅವರು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಾ ಕಣಕ್ಕೆ ಬಂದಿದ್ದಾರೆ, ಬಿಜೆಪಿ ಪಕ್ಷದಿಂದಲೇ ಅದೃಷ್ಠ ಪರೀಕ್ಷೆಗೆ ಮತ್ತೊಮ್ಮೆ ಮುಂದಾಗಲಿದ್ದಾರೆ ?
ಹೆಚ್ಚಿನ ಮಾಹಿತಿಗಾಗಿ ಭಾವನಾ ಟಿವಿ ವೀಕ್ಷಿಸಿ

error: