September 16, 2024

Bhavana Tv

Its Your Channel

ಬೆಂಗಳೂರಿನಿAದ ಮನೆಗೆ ಬರುತ್ತೇನೆಂದು ಹೇಳಿದ್ದ ವ್ಯಕ್ತಿ ಕಣ್ಮರೆ: ಪ್ರಕರಣ ದಾಖಲು

ಭಟ್ಕಳ: ಕಳೆದ ೨೦೧೭ರಲ್ಲಿ ಬೆಂಗಳೂರಿನಿAದ ಕೈಕಿಣಿ ತೆರ್ನಮಕ್ಕಿಯ ತನ್ನ ಮನೆಗೆ ಹೊರಟಿದ್ದ ವ್ಯಕ್ತಿಯೋರ್ವ ಮನೆಗೆ ಬಾರದೇ ನಾಪತ್ತೆಯಾಗಿದ್ದ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣಿಯಲ್ಲಿ ದೊರೊಂದು ದಾಖಲಾಗಿದೆ.

ಕಾಣೆಯಾಗಿರುವ ವ್ಯಕ್ತಿಯನ್ನು ಶಿರಸಿ ನಿಲೇಕಣಿ ಮೂಲದ, ಹಾಲಿ ಕೈಕಿಣಿ ತೆರ್ನಮಕ್ಕಿಯ ನಿವಾಸಿಯಾಗಿರುವ ಘನಶ್ಯಾಮ ವಸಂತ ಮೊಗೇರ (೪೧) ಎಂದು ಗುರುತಿಸಲಾಗಿದೆ. ಸದೃಢ ಮೈಕಟ್ಟು ಹೊಂದಿರುವ ಈತ, ಗೋಲು ಮುಖ, ಸಣ್ಣ ದಾಡಿ ಮತ್ತು ಮೀಸೆ ಬಿಟ್ಟಿದ್ದು, ತಲೆಯಲ್ಲಿ ಕಪ್ಪು ಬಳಿ ಮಿಶ್ರಿತ ಕೂದಲು ಇರುತ್ತದೆ. ಈತ ಕನ್ನಡ ಮತ್ತು ಹಿಂದಿ ಭಾಷೆಯನ್ನು ಬಲ್ಲವನಾಗಿದ್ದಾನೆ. ೨೦೧೨ರಲ್ಲಿ ಕಾರೊಂದನ್ನು ಖರೀದಿಸಿದ್ದು, ಬೆಂಗಳೂರು ಬಿಎಸ್‌ಎನ್‌ಎಲ್ ಕಚೇರಿಗೆ ಬಾಡಿಗೆಗೆ ಬಿಟ್ಟಿದ್ದು, ಕಾರು ಚಲಾಯಿಸುವ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಕಳೆದ ೨೦೧೭, ಮಾ.೨೩ರಂದು ಬೆಂಗಳೂರಿನಿAದ ತಾಯಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ್ದ ಘನಶ್ಯಾಮ ಯುಗಾದಿ ಹಬ್ಬಕ್ಕೆ ಬರುವುದಾಗಿ ತಿಳಿಸಿದ್ದ. ಆದರೆ ಆತ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಫೋನ್ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬAಧಿಕರ ಮನೆ ಸೇರಿದಂತೆ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ನಡುವೆ ಕಳೆದ ೨೦೨೧, ಮಾ.೧೨ರಂದು ಆತನ ತಂದೆ ಮೃತ ಪಟ್ಟಿದ್ದು, ತಾನು ತರ್ನಮಕ್ಕಿಯ ಬಾಡಿಗೆಯ ಮನೆಯಲ್ಲಿ ಒಂಟಿಯಾಗಿದ್ದೇನೆ. ನನ್ನ ಮಗನನ್ನು ಹುಡುಕಿ ಕೊಡಿ ಎಂದು ಆತನ ತಾಯಿ ಶಾಂತಾ ವಸಂತ ಕುಮಟಾ ಎನ್ನುವವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುರುಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: