March 19, 2025

Bhavana Tv

Its Your Channel

ಹಿರಿಯ ಸಹಕಾರಿ ಧುರೀಣ, ರಾಜಕಾರಣಿ ನಾಮಧಾರಿ ಮುಖಂಡ ಶಿರಾಲಿಯ ಬಿ.ಕೆ. ನಾಯ್ಕ ನಿಧನ

ಭಟ್ಕಳ ತಾಲ್ಲೂಕಿನ ಹಿರಿಯ ಸಹಕಾರಿ ಧುರೀಣ, ರಾಜಕಾರಣಿ ಭಟ್ಕಳ ಹಾಲಿ ಶಾಸಕ ಸುನೀಲ ನಾಯ್ಕ ಅವರ ತಂದೆ ಶಿರಾಲಿಯ ಬಿ.ಕೆ. ನಾಯ್ಕ ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು.
ಭಟ್ಕಳ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ (ಪಿ.ಎಲ್.ಡಿ.) ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದು ನಾಲ್ಕು ಬಾರಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಒಂದು ಬಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅತ್ಯಂತ ಸರಳ ವ್ಯಕ್ತಿತ್ವದ ಅವರು ಹಲವಾರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಾವಳ್ಳಿ ಹೋಬಳಿಯ ನಾಮಧಾರಿ ಸಮಾಜದ ಅಧ್ಯಕ್ಷರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಮಾಜಕ್ಕೆ ಉತ್ತಮ ಸೇವೆ ಸಲ್ಲಸಿದ್ದ ಅವರು ಕಳೆದ ವರ್ಷ ಹಳೇಕೋಟೆ ಹನುಮಂತ ದೇವರ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿಯೂ ಕೂಡಾ ಭಾಗಿಯಾಗಿ ತಮ್ಮ ಸೇವೆ ಸಲ್ಲಿಸಿದ್ದರು. ಮೃತರಿಗೆ ಪತ್ನಿ, ಹಾಗೂ ಪುತ್ರ ಭಟ್ಕಳ ಶಾಸಕ ಸುನಿಲ್ ಬಿ. ನಾಯ್ಕ ಸೇರಿದಂತೆ ಇನ್ನೋರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

error: