July 14, 2024

Bhavana Tv

Its Your Channel

ಸಿಎಸ್‌ಇಇಟಿ-ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಭಟ್ಕಳ: 2023 ನೇ ಸಾಲಿನ ರಾಷ್ಟçಮಟ್ಟದ ಕಂಪನಿ ಸೆಕ್ರೇಟರಿ – ಸಿ.ಎಸ್ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ದೀಕ್ಷಿತ ಶ್ರೀಧರ ಮೊಗೇರ (ಬಿ.ಕಾಂ – ದ್ವಿತೀಯ), ಕಪ್ಸಿ ಮೊಹಮ್ಮದ ಇರ್ಬಾಜ್ (ಬಿ.ಕಾಂ – ಪ್ರಥಮ) ತೇರ್ಗಡೆ ಹೊಂದುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ತನ್ಮೂಲಕ ಸಿ.ಎಸ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಗನಕುಸುಮವಲ್ಲ ಎಂದು ಸಾಬೀತುಪಡಿಸುವುದರೊಂದಿಗೆ, ಸಿಎಸ್ ಆಕಾಂಕ್ಷಿಗಳಿಗೆ ಭವಿಷತ್ತಿನಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜು ಹೊಸ ಆಶಾಕಿರಣವನ್ನು ಮೂಡಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್’ನ ಛೇರಮನ್ ಡಾ. ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟೀ ರವೀಂದ್ರ ಕೊಲ್ಲೆ, ಟ್ರಸ್ಟೀ ಮ್ಯಾನೇಜರ್ ರಾಜೇಶ ನಾಯಕ, ಇತರ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿರುತ್ತಾರೆ. ಸಿ.ಎ-ಸಿ.ಎಸ್-ಸಿ.ಎಂ.ಎ ತರಬೇತಿಯ ಸಂಯೋಜಕರಾದ ಫಣಿಯಪ್ಪಯ್ಯ ಹೆಬ್ಬಾರ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: