May 23, 2024

Bhavana Tv

Its Your Channel

ಸಿದ್ಧಾರ್ಥ ಪದವಿಪೂರ್ವ ಕಾಲೇಜನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ಪ್ರತಿಶತ ಫಲಿತಾಂಶ

ಭಟ್ಕಳ : ದ್ವಿತೀಯ ಪಿಯುಸಿ 2024ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿದ್ಧಾರ್ಥ ಪದವಿಪೂರ್ವ ಕಾಲೇಜನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ 382 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿ ಸಾಧನೆ ಗೈದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ 340 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 42 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ 100 ಫಲಿತಾಂಶ ದಾಖಲಾಗಿದೆ.
208 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಮಾರಿ ಲೇಖಾ ಕೃಷ್ಣ ಭಂಡಾರಿ 600ಕ್ಕೆ 587 (97.83%) ಅಂಕ ಪಡೆದು ಪ್ರಥಮ ಸ್ಥಾನ,
ಎಸ್ ಸುದೀಶ ಹಾಗೂ ಶಿವಾನಿ ಸತ್ಯನಾರಾಯಣ ಶೇಟ್ 600 ಕ್ಕೆ 585 (97.50%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಕುಮಾರಿ ಸಂಧ್ಯಾ ಜಟ್ಟಪ್ಪ ನಾಯ್ಕ 600 ಕ್ಕೆ 584 (97.33%) ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಗಣಿತ ವಿಷಯದಲ್ಲಿ 16 ವಿದ್ಯಾರ್ಥಿಗಳು 100 ಕ್ಕೆ 100, ಗಣಕಯಂತ್ರ ವಿಜ್ಞಾನ ವಿಷಯದಲ್ಲಿ 11 ವಿದ್ಯಾರ್ಥಿಗಳು 100 ಕ್ಕೆ 100, ರಸಾಯನ ಶಾಸ್ತ್ರದಲ್ಲಿ 3 ವಿದ್ಯಾರ್ಥಿಗಳು 100/100, ಜೀವಶಾಸ್ತ್ರ ವಿಷಯದಲ್ಲಿ 8 ವಿದ್ಯಾರ್ಥಿ 100 ಕ್ಕೆ 100 ಹಾಗೂ ಕನ್ನಡ ವಿಷಯದಲ್ಲಿ 1 ವಿದ್ಯಾರ್ಥಿ 100 ಕ್ಕೆ 100 ಅಂಕ ಪಡೆದು ಸಾಧನೆ ಗೈದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 9 ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕುಮಾರಿ ಅಂಕಿತಾ ಓಂಕಾರ್ ಮೊಗೇರ 600 ಕ್ಕೆ 577 ಅಂಕ (96.16%) ಪಡೆದು ಪ್ರಥಮ ಸ್ಥಾನ, ಕುಮಾರಿ ಶ್ರದ್ಧಾ ಪೂಜಾರಿ 600 ಕ್ಕೆ 571 ಅಂಕ (95.16%) ಪಡೆದು ದ್ವೀತೀಯ ಸ್ಥಾನ ಹಾಗೂ ಕುಮಾರ ತೇಜಸ್ 600 ಕ್ಕೆ 562 ಅಂಕ (93.66%) ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.
ಸಾಧನೆ ಮಾಡಿದ ವಿದ್ದಾರ್ಥಿಗಳಿಗೆ ಆಡಳತ ಮಂಡಳಿ ಪ್ರಾಶಂಪಾಲರು ಹಾಗೂ ಉಪನ್ಯಾಸಕರ ವರ್ಗದವರು ಅಭಿನದಿಸಿದ್ದರು.

error: