May 1, 2024

Bhavana Tv

Its Your Channel

ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ

ಭಟ್ಕಳ: ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ರಾಮನವಮಿಯ ಪರ್ವಕಾಲದಲ್ಲಿ ಸಹಸ್ರಾಸರು ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಶ್ರೀಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೆಯ ದಿನದಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು. ಪ್ರತಿ ದಿನವೂ ಒಂದೊAದು ಉತ್ಸವವಾದಿಗಳು ನಡೆದು, ಸಪ್ತಮಿ ಹಾಗೂ ಅಷ್ಟಮಿಯಂದು ಹೂವಿನ ರಥೋತ್ಸವ ಸಹಸ್ರಾರು ಭಕ್ರವೃಂದದೊAದಿಗೆ ನಡೆಯಿತು. ರಾಮನವಮಿಯ ಬುದುವಾರದಂದು ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮ ಭಕ್ತ ಹನುಮನ ರಥೋತ್ಸವ ಜರುಗಿತು.

ಸಂಪ್ರದಾಯದAತೆ ಜೈನ ಹಾಗೂ ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಇದೇ ರೀತಿ ಪ್ರತಿ ವರ್ಷವೂ ಹಿಂದು-ಮುಸ್ಲಿA, ಜೈನರು ಸೇರಿ ಎಲ್ಲ ಧರ್ಮದವರೂ ಪಾಲ್ಗೊಳ್ಳುವುದು ಭಟ್ಕಳ ಜಾತ್ರೆಯ ವಿಶೇಷವಾಗಿದೆ.

ಸಹಸ್ರಾರು ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥವನ್ನ ಕಂಡು ಭಕ್ತರು ಪುನೀತರಾದರು. ದೇವರಿಗೆ ನಿಂತಲ್ಲಿಯೇ ಕೈಮುಗಿದು ನಮಸ್ಕರಿಸಿದರು. ಬ್ರಹ್ಮರಥವನ್ನು ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲ ದೇವಾಲಯದ ಮುಂಭಾಗದವರೆಗೂ ಎಳೆಯಲಾಯಿತು. ರಥೋತ್ಸವದ ಸಂದರ್ಭದಲ್ಲಿ ಸುಮಾರು 20 ಸಾವಿಕ್ಕೂ ಅಧಿಕ ಭಕ್ತಾಧಿಗಳು ಪಾಲ್ಗೊಂಡಿದ್ದರು. ಈ ಬಾರಿ ಡೊಳ್ಳು ಕುಣಿತ, ರೇಡಿಯೋ ಕಲಾವಿದ ಉದಯಪ್ರಭು ತಂಡದಿAದ ಭಜನೆ, ವಾದ್ಯಗೋಷ್ಠಿ, ತಟ್ಟಿರಾಯ, ಹುಲಿವೇಷ, ಚಂಡೆವಾದ್ಯಗಳು ಬ್ರಹ್ಮರಥೋತ್ಸವಕ್ಕೆ ಮೆರುಗು ತಂದವು.


ಸಚಿವ ಮಂಕಾಳ ವೈದ್ಯರು ರಥೋತ್ಸವಕ್ಕೆ ಆಗಮಿಸಿ ರಥಾರೂಡನಾದ ಹನುಮಂತನ ದರ್ಶನ ಪಡೆದರು. ಬಿಜೆಪಿ ಅಧ್ಯಕ್ಷ ಲಕ್ಷಿö??Ãನಾರಾಯಣ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಮುಖಂಡೆ ಶಿವಾನಿ ಶಾಂತಾರಾಮ ಮತ್ತಿತರ ಗಣ್ಯರು ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಶ್ರೀಧರ ಮೊಗೇರ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಎಡಿಸನಲ್ ಎಸ್‌ಪಿ ಸಿ.ಟಿ.ಜಯಕುಮಾರ ಮಾರ್ಗದರ್ಶನದಲ್ಲಿ ಭಟ್ಳಳ ಉಪವಿಭಾಗದ ಡಿವೈಎಸ್‌ಪಿ ಕೆ.ಮಹೇಶ್
ನೇತೃತ್ವದಲ್ಲಿ ಸಿಪಿಐ , ಪಿಎಸ್‌ಐ ಸುರಕ್ಷತೆಯನ್ನು ಒದಗಿಸಿದ್ದು ಶಾಂತಿಯುತವಾಗಿ ಬ್ರಹ್ಮರಥೋತ್ಸವ ಜರುಗಿದೆ.

error: