April 30, 2024

Bhavana Tv

Its Your Channel

ಮಾರ್ಚ 2024 ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಉತ್ತಮ ಸಾಧನೆ

ಭಟ್ಕಳ : ಪರೀಕ್ಷೆ ಹಾಜರಾದ 307 ವಿದ್ಯಾರ್ಥಿಗಳಲ್ಲಿ 307 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ 100% ಫಲಿತಾಂಶವನ್ನು ದಾಖಲಿಸಿದೆ. 122 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, 185 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಮಹಾವಿದ್ಯಾಲಯವು 100%ಫಲಿತಾಂಶ ದಾಖಲಿಸಿದ್ದು ಆಶೀತಾ ಅನಂತ ಮೊಗೇರ 97.66% ನೊಂದಿಗೆ ಪ್ರಥಮ, ಅರ್ಜುನ ಆರ್.ಬಿ ಹಾಗೂ ಸನತ ಕಿಣಿ 97.16% ನೊಂದಿಗೆ ದ್ವಿತೀಯ ಮತ್ತು ಸಂದೇಶ ಆಚಾರ್ಯ 97% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಮಹಾವಿದ್ಯಾಲಯವು 100% ಫಲಿತಾಂಶ ದಾಖಲಿಸಿದ್ದು ಹರ್ಷೀತಾ ಮಾಸ್ತಿ ನಾಯ್ಕ 96.16% ನೊಂದಿಗೆ ಪ್ರಥಮ, ಮೇಘಾ ನಾಗಪ್ಪ ನಾಯ್ಕ 95.5% ನೊಂದಿಗೆ ದ್ವಿತೀಯ ಮತ್ತು ರಶ್ಮಿ ಆರ್.ನಾಯ್ಕ ಹಾಗೂ ರಮ್ಯ 95.1% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಕಲಾ ವಿಭಾಗದಲ್ಲಿ ಮಹಾವಿದ್ಯಾಲಯವು 100% ಫಲಿತಾಂಶ ದಾಖಲಿಸಿದ್ದು ಪೂಜಾ ಮಂಜುನಾಥ ಖಾರ್ವಿ ಹಾಗೂ ಚಂದ್ರಶೇಖರ ನಾಗಪ್ಪ ಗೊಂಡ 95.5% ನೊಂದಿಗೆ ಪ್ರಥಮ, ಅರುಣ ರಾಮಯ್ಯ ಗೊಂಡ 91.16% ನೊಂದಿಗೆ ದ್ವಿತೀಯ ಮತ್ತು ಸೌಮ್ಯ ಸುಬ್ರಾಯ ನಾಯ್ಕ 86.83% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳಾದ ಪ್ರಜ್ವಲ ನಾಯಕ ಹಾಗೂ ಪ್ರಸಾದ ಉಲ್ಮನ ಲೆಕ್ಕಶಾಸ್ತç, ಅರ್ಜುನ ಆರ್.ಬಿ ಹಾಗೂ ಆಶೀತಾ ಮೊಗೇರ ಅರ್ಥಶಾಸ್ತç, ಅಮೃತಾ ಪೈ,ಸನತ ಕಿಣಿ, ಅನನ್ಯ ರಾಯ್ಕರ ಹಾಗೂ ಪ್ರಜ್ಞಾ ನಾಯ್ಕ ಗಣಕ ವಿಜ್ಞಾನ, ಸಂದೇಶ ಆಚಾರ್ಯ ಕನ್ನಡ ವಿಷಯಗಳಲ್ಲಿ 100/100 ಅಂಕಗಳನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುರೇಶ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಆರ್. ಜಿ. ಕೊಲ್ಲೆ ಮತ್ತು ಟ್ರಸ್ಟಿ ಮೆನೇಜರ್ ಶ್ರೀ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

error: