May 6, 2024

Bhavana Tv

Its Your Channel

ಜೋಯಿಡಾ ತಾಲೂಕಿನ ಮಾವಳಂಗಿ ಗ್ರಾಮಕ್ಕೆ ವಿದ್ಯುತ ಹಾಗೂ ಸ್ವಚ್ಛ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ನಾಗರಿಕರ ಆಗ್ರಹ

ದಾಂಡೇಲಿ: ಜೋಯಿಡಾ ತಾಲೂಕಿನ ಮಾವಳಂಗಿ ಗ್ರಾಮದಲ್ಲಿ ಸುಮಾರು ಎರಡು ನೂರು ಹೆಚ್ಚು ಕುಟುಂಬಗಳು ವಾಸಿಸುತ್ತಾರೆ. ಇಲ್ಲಿ ವಾಸಿಸುವ ನಾಗರಿಕರಿಗೆ ಮೂಲ ಸೌಲಭ್ಯಗಳು ಸಹ ಸಿಗುತ್ತಿಲ್ಲ. ಶುದ್ದ ಕುಡಿಯುವ ನೀರು ಸಹ ಕೊಳಕು (ರಾಡಿ) ನೀರು ಶುದ್ದಿಕರಿಸುತ್ತಿಲ್ಲ. ಈಗಾಗಲೇ ಎಲ್ಲಾ ಕಡೆ ಕರೋನಾ ವೈರಸ, ಡೆಂಗ್ಯು, ಜೋಯಿಂಡಿಸದAತಹ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು ವಿತರಿಸುವ ಜವಾಬ್ದಾರಿ ಇರುತ್ತದೆ. ನೀರಿನ ಶುದ್ದಿಕರಣ ಘಟಕವು ಇದ್ದರೂ ಸಹ ಶುದ್ಧ ನೀರು ಸರಬರಾಜು ಮಾಡುತ್ತಿಲ್ಲ. ವಿದ್ಯುತ ಇರುವುದಿಲ್ಲ ಎಂದು ಹೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸರಿಯಾಗಿ ಉತ್ತರ ನೀಡುವುದಿಲ್ಲ ಒಮ್ಮೆ ವಿದ್ಯುತ ಹೋದರೆ ಕನಿಷ್ಠ ೨೪ ಗಂಟೆವರೆಗೂ ವಿದ್ಯುತ ಬರುವುದಿಲ್ಲ. ಮಾವಳಂಗಿ ಗ್ರಾಮವು ದಟ್ಟ ಕಾಡುಗಳಿಂದ ಕೂಡಿದ್ದು
ಕಾಡುಪ್ರಾಣಿಗಳ ಹಾವಳಿ ಜಾಸ್ತಿ ಇದ್ದು ರಾತ್ರಿ ಸಮಯದಲ್ಲಿ ವಿದ್ಯುತ ಸರಿಯಾಗಿ ನೀಡದ ಕಾರಣ ಊರಿನ ಗ್ರಾಮಸ್ತರಿಗೆ ಓಡಾಡಲು ತೊಂದರೆ ಆಗುತ್ತಿದೆ. ಹೆಸ್ಕಾಂನ ಶಾಖಾಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರೂ ಸಹ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಲು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ ಹಾಗೂ ಪದಾಧಿಕಾರಿಗಳಾದ ಅಶೋಕ ಪಾಟೀಲ, ಬಲವಂತ ಬೊಮ್ಮನಹಳ್ಳಿ, ಗೌರೀಶ ಬಾಬ್ರೇಕರ, ರೇಣುಕಾ ಬಂದA, ಮೂಜಿಬಾ ಛಬ್ಬಿ, ವಸಂತ ಮನ್ನೆರಿ, ಲೀಲಾವತಿ ಕೊಳಚೆ,ರಾಘವೇಂದ್ರ ಗಡೆಪ್ಪನವರ, ಎಮ ಕೆ ಗಡಕರ, ಲೀಲಾ ಮಾದರ, ಕಲ್ಪನಾ ಪಾಟೀಲ, ಬಾಬಾಸಾಬ ಜಮಾದರ, ರಮೇಶ ನಾಯ್ಕ, ಸತೀಶ ನಾಯ್ಕ, ರವಿಕುಮಾರ ಚವ್ಹಾಣ, ರಮೇಶ ಚಂದಾವರ, ಪ್ರೇಮಕುಮಾರ, ಇವರೆಲ್ಲರೂ ಜೋಯಿಡಾ ತಾಲೂಕಿಗೆ ಸಂಬAದಿಸಿದ ಅವೇಡಾ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಮಾವಳಂಗಿ ಗ್ರಾಮಕ್ಕೆ ಸಂಭAದಿಸಿದ ತಾಲೂಕ ಪಂಚಾಯತಿ ಅಧಿಕಾರಿಗಳು ಕೂಡಲೇ ಈ ಮೇಲಿನ ವಿಷಯದ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಕೇಳಿಕೊಂಡಿದ್ದಾರೆ.
ವರದಿ:- ವೇಣುಗೋಪಾಲ ಮದ್ಗುಣಿ.

error: