May 4, 2024

Bhavana Tv

Its Your Channel

ದಾಂಡೇಲಿ ಕಾರ್ಪೆಂಟರ್‌ಗಳಿಗೆ ಆದ ಅನ್ಯಾಯದ ಬಗ್ಗೆ ಪ್ರೇಮಾನಂದ ಗವಸರಿಂದ ಉಚ್ಛ ನ್ಯಾಯಾಲಯಕ್ಕೆ ಮೊರೆ.

ದಾಂಡೇಲಿ:-ದಾoಡೇಲಿ ತಾಲೂಕಿನ ಅಂಬೇವಾಡಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಕಾರ್ಪೆಂಟರ್‌ಗಳಿಗೆ ಸಂಘದ ಹೆಸರಿನಲ್ಲಿ ಸರ್ವೆ ಡಿಮ್ಯಾಂಡ ಮಾಡಿ ೧೫ ಎಕರೆ ಭೂಮಿ ಮಂಜೂರಿ ಮಾಡಿದ್ದು ಇರುತ್ತದೆ. ಅದೇ ಭೂಮಿಯಲ್ಲಿ ೫ ಎಕರೆ ಆಟೋ ನಗರಕ್ಕೆ ಹಾಗೂ ೧೦ ಸಾಯಿ ಎಕ್ಸಪೋರ್ಟ ಬೆಂಗಳೂರು ಇವರಿಗೆ ಮಂಜೂರು ಮಾಡಿ ನಗರದ ಕಾರ್ಪೆಂಟರ್ ಅನ್ಯಾಯವೆಸಗಲಾಗಿದೆ ಎಂದು ಕಾರ್ಪೆಂಟರ್ ಮತ್ತು ಟಿಂಬರ ಅಸೋಶಿಯೇಶನ್ ಅಧ್ಯಕ್ಷರು ಮತ್ತು ಸಾಮಾಜಿಕ ಹೋರಾಟಗಾರರಾದ ಪ್ರೇಮಾನಂದ ಗವಸ ಅವರ ಅಧ್ಯಕ್ಷತೆಯ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ದಾವೆಯನ್ನು ಹೂಡಿದರು. ನ್ಯಾಯಾಲಯವು ಕೆ.ಐ.ಎ.ಡಿ.ಬಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಕಾರ್ಪೆಂಟರ್ ಮತ್ತು ಟಿಂಬರ ಅಶೋಸಿಯೇಷನ್ ನವರು ಅಂದು ಸಚಿವರಾಗಿದ್ದ ಈಗಿನ ಶಾಸಕರಾದ ಆರ್ ವಿ ದೇಶಪಾಂಡೆಯವರಿಗೆ ಅಂಬೇವಾಡಿ ವಸಾಹತ ಪ್ರದೇಶದಲ್ಲಿ ಭೂಮಿ ಮಂಜೂರು ಮಾಡುವಂತೆ ಮನವಿ ದಿ:-೨೧-೦೩-೨೦೧೬ ರಂದು ಅಂದಿನ ಸಚಿವರು ಭೂಮಿ ಮಂಜುರಿಗೋಸ್ಕರ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತಕರಿಗೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ತಿಳಿಸಿದ್ದಾರೆ.ಅಂತರದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯವರು ಡಿಮ್ಯಾಂಡ ಸರ್ವೆ ಮಾಡುವಂತೆ ಪತ್ರ ಬರೆದಿದ್ದರೂ.
ದಾಂಡೇಲಿ ಸಾಗವಾನಿ ಕಟ್ಟಿಗೆ ಇತರೆ ಕಟ್ಟಿಗೆಯಕ್ಕಿಂತಲೂ ಉತ್ತಮ ಸ್ಥಾನ ಹೊಂದಿದೆ. ಈ ಕಟ್ಟಿಗೆಯನ್ನು ಬೇರೆ ಬೇರೆ ರಾಜ್ಯಗಳಿಂದಲೂ ಬಂದು ಕಟ್ಟಿಗೆಯನ್ನು ಖರೀದಿಸಿ ಒಯುತ್ತಾರೆ. ಹಲವಾರು ವರ್ಷಗಳಿಂದ ನಗರದಲ್ಲಿ ಸಾವಿರಾರು ಕಾರ್ಪೆಂಟರ್‌ಗಳು ವೃತ್ತಿ ಮತ್ತು ಉದ್ಯಮವನ್ನು ಅವಲಂಭಿಸಿದ್ದಾರೆ. ಹೀಗಿರುವಾಗ ಕಾರ್ಪೆಂಟರ್ ಚಟುವಟಿಕೆಗಾಗಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ವಿಸ್ತರಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಬೇರೆಯವರಿಗೆ ಜಮೀನು ಮಾರಾಟ ಮಾಡುವ ಮೂಲಕ ನಗರದ ಕಾರ್ಪೆಂಟರ್ ಗಳಿಗೆ ಅನ್ಯಾಯ ವೇಸಗಿದಂತಾಗಿದೆ. ಈ ನಿಟ್ಟಿನಲ್ಲಿ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಆದರೆ ಮನವಿಗೆ ಸ್ಪಂದನೆ ಸಿಗದಿದ್ದ ಹಿನ್ನಲೆಯಲ್ಲಿ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ದಾವೆಯನ್ನು ಸಲ್ಲಿಸಲಾಗಿದೆ ಎಂದು ನಗರದ ಕಾರ್ಪೆಂಟರ್‌ ಮತ್ತು ಟಿಂಬರ ಅಸೋಶಿಯೇಶನ್ ಅಧ್ಯಕ್ಷರಾದ ಪ್ರೇಮಾನಂದ ಗವಸರು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ

ವರದಿ ವೇಣುಗೋಪಾಲ ಮದ್ಗಣಿ

error: