May 4, 2024

Bhavana Tv

Its Your Channel

ಗೃಹ ಮಂಡಳಿಯಿOದ ಹಣ ತುಂಬಿಸಿ ಕೊಂಡವರಿಗೆ ಮನೆಯನ್ನು ನೀಡಿ- ರಾಘವೇಂದ್ರ ಗಡೆಪ್ಪ

ದಾಂಡೇಲಿ:- ದಾಂಡೇಲಿ ನಗರದಲ್ಲಿ ಈ ಹಿಂದೆ ಗೃಹ ಮಂಡಳಿಯವರು ಸಾರ್ವಜನಿಕರಿಂದ ಮನೆ ನಿವೇಶನಕ್ಕಾಗಿ ಕಾರ್ಪೊರೇಷನ್ ಬ್ಯಾಂಕನಲ್ಲಿ ಅರ್ಜಿಯೊಂದಿಗೆ ೧೫೦೦ ರೂಪಾಯಿದಿಂದ ೫೦೦೦ ರವರೆಗೆ ಹಣ ತುಂಬಿಸಿಕೊAಡು ೭ ವರ್ಷ ಆಗಿದ್ದರು ಸುಮಾರು ೨೫೦೦ ಫಲಾನುಭವಿಗಳಿಗೆ ಇಲ್ಲಿಯವರೆಗೆ ಮನೆ ನಿವೇಶನ ಸೀಗುವ ಯಾವುದೇ ಲಕ್ಷಣ ಕಾಣಿಸುತಿಲ್ಲಾ ಗೃಹಮಂಡಳಿಯವರ ನಿರ್ಲಕ್ಷ ಧೋರಣೆ ಫಲಾನುಭವಿಗಳಿಗೆ ತೊಂದರೆ ಆಗುತ್ತಿದೆ. ಇಲಾಖೆ ಭೂಮಿ ಬಗ್ಗೆಯು ನಿರ್ಲಕ್ಷ ಧೋರಣೆಯಿಂದ ಸರ್ಕಾರಿ ಭೂಮಿ ಸಹ ಅತಿಕ್ರಮಣ ಮಾಡಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಮನೆ ನಿವೇಶನ ಮಂಜೂರು ಮಾಡುವುದಿಲ್ಲಾ
ಅಧಿಕಾರಿಗಳೇ ಅತಿಕ್ರಮಣ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ. ಮಧ್ಯಮ ವರ್ಗದವರ ಮನೆ/ನಿವೇಶನ ಹಣಕಟ್ಟಿಕೊಳ್ಳುವದರ ಅವಕಾಶ ಇಲ್ಲಾ, ಆದರೆ ದಾಂಡೇಲಿ ನಗರದಲ್ಲಿ ಯಾವ ಇಲಾಖೆ ಜಮೀನು ಬೇಕಾದರು ಅತಿಕ್ರಮಣ ನಡೆಯುತ್ತಿದೆ. ಸುಮಾರು ೩೫೦೦ ಸಾವಿರ ಜನರಿಂದ ಕೆ ಎಚ್ ಬಿ ಯವರು ರಿಜಿಸ್ಟ್ರೇಷನ್ ಶುಲ್ಕವೆಂದು ಸಾವಿರಾರು ರೂಪಾಯಿ ಕಟ್ಟಿಸಿಕೊಂಡಿರುತ್ತಾರೆ. ಈ ಬಗ್ಗೆ ಸಾಕಷ್ಟು ಬಾರಿ
ಸಂಬAಧಿಸಿದ ಇಲಾಖೆಗೆ ಹಾಗೂ ಶಾಸಕರಿಗೆ ಸರ್ಕಾರಕ್ಕೆ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿ ವತಿಯಿಂದ ಮನವಿ ಸಲ್ಲಿಸಲಾಗಿದೆ.ಈ ಕುರಿತು ಯಾವುದೇ ಕ್ರಮ ಆಗುತ್ತಿಲ್ಲ.ದಾಂಡೇಲಿ ನಗರಸಭೆಯೇ ಕೆಪಿಸಿಯಿಂದ ಮರಳಿಸಿದ ೧೨.೭೮ಎಕರೆ ಭೂಮಿಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಲೇಔಟ್ ನಿರ್ಮಿಸಿ ಮದ್ಯಮ ವರ್ಗದವರ ಹಿತದೃಷ್ಟಿ ಇಟ್ಟುಕೊಂಡು, ಧರಣಿ
ನಿಗದಿಪಡಿಸಿ ಮನೆ ಇಲ್ಲದವರಿಗೆ ಮಾತ್ರ ನಿವೇಶನ ಸಿಗುವಂತೆ ಆದಷ್ಟು ಬೇಗ ಕ್ರಮಕೈಗೊಳ್ಳಬೇಕು. ನಿವೇಶನವನ್ನು ಪಲಾನುಭವಿಗಳಿಗೆ ನೀಡದೇ ಇದ್ದಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾವರಾದ ರಾಘವೇಂದ್ರ ಗಡೆಪ್ಪನವರ ಪ್ರತಿಕಾ ಪ್ರಕಟಣೆ ನೀಡಿ ಆಗ್ರಹಿಸಿದ್ದಾರೆ.

ರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

error: