May 5, 2024

Bhavana Tv

Its Your Channel

ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯಿಂದ ತಹಶೀಲ್ದಾರರಿಗೆ ಮನವಿ

ದಾಂಡೇಲಿ:- ದಾಂಡೇಲಿ ನಗರ ವ್ಯಾಪ್ತಿಯಲ್ಲಿ ಸುಮಾರು ೫೦೦ರಿಂದ ೬೦೦ ಜನ ವಯೋವೃದ್ದರಿಗೆ ವಿಧವಾವೇತನ, ಮುಂತಾದ ಯೋಜನೆಗಳನ್ನು ಸರ್ಕಾರದಿಂದ ಮಾಸಾಶನ ಪಡೆಯುತ್ತಿರುವ ಜೀವನದ ಸಂದ್ಯಾಕಾಲದಲ್ಲಿರುವ ಹಾಗೂ ಬಡತನದಲ್ಲಿ ಅತ್ಯಂತ ಕಷ್ಟದಲ್ಲೀ ಜೀವನ ನಡೆಸುತ್ತಿರುವ ಹಿರಿಯ ನಾಗರಿಕರ ಮಾಸಾಶನ ಕಳೆದ ಎಳೆಂಟು ತಿಂಗಳುಗಳಿAದ ಬರದೇ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಾರಣ ದಾಂಡೇಲಿ ತಹಶೀಲ್ದಾರ ಕಛೇರಿ ವತಿಯಿಂದ ಪೆನ್ಷನ್ ಅದಾಲತ್ ನಡೆಸಿ ನಿಂತಿರುವ ಮಾಸಾಶನವನ್ನು ಪುನಃ ನೀಡಲು ಎಲ್ಲಾ ಜನಪ್ರತಿನಿಧಿಗಳು, ಹಾಗೂ ನಮ್ಮ ಸಮಿತಿಯವತಿಯಿಂದಲೂ ಹಲವಾರು ಮನವಿ
ಸಲ್ಲಿಸಲಾಗಿದೆ ಅಲ್ಲದೇ ಈಗಾಗಲೇ ಅನೇಕ ಸಂಘಟನೆಗಳು ಸಹ ಹಲವಾರು ಬಾರಿ ಮನವಿ ಕೊಟ್ಟಿದ್ದಾರೆ, ಈ ಬಗ್ಗೆ ದಾಂಡೇಲಿ ತಹಶೀಲ್ದಾರರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮಾಡಬೇಕೆಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿಯ ಕಾರ್ಯದರ್ಶಿಯವರಾದ ಸತೀಶ ನಾಯ್ಕರವರು ಆಗ್ರಹಿಸಿದ್ದಾರೆ.
ವರದಿ: ವೇಣುಗೋಪಾಲ ಮದ್ಗುಣಿ

error: