April 26, 2024

Bhavana Tv

Its Your Channel

ಕಾಳಿ ನದಿ ನೀರು ಹೊರ ಜಿಲ್ಲೆಗಳಿಗೆ ಸಾಗಿಸುವುದನ್ನು ಮತ್ತು ಅಳ್ಳಾವರ ನೀರಿನ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯ

ದಾಂಡೇಲಿ :- ಕಾಳಿ ನದಿ ನೀರು ಹೊರ ಜಿಲ್ಲೆಗಳಿಗೆ ಸಾಗಿಸುವುದನ್ನು ಮತ್ತು ಅಳ್ಳಾವರ ನೀರಿನ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಪತ್ರಿಕಾ ಗೋಷ್ಟಿ ನಡೆಸಿದೆ

ಉತ್ತರ ಕನ್ನಡ ಜಿಲ್ಲೆಯ ಜೀವನದಿಯಾಗಿರುವ ಕಾಳಿ ನದಿಯು ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮ ಘಟ್ಟದಲ್ಲಿಯೇ ಅರಬ್ಬಿ ಸಮುದ್ರವನ್ನು ಸೇರುತ್ತದೆ .ಕಾಳಿ ನದಿಯು ತನ್ನ ಮಡಿಲುದಕ್ಕೊ 4ವಿದ್ಯುತ್ ಉತ್ಪಾದನಾ ಘಟಕಗಳನ್ನು ಹಾಗೂ ಅಣು ವಿದ್ಯುತ್ ಸ್ಥಾವರಕ್ಕೆ ನೀರು ಬಳಕೆಯಾಗಿ ಅರಬ್ಬಿ ಸಮುದ್ರವನ್ನು ಸೇರುವ ಈ ನದಿಯು ಪ್ರತಿಯೊಂದು ಹನಿ ಕೂಡಾನು ಸದ್ಬಳಕೆ ಆಗುತ್ತದೆ .
ತನ್ನ ಮಡಿಲುದಕ್ಕೂ ಕಾಳಿ ನದಿಯ ಪಾತ್ರದಲ್ಲಿರತಕ್ಕಂಥ ನಗರ ಮತ್ತು ಗ್ರಾಮಗಳಿಗೂ ಕೂಡ ಸಾಕಷ್ಟು ನೀರಿನ ಬಳಕೆಯಾಗುತ್ತದೆ. ಉದ್ಯಮಗಳಿಗೂ ಕೂಡ ಬಳಕೆಯಾಗುತ್ತದೆ ಹೀಗಿರುವ ನದಿಯನ್ನ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಗೆ 5 ಜಿಲ್ಲೆಗಳಿಗೆ ನೀರನ್ನು ಪೂರೈಸಬೇಕೆಂಬ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಮಂಡಿಸಿರುವುದು ನಮ್ಮ ಸಮಿತಿಗೆ ಬಹಳಷ್ಟು ನೋವಾಗಿದೆ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಅಭಾವವಿದೆ ಅವು ಇಡೀ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಯೊಜನೆಯನ್ನು ತರಬೇಕಾಗಿದೆ.
ದಾಂಡೇಲಿಯಲ್ಲಿ ಇನ್ನೂವರೆಗೂ ಕೂಡ ಸಮಗ್ರ ನೀರು ಪೂರೈಕೆ ಯೋಜನೆಯನ್ನು ಮಾಡಿರುವುದಿಲ್ಲ . ಮೂವತ್ತೈದು ವರ್ಷಗಳ ಹಿಂದೆ ಕಾಳಿನದಿ ಸೂಪ ಅಣೆಕಟ್ಟನ್ನ ಕಟ್ಟುತ್ತಾರೆ ಎಂದು ವಿಷಯ ತಿಳಿದಾಗ ಸೂಪಾ ಜನ ಬಹಳಷ್ಟು ನೊಂದು ಕೊಂಡಿದ್ದರು ಸುಂದರವಾದ ಪರಿಸರವನ್ನು ಹೇಗೆ ಬಿಟ್ಟು ಹೋಗೋದು ಎಂಬ ಚಿಂತೆಯಲ್ಲಿ ಮುಳುಗಿ ಕೊಂಡಾಗ ಮತ್ತೊಂದು ಕಡೆ ನಾವು ಕನ್ನಡ ನಾಡಿಗಾಗಿ ಬೆಳಕನ್ನು ಕೊಡುತ್ತಿದ್ದೇವೆ ಎಂಬ ಉದ್ದೇಶದಿಂದ ತಮ್ಮ ಸುಂದರವಾದ ಪರಿಸರವನ್ನು ಬಿಟ್ಟು ಪುನರ್ವಸತಿ ಕೇಂದ್ರ ವಾಗಿರತಕ್ಕಂತ ರಾಮ ನಗರಕ್ಕೆ ಹಾಗೂ ಜೋಯಡಾದ ಕೆಲವೊಂದು ಪ್ರದೇಶಗಳಿಗೆ ಹೋಗಿರುವುದು ಕಂಡುಬರುತ್ತದೆ .ವಿಪರ್ಯಾಸವೆಂಬAತೆ ಪುನರ್ವಸತಿ ಕೇಂದ್ರವೊAದು ಗುರ್ತಿಸಿಕೊಂಡಿರುವ ರಾಮನಗರದಲ್ಲಿ ಕೂಡಾ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ .ಕುಡಿಯುವ ನೀರಿನ ವ್ಯವಸ್ಥೆಯಿಂದ ಬಹಳಷ್ಟು ವಂಚಿತವಾಗಿರುವ ರಾಮನಗರಕ್ಕೆ ನೀರು ಬರುವುದನ್ನು ಇವತ್ತಿಗೂ ಕೂಡ ನಾವು ಕಾಣುತ್ತಿದ್ದೇವೆ .
ಈಗ ಜನಪ್ರತಿನಿಧಿಗಳು ಉತ್ತರ ಕನ್ನಡ ಜಿಲ್ಲೆಯ್ಲಲಿ ಅನೇಕ ತಾಲೂಕುಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಇದೆ. ದಾಂಡೇಲಿ ಗ್ರಾಮೀಣ ಪ್ರದೇಶಗಳಾದ ಹಸನ್ಮಾಳ, ಜನತಾ ಕಾಲನಿ, ಬೈಲ್ಪಾರ್ ಈ ಭಾಗದ ಜನರಿಗೆ ಕಾಳಿ ನದಿ ನೀರು ಸಿಗುವುದಿಲ್ಲಾ ಆದ್ರೆ ಹೊರ ಜಿಲ್ಲೆಗಳಿಗೆ ಕಾಳಿ ನದಿ ನೀರು ಸಾಗಿಸುವ ದೊಡ್ಡ ಹುನ್ನಾರ ನಡೆದಿದೆ ಎಂದು ಹೇಳುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸತ್ಯ ವಾದದ್ದು. ಇದನ್ನು ನಂಬಲು ಸಾಧ್ಯವೆ ಎಂದು ರಾಮನಗರದ ಸುತ್ತಮುತ್ತಲಿನ ಜನ ಕುಡಿಯುವ ನೀರಿನ ಬಗ್ಗೆ ಗುಸುಗುಸು ಮಾತನಾಡುತ್ತಿದ್ದಾರೆ.
ಈಗ ನೋಡಿದರೆ ಬಜೆಟ್ ನಲ್ಲಿ 5ಜಿಲ್ಲೆಗಳಿಗೆ ನೀರು ಪೂರೈಸಲಾಗುತ್ತದೆ ಎಂಬ ವಿಷಯವನ್ನು ಕೇಳಿ ದಿಗ್ಭ್ರಾಂತರಾಗಿದ್ದೇವೆ. ಈ ವಿಷಯ ವಿರೋಧಿಸಿ ದಾಂಡೇಲಿ ಜೊಯಿಡಾ ಹಳ್ಯಾಳದ ಹಾಗೂ ಜಿಲ್ಲೆಯಾದ್ಯಂತ ಜನ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ
ದಾಂಡೇಲಿ ಹಳಿಯಾಳ ಜೋಯಿಡಾ ಮತ ಕ್ಷೇತ್ರದ ಶಾಸಕರಾಗಿರುವ ದೇಶಪಾಂಡೆಯವರು ಕೂಡ ವಿರೋಧವನ್ನು ವ್ಯಕ್ತಪಡಿಸಿದ್ದಾರೆ .ಜಿಲ್ಲೆಯಾದ್ಯಂತ ಇನ್ನುಳಿದ ಬಹುತೇಕ ಶಾಸಕರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ನಾವು ಇಂಥ ಸಂದರ್ಭದಲ್ಲಿ ನಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದೇವೆ

ಕಾಳಿ ನದಿಯಿಂದ ಪಕ್ಕದ 5 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ .ಮೊದಲು ಜಿಲ್ಲೆಯಲ್ಲಿ ಸಮರ್ಪಕವಾದ ನೀರಿನ ಸದ್ಬಳಕೆ ಮಾಡಬೇಕು . ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಉದ್ಯೊಗ ಯೊಜನೆಗಳು ನದೀ ಪಾತ್ರದಲ್ಲಿರತಕ್ಕಂಥ ಜನರಿಗೆ ಆಗ್ಬೇಕು .ನದೀ ಪಾತ್ರದಲ್ಲಿರತಕ್ಕಂಥ ಜನಗಳನ್ನ ಸಬಲೀಕರಣ ಮಾಡುವಂತಹ ಯೋಜನೆಗಳು ಸಾಕಷ್ಟು ಪ್ರಮಾಣದಲ್ಲಿ ಬರಬೇಕು ಎಂದು ರಾಘವೇಂದ್ರ ಗೌಡಪ್ಪನವರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

error: