May 19, 2024

Bhavana Tv

Its Your Channel

ಎಸ್.ಎಸ್.ಎಲ್.ಸಿ ಫಲಿತಾಂಶ; ಹೊನ್ನಾವರ ತಾಲೂಕಿನ ಗೇರುಸೊಪ್ಪದ ನಗರಬಸ್ತಿಕೇರಿ ವಿದ್ಯಾರ್ಥಿ ಭೂಮಿಕಾ ನಾಯ್ಕ ರಾಜ್ಯಕ್ಕೆ ಪ್ರಥಮ.

ಹೊನ್ನಾವರ ತಾಲೂಕಿನ ಗೇರುಸೊಪ್ಪದ ನಗರಬಸ್ತಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವಿದ್ಯಾರ್ಥಿನಿಯೊರ್ವಳು ಕಾಡು ನಡಿಗೆಯಲ್ಲೇ ಶಾಲೆಗೆ ಬಂದು ಎಸ್ ಎಸ್ ಎಲ್ ಸಿಯಲ್ಲಿ ೬೨೫ ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ್ದಾಳೆ.
ಸಾಧಿಸುವ ಧೃಡವಾದ ಗುರಿ ಛಲ ಇದ್ದರೆ ಎನ್ನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅಪ್ಪಟ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಭೂಮಿಕಾ ನಾಯ್ಕ ಹಾಗೂ ದೀಕ್ಷಿತಾ ನಾಯ್ಕ ಮಾದರಿ, ಈ ಕುರಿತು ಒಂದು ವಿಶೇಷ ವರದಿ.
ಗೇರಸೊಪ್ಪಾ ಪ್ರೌಢಶಾಲೆಯಿಂದ ಬರೋಬ್ಬರಿ ೫ಕಿಮೀ ದೂರದಲ್ಲಿರುವ ಬೊಮ್ಮನಕೊಡ್ಲು ಗ್ರಾಮದಲ್ಲಿ ವಾಸಿಸುವ ಸಾಮಾನ್ಯ ಕೃಷಿ ಕುಟುಂಬದ ಕೃಷ್ಣ ನಾಯ್ಕರವರ ಪುತ್ರಿ ಕುಮಾರಿ ಭೂಮಿಕಾ. ಬಾಲ್ಯದಿಂದಲೂ ಚುರುಕಿನ ಬಾಲಕಿ. ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಯ ಮನೆಯಲ್ಲೇ ಮುಗಿಸಿದ ಇವಳು ಪ್ರೌಢ ಶಿಕ್ಷಣಕ್ಕಾಗಿ ಗೇರಸೊÀಪ್ಪಾದ ಸರ್ಕಾರಿ ಪ್ರೌಢಶಾಲೆಗೆ ಸೇರ್ಪಡೆಗೊಳ್ಳುತ್ತಾರೆ. ಆದರೆ ನಿತ್ಯವೂ ೫ ಕಿಮೀ ಕಾಲ ನಡುಗೆಯಲ್ಲೇ ಬರಬೇಕಾದ ಪರಿಸ್ಥಿತಿ. ತಂದೆ ಬಡ ಕೃಷಿಕ. ಕಳೆದ ಹಲವು ವರ್ಷಗಳಿಂದ ಸ್ವಲ್ಪ ಅರಣ್ಯ ಭೂಮಿಯಲ್ಲೇ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೃಷ್ಣ ನಾಯ್ಕ ದಂಪತಿಗಳ ಹಿರಿಯ ಪುತ್ರಿ ಭೂಮಿಕಾ. ಎಂಟನೇ ತರಗತಿಯಲ್ಲಿ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ತನ್ನ ಕಲಾ ಪ್ರದರ್ಶನ ಮಾಡಿದ್ದಳು. ಹಾಡು, ಕ್ವಿಜ್, ಪ್ರಬಂಧ ಸ್ಪರ್ಧೆಯಲ್ಲಿ ಬಹುಮುಖ ಪ್ರತಿಭೆ ಯಾಗಿದ್ದಳು. ಮನೆಯಲ್ಲಿ ಯಾರು ವಿದ್ಯಾವಂತರು ಇಲ್ಲದ್ದೆ ಇದ್ದರು ಕೂಡ, ಯಾವುದೇ ಟ್ಯೂಷನ್ ಕ್ಲಾಸ್ ಗಳಿಗೂ ಹೋಗದೆ, ಕೇವಲ ಶಿಕ್ಷಕರು ಕಲಿಸಿದ ಪಾಠವನ್ನೇ ಗಮನದಲ್ಲಿ ಇಟ್ಟು ಸರಕಾರಿ ಶಾಲೆಯಲ್ಲಿ ಓದಿದರು ಸಾಧನೆ ಮಾಡಬಹುದು ಎಂದು ತನ್ನ ಸ್ವಸಾಮರ್ಥ್ಯದ ಮೂಲಕ ಗೇರುಸೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಇತಿಹಾಸ ನಿರ್ಮಿಸಿದ್ದಾಳೆ.ಈ ಕುರಿತು ಭಾವನಾ ವಾಹಿನಿಯಯೊಂದಿಗೆ ಮಾತನಾಡಿದ ಭೂಮಿಕಾ ತನ್ನ ಶಿಕ್ಷಣ ಹಾಗೂ ಮುಂದಿನ ಗುರಿಯ ಕುರಿತು ಮತನಾಡಿದ್ದಾಳೆ.
ಶಾಲೆಯ ಮುಖ್ಯೋಧ್ಯಾಪಕ ನಾಗರಾಜ ಹೆಗಡೆಯವರು ಮಾತನಾಡಿ ನಮ್ಮ ಗೇರುಸೊಪ್ಪ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಸಾಧನೆ ಮಾಡುತ್ತಲೇ ಇದ್ದಾರೆ. ೨೦೧೧ರಲ್ಲಿ ಮಂಜುನಾಥ ಹೆಗಡೆ ರಾಜ್ಯಕ್ಕೆ ೫ ನೇ ಸ್ಥಾನ ಪಡೆದಿದ್ದು. ೨೦೧೪ರಲ್ಲಿ ಆದಿತ್ಯ ಶಂಕರ ಹೆಗಡೆ ಕಾರವಾರ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಬಂದಿದ್ದರು. ಈ ವರ್ಷ ಭೂಮಿಕಾ ನಾಯ್ಕ ರಾಜ್ಯಕ್ಕೆ ಪ್ರಥಮ ಬಂದಿದ್ದಾಳೆ. ದೀಕ್ಷಿತಾ ಮಹಾದೇವ ನಾಯ್ಕ ರಾಜ್ಯಕ್ಕೆ ೪ನೇ ಸ್ಥಾನ ಪಡೆದು ಸರಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಬಹುದು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದರು………..
ಭೂಮಿಕಾಳ ಪಾಲಕರು ಮಾತನಾಡಿ ಭೂಮಿಕಾ ಬಾಲ್ಯದಿಂದಲೂ ಪ್ರತಿಭಾವಂತ ಹುಡುಗಿ. ತನ್ನ ಕಠಿಣ ಪರಿಶ್ರಮದಿಂದ ಎಸ್ ಎಸ್ ಎಲ್ ಸಿಯಲ್ಲಿ ಈ ಸಾಧನೆ ಮಾಡಿದ್ದು ತಮಗೆ ಸಂತೋಷ ತಂದಿದೆ . ಭೂಮಿಕಾ ಮತ್ತು ಅದೇ ಶಾಲೆಯ ಇನ್ನೊರ್ವ ವಿದ್ಯಾರ್ಥಿನಿ ಕು. ದೀಕ್ಷಿತಾ ಇವರ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಭರವಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ತಿಳಿಸಿದ್ದಾರೆ……
ರಾಜ್ಯಕ್ಕೆ ಪ್ರಥಮ ಬಂದ ಭೂಮಿಕಾ ನಾಯ್ಕ ಮತ್ತು ನಾಲ್ಕನೇ ಸ್ಥಾನ ಪಡೆದ ದೀಕ್ಷಿತಾ ನಾಯ್ಕ ಇವರ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ನಮ್ಮದು ಎಂದು ದೂರವಾಣಿ ಕರೆಮಾಡಿ ತಿಳಿಸಿದ್ದಾರೆ ಎಂದು ಎರಡು ವಿದ್ಯಾರ್ಥಿಗಳ ಪಾಲಕರು ತಿಳಿಸಿದ್ದಾರೆ.
ಅದೇ ಶಾಲೆಯ ವಿದ್ಯಾರ್ಥೀನಿ ಕೂಡ ದಿಕ್ಷೀತಾ ಮಹಾದೇವ ನಾಯ್ಕ ೬೨೧ ಅಂಕಗಳನ್ನು ಪಡೆದು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಬಂದು ಶಾಲೆಗೆ ಕೀರ್ತಿ ತಂದಿದ್ದಾಳೆ.ದಿಕ್ಷೀತಾ ಹಾಗೂ ಅವರ ಪಾಲಕರು ಕೂಡ ಭಾವನಾ ವಾಹಿನಿಯೊಂದಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ..
ಇಬ್ಬರೂ ವಿದ್ಯಾರ್ಥೀಗಳು ಆಯ್.ಎ.ಎಸ್ ಮುಗಿಸಿ ಜಿಲ್ಲಾಧಿಕಾರಿಯಾಗುವ ಇಂಗಿತರವನ್ನು ವ್ಯಕ್ತ ಪಡಿಸಿದ್ದಾರೆ.
ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಭಾವನಾ ವಾಹಿನಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸುತ್ತಿದೆ………..
ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: