May 19, 2024

Bhavana Tv

Its Your Channel

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ನಾಯ್ಕಳಿಗೆ ಹರಿದು ಬಂದ ಅಭಿನಂದನೆಯ ಮಹಾಪುರ.

ಹೊನ್ನಾವರ : ಎಸ್. ಎಸ್. ಎಲ್. ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಬಂದು ತಾಲೂಕಿನ ಹೆಮ್ಮೆ ಹೆಚ್ಚಿಸಿದ ಗೇರುಸೊಪ್ಪದ ನಗರಬಸ್ತಿಕೇರಿಯ ಬೊಮ್ಮನಕೊಡ್ಲಿನ ಭೂಮಿಕಾ ಕೃಷ್ಣ ನಾಯ್ಕಳಿಗೆ ಅಭಿನಂದನೆಯ ಮಹಾಪುರವೇ ಹರಿದು ಬರುತ್ತಿದೆ. ಜಿಲ್ಲೆಯ ಗಣ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಾಧ್ಯಮದವರು ರಾಜ್ಯ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಫಲಿತಾಂಶ ಬಂದ ದಿನದಿಂದ ಪ್ರಾರಂಭಗೊAಡ ಸನ್ಮಾನ, ಅಭಿನಂದನೆಗಳು ಪ್ರತಿ ದಿನ ಇಲಾಖೆಯವರು, ಸಂಘ ಸಂಸ್ಥೆಯವರು ಬಂದು ಸತ್ಕರಿಸುತ್ತಿದ್ದಾರೆ. ಫಲಿತಾಂಶ ಬಂದ ದಿನ ಗೇರುಸೊಪ್ಪ ಪ್ರೌಢ ಶಾಲೆಯ ಮುಖ್ಯಧಾಪಕರು ಮತ್ತು ಶಿಕ್ಷಕ ವೃಂದದವರು ಬಂದು ಅಭಿನಂದಿಸಿ ಸನ್ಮಾನಿಸಿದ್ದಾರೆ. ಅದೇ ದಿನ ರಾತ್ರಿ ಸ್ಥಳೀಯ ನಗರಬಸ್ತಿಕೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಜುನಾಥ ನಾಯ್ಕ, ಉಪಾಧ್ಯಕ್ಷರು, ಗ್ರಾಮ ಪಂಚಾಯತ ಸದಸ್ಯರು ಸನ್ಮಾನ ಮಾಡಿ ಮುಂದಿನ ಅಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಗೇರುಸೊಪ್ಪದ ಕನ್ನಡ ಜ್ಯೋತಿ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸನ್ಮಾನ ಮಾಡಿ ಕಿರು ಸಹಾಯ ಮಾಡಿದ್ದಾರೆ.

ಮಂಗಳವಾರ ಭಟ್ಕಳ ಸಹಾಯಕ ಉಪವಿಭಾಗಾಧಿಕಾರಿಗಳಾದ ಮಮತಾದೇವಿ, ತಹಸೀಲ್ದಾರ ವಿವೇಕ್ ಶೆಣ್ವಿ, ಹಾಗೂ ಉಳಿದ ಅಧಿಕಾರಿಗಳ ಜೊತೆ ಸನ್ಮಾನ ಮಾಡಿ ಸತ್ಕರಿಸಿ ಅಭಿನಂದಿಸಿದರು. ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ ನಾಯ್ಕ ರವರು ಸ್ಥಳೀಯ ಗ್ರಾ. ಪಂ. ಅಧ್ಯಕ್ಷರು ಸದಸ್ಯರು, ಪಕ್ಷದ ಮುಖಂಡರೊAದಿಗೆ ಭೂಮಿಕಾ ನಾಯ್ಕರವರ ಮನೆಗೆ ತೆರಳಿ ಸನ್ಮಾನ ಮಾಡಿ ಹತ್ತು ಸಾವಿರ ಆರ್ಥಿಕ ಸಹಾಯ ಮಾಡಿ ನೆರವು ನೀಡಿ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಹರೀಶ ಗಾ೦ವ್ಕರ, ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸವಿತಾ ನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್. ಎನ್. ಹೆಗಡೆ, ಇ. ಸಿ. ಓ ಪ್ರಮೋದ ನಾಯ್ಕ, ಉಪನಿರ್ದೇಶಕ ಕಛೇರಿಯ ಇ. ಸಿ. ಓ ಇಲಾಜ್ ಅಹ್ಮದ್ ನಧಾಪ್ ಮತ್ತು ಉಳಿದ ಅಧಿಕಾರಿಗಳೊಂದಿಗೆ ಇಲಾಖೆಯ ವತಿಯಿಂದ ಪ್ರಥಮ ಬಂದ ಭೂಮಿಕಾ ನಾಯ್ಕ ಮತ್ತು ನಾಲ್ಕನೇ ಸ್ಥಾನ ಪಡೆದ ದೀಕ್ಷಿತಾ ನಾಯ್ಕಳಿಗೆ ಸನ್ಮಾನಿಸಿ ಮುಂದಿನ ಶಿಕ್ಷಣಕ್ಕೆ ಶುಭ ಹಾರೈಸಿದರು.

ರಾಜ್ಯ ಸರಕಾರಿ ನೌಕರರ ಸಂಘದ ಹೊನ್ನಾವರ ತಾಲೂಕಾ ಘಟಕದ ಅಧ್ಯಕ್ಷರಾದ ಆರ್. ಟಿ. ನಾಯ್ಕ, ರಾಜ್ಯ ಪರಿಷತ್ ಸದಸ್ಯರಾದ ಎಂ. ಜಿ. ನಾಯ್ಕ, ಕಾರ್ಯದರ್ಶಿ ಅಣ್ಣಪ್ಪ ಮುಕ್ರಿ, ಉಪಾಧ್ಯಕ್ಷರಾದ ಚಂದ್ರಶೇಖರ ಕಳಸ, ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ ಹೆಗಡೆ ಜೊತೆಗೂಡಿ ಭೂಮಿಕಾಳಿಗೆ ಸನ್ಮಾನ ಮಾಡಿ ಐದು ಸಾವಿರ ಆರ್ಥಿಕ ನೆರವು ನೀಡಿದರು. ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯ್ಕ ಕೂಡ ಭೇಟಿ ಸಹಕರಿಸುವುದಾಗಿ ತಿಳಿಸಿದ್ದಾರೆ.
ಇನ್ನೂ ಅನೇಕ ಜನರು ದೂರವಾಣಿ ಕರೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯಕ್ಕೆ ಪ್ರಥಮ ಬಂದ ಭೂಮಿಕಾ ನಾಯ್ಕ ಮತ್ತು ನಾಲ್ಕನೇ ಸ್ಥಾನ ಪಡೆದ ದೀಕ್ಷಿತಾ ನಾಯ್ಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸತ್ಕಾರಗಳು ಹುಡುಕಿಕೊಂಡು ಬರುತ್ತಿದೆ. ಇವರು ಕೂಡ ಮುಂದೆ ಓದಿ ಉನ್ನತ ಶಿಕ್ಷಣ ಪಡೆದು ಐ ಎ ಎಸ್ ಮಾಡುವ ಕನಸು ಹೊತ್ತಿದ್ದಾರೆ. ಇವರ ಎಲ್ಲಾ ಆಶಯಗಳು ಇಡೇರಲಿ ಎಂದು ಭಾವನಾ ಟಿವಿ ಆಶಿಸುತ್ತದೆ.

error: