May 19, 2024

Bhavana Tv

Its Your Channel

ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಜಾರಿ

ಹೊನ್ನಾವರ; ಕೃಷಿ ಇಲಾಖೆ, ಹೊನ್ನಾವರ ತಾಲೂಕಾ ಪಂಚಾಯತ, “ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಜಾರಿಗೆ ತಂದಿದೆ ಎಂದು ಕೃಷಿ ಅಧಿಕಾರಿ ಪುನೀತಾ ಎಸ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ರೈತ ಬಾಂಧವರಿಗೆ ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡುವ ಒಂದು ವಿನೂತನ ಯೋಜನೆ ಇದಾಗಿದ್ದು ಬೆಳೆ ಸಮೀಕ್ಷೆ ಆ್ಯಪ್ ಇದಾಗಿದೆ.
ರೈತರು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ಬಳಸಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “Farmers Crop Survey App 2021-22″ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆರ್ಥಿಕ ವರ್ಷ ಹಾಗೂ ಋತು ದಾಖಲಿಸಿದ ಬಳಿಕ ರೈತರ ಹೆಸರು ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸಬೇಕು. ನಮೂದಿಸಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿ ನೋಂದಣಿ ಮಾಡಿಕೊಳ್ಳುವುದು
ಆ ಬಳಿಕ ವಿವರ ಡೌನಲೋಡ ಮಾಡುವುದು ನಂತರ ಪಹಣಿ ಮತ್ತು ಮಾಲೀಕರ ವಿವರದ ಮೇಲೆ ಕ್ಲಿಕ್ ಮಾಡಬೇಕು.
ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ಸರ್ವೆ ನಂ ನಮೂದಿಸುವುದು. ನಂತರ ಕ್ಷೇತ್ರ ನಮೂದಿಸುವುದು. ರೈತರು ಸ್ವಂತ ಜಮೀನಿನ ವಿವರ ದಾಖಲಿಸುತ್ತಿದ್ದರೆ ಸ್ವತಃ ಆಯ್ಕೆಮಾಡುವುದು. ಒಂದು ವೇಳೆ ಸ್ನೇಹಿತರು ಸಂಬoಧಿಕರ ಹೊಲದ ಮಾಹಿತಿಯನ್ನು ಅಪ್‌ಲೋಡ ಮಾಡುತ್ತಿದ್ದರೆ ರೈತರ ಪರವಾಗಿ ಮಾಹಿತಿಯನ್ನು ದಾಖಲಿಸುತ್ತಿದ್ದೇನೆಂದು ಆಯ್ಕೆ ಮಾಡಿ ಆ ರೈತರ ಮೊಬೈಲ್ ಸಂಖ್ಯೆಯನ್ನು ದಾಖಲಿಸುವುದು ಮತ್ತು ಪಹಣಿ ವಿವರ ಡೌನ್‌ಲೋಡ್ ಮಾಡುವುದು.
ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ವಿವರಗಳನ್ನು ದಾಖಲಿಸಿ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಛಾಯಾ ಚಿತ್ರಗಳನ್ನು ತೆಗೆದು ಆಪ್‌ಲೋಡ್ ಮಾಡಲಾದ ಬೆಳೆ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುವುದು. ಸಂಗ್ರಹಿಸಲಾದ ಬೆಳೆ ಮಾಹಿತಿಯನ್ನು ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ ಪರಿಪಾಠ ಬೆಂಬಲ ಬೆಲೆ ಬೆಳೆ ಸಾಲ ನೀಡಲು ಬಳಸಲಾಗುವುದು.

ಸ್ವಾಭಿಮಾನಿ ರೈತನನ್ನಾಗಿಸುದು. ರೈತರಿಂದಲೇ ಬೆಳೆ ಸಮೀಕ್ಷೆಯ ಉದ್ದೇಶವಾಗಿದೆ. ಪಹಣಿಯಲ್ಲಿ ಬೆಳೆ ವಿವರ ದಾಖಲಿಸುದು.ಎನ್.ಡಿ.ಆರ್.ಎಫ್ / ಎನ್.ಡಿ.ಆರ್.ಎಫ್. ಐಡಿಯಲ್ಲ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಅನೂಕೂಲವಾಗಲಿದೆ. ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ಬಿಸ್ತೀರ್ಣ ವರದಿ ಕಾರ್ಯದಲ್ಲಿ ಅನೂಕೂಲವಾಗಲಿದೆ. ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು. ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಅನೂಕೂಲವಾಗಲಿದೆ.
ತಾವು ಬೆಳೆದ ಬೆಳೆಯನ್ನು ಮೊಬೈಲ್ ಆ್ಯಪ್ ಬಳಸಿ, ಬೆಳೆ ಸಮೀಕ್ಷೆ ಮಾಡಿ ತಮ್ಮ ಪಹಣಿಯಲ್ಲಿ ತಾವೇ ಬೆಳೆ ನಮೂದಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ೦೮೩೮೭-೨೨೦೬೪೩ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

error: