May 19, 2024

Bhavana Tv

Its Your Channel

ಸಾರ್ವಜನಿಕ ಗಣೇಶೊತ್ಸವ ಹಿನ್ನಲೆ ಹೊನ್ನಾವರ ಮಿನಿವಿಧಾನಸೌದದಲ್ಲಿ ಸಭೆ

ಹೊನ್ನಾವರ: ಸಾರ್ವಜನಿಕ ಗಣೇಶೊತ್ಸವ ಹಿನ್ನಲೆಯಲ್ಲಿ ಹೊನ್ನಾವರ ಮಿನಿವಿಧಾನಸೌದದಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್ ಅಧ್ಯಕ್ಷತೆಯಲ್ಲಿ ಗಣೇಶೊತ್ಸವ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು.

ಸಿಪಿಐ ಶ್ರೀಧರ ಎಸ್. ಆರ್ ಮಾತನಾಡಿ ಸರಳವಾಗಿ ಭಕ್ತಿಪೂರ್ವಕವಾಗಿ ಆಚರಿಸಬೇಕಿದೆ. ತಾಲೂಕಿನ ಎರಡು ಪೋಲಿಸ್ ಠಾಣಿಯ ವ್ಯಾಪ್ತಿಯ ೧೬೩ ಕಡೆಗಳಲ್ಲಿ ಸಾರ್ವಜನಿಕ ಗಣೆಶೊತ್ಸವ ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಸ್ಥಳಿಯಾಡಳಿತದಿಂದ ಅನುಮತಿ ಪಡೆದು ಕೋವಿಡ್ ನಿಯಮಾನುಸಾರವಾಗಿ ಹಬ್ಬ ಆಚರಿಸಬೇಕಿದೆ. ಯಾವುದೇ ಮನೊರಂಜನೆ ಕಾರ್ಯಕ್ರಮ ಅಥವಾ ಮೆರವಣೆಗೆ ಅವಕಾಶವಿಲ್ಲ. ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮಾನುಸಾರ ಹಬ್ಬ ಆಚರಿಸಬೇಕಿದೆ. ವಿದ್ಯುತ್ ಅವಘಡ, ಅಗ್ನಿ ಅವಘಡ ಸಂಭವಿಸದAತೆ ಮುಂಜಾಗ್ರತೆ ವಹಿಸುವುದು ಸಂಘಟಕರ ಜವಬ್ದಾರಿಯಾಗಿದೆ. ಶಾಂತಿ ಸೌಹರ್ದತೆಯಿಂದ ಹಬ್ಬ ಆಚರಿಸೋಣ ಎಂದರು.

ವಿದ್ಯುತ್ ಹಾಗೂ ಅಗ್ನಿಶಾಮಕ, ಮಂಕಿ ಹಾಗೂ ಹೊನ್ನಾವರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಇಲಾಖಾವಾರು ಸುರಕ್ಷತಾ ಕ್ರಮದ ಕುರಿತು ಮಾಹಿತಿ ನೀಡಿದರು.

ಸರ್ಕಾರದ ನೀತಿ ನಿಯಮವಳಿಯಂತೆ ಇತರರಿಗೆ ಮಾದರಿ ರೀತಿಯಲ್ಲಿ ಹಬ್ಬ ಆಚರಿಸುವ ಸಮಿತಿಗೆ ಪ್ರಥಮ, ದ್ವೀತೀಯ, ತೃತೀಯ ಸ್ಥಾನವನ್ನು ತಾಲೂಕ ಆಡಳಿತ ಆಯೋಜಿಸಿರುವುದು ಈ ಬಾರಿಯ ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿದರು. ಪಿಎಸೈಗಳಾದ ಶಶಿಕುಮಾರ, ಸಾವಿತ್ರಿ ನಾಯಕ, ಮಹಾಂತೇಶ ನಾಯಕ, ಅಶೋಕ ಮಾಳಬಾಗಿ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪ.ಪಂ. ಮುಖ್ಯಾಧಿಕಾರಿಗಳಾದ ಪ್ರವೀಣ ನಾಯಕ, ಅಜಯ್ ಭಂಡಾರಕರ್, ಅಗ್ನಿಶಾಮಕ ಇಲಾಖೆಯ ಜಯಾನಂದ ಪಟಗಾರ, ಹೆಸ್ಕಾಂ ಸಹಾಯಕ ಅಭಿಯಂತರಾದ ರಾಮಕೃಷ್ಣ ಭಟ್ ಲಯನ್ಸ ಅಧ್ಯಕ್ಷ ವಿನೋದ ನಾಯ್ಕ ಹಾಗೂ ತಾಲ್ಲೂಕಿನ ವಿವಿಧ ಗಣೇಶೋತ್ಸವಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ
error: