May 19, 2024

Bhavana Tv

Its Your Channel

ಹೊನ್ನಾವರ ತಾಲ್ಲೂಕ ಪಂಚಾಯತ ಸಭೆಯಲ್ಲಿ ಜಮಾಬಂಧಿ ಕಾರ್ಯಕ್ರಮ

ಹೊನ್ನಾವರ:ಜಿಲ್ಲಾಪಂಚಾಯತ ಉತ್ತರಕನ್ನಡ, ತಾಲ್ಲೂಕು ಪಂಚಾಯತ ಹೊನ್ನಾವರ ೨೦೨೦-೨೧ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ತಾಲ್ಲೂಕು ಪಂಚಾಯತ ಸಭಾಭವನ ಹೊನ್ನಾವರದಲ್ಲಿ ಸೋಮವಾರ ನಡೆಯಿತು.

ಉ.ಕ ಜಿಲ್ಲಾಪಂಚಾಯತ ಜಮಾಬಂಧಿ ಅಧಿಕಾರಿ ಹಾಗೂ ಉಪಕಾರ್ಯದರ್ಶಿ ನಾಗೇಶ ರಾಯ್ಕರವರ ಉಪಸ್ಥಿತಿಯಲ್ಲಿ ನಡೆಯಿತು. ತಾಲ್ಲೂಕು ಪಂಚಾಯತ ಅಧಿಕಾರಿಗಳು ಇಲಾಕೆಯ ಪ್ರಗತಿ ವರದಿ, ವಾರ್ಷಿಕ ಲೆಕ್ಕಾಚಾರ ಮಂಡಿಸಿದರು. ವಿವಿಧ ಕಾಮಗಾರಿಗಳ ಅನುಷ್ಠಾನದ ಕುರಿತು ಚರ್ಚೆ ಹಾಗೂ ಸಂವಾದ ನಡೆಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಮಾಬಂಧಿ ಅಧಿಕಾರಿ ನಾಗೇಶ ರಾಯ್ಕರವರು ಸರ್ಕಾರಿ ಸುತ್ತೋಲೆಯ ಪ್ರಕಾರ ಬರುವ ಎಲ್ಲಾ ಅನುದಾನಗಳು ಬಳಕೆಯಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಸ್ಪಂದಿಸುವ ಕಾಮಗಾರಿಗಳ ಅನುಷ್ಠಾನ ಆಗಬೇಕು. ಕಳೆದ ವರ್ಷ ಉತ್ತಮವಾಗಿ ಕೆಲಸಗಳು ನಡೆದಿದ್ದು ಈ ವರ್ಷ ಎಲ್ಲಾ ಅನುದಾನಗಳು ಅನುಷ್ಠಾನಗೊಳ್ಳಲಿ. ತಾಲ್ಲೂಕು ಪಂಚಾಯತ ಕೋಟಿ ಅನುದಾನ,೧೫ನೇ ಹಣಕಾಸಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾರ್ಯನಿರ್ವಸಿ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯತ ಆಡಳಿತಾಧಿಕಾರಿ ವಿನೋದ ಅಣ್ವೇಕರರವರು ಮಾತನಾಡಿ ಕಳೆದ ನಾಲ್ಕು ತಿಂಗಳಿAದ ನಾನು ಇಲ್ಲಿ ಕಾರ್ಯನಿರ್ವಹಿಸಿದ್ದು ತಾಲ್ಲೂಕು ಪಂಚಾಯತ ಕಾರ್ಯನಿರ್ವಣಾಧಿಕಾರಿಯವರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.

ತಾಲ್ಲೂಕು ಪಂಚಾಯತ ಕಾರ್ಯನಿರ್ವಣಾಧಿಕಾರಿ ಸುರೇಶ್ ನಾಯ್ಕರವರು ಮಾತನಾಡಿ ಜಿಲ್ಲಾಪಂಚಾಯತ ಮುಖ್ಯಕಾರ್ಯನಿರ್ವಣಾಧಿಕಾರಿ ಪ್ರಿಯಾಂಗಾರವರ ಮಾರ್ಗದರ್ಶನದಲ್ಲಿ ಇಲಾಖೆಯ ಸುತ್ತೋಲೆಗಳನ್ನು ಅನುಷ್ಠಾನ ಮಾಡುತ್ತಿದ್ದೆವೆ. ಜನಪರವಾಗಿ ಕೆಲಸಮಾಡಲು ಎಲ್ಲಾ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂದರು.

ತಾಲ್ಲೂಕು ಪಂಚಾಯತ ಲೆಕ್ಕಾಧಿಕಾರಿ ವಂದಿಸಿದರು. ಆರೋಗ್ಯ , ಸಾರ್ವಜನಿಕ ಶಿಕ್ಷಣ, ಹಿಂದುಳಿದ ವರ್ಗ ಹಾಗೂ ಅನೇಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ

error: