April 26, 2024

Bhavana Tv

Its Your Channel

ಹೊನ್ನಾವರದಲ್ಲಿ ಸರ್ಕಾರದ ನಿಯಮದಂತೆ ಸರಳವಾಗಿ ಆಚರಿಸುತ್ತಿರುವ ನವರಾತ್ರಿ ಕಾರ್ಯಕ್ರಮ

ಹೊನ್ನಾವರ: ಜಗನ್ಮಾತೆ ಒಂಬತ್ತು ರೂಪಗಳಲ್ಲಿ ಆರಾಧಿಸುವ ನವರಾತ್ರಿ ಕಾರ್ಯಕ್ರಮಗಳು ಸರ್ಕಾರದ ನಿಯಮದಂತೆ ಸರಳವಾಗಿ ನಡೆಯುತ್ತಿದೆ. ಪ್ರತಿ ನಿತ್ಯವು ದೇವಿ ದೇವಸ್ಥಾನಗಳಲ್ಲಿ ಭಕ್ತರು ಭಕ್ತಿ ಶ್ರದ್ಧೆಯಿಂದ ಪೂಜೆಸಲ್ಲಿಸುತ್ತಿದ್ದಾರೆ ಇದರ ಬಗ್ಗೆ ಒಂದು ವರದಿ.

ಹೊನ್ನಾವರ ತಾಲ್ಲೂಕಿನಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದಿರುವ ಪಟ್ಟಣದ ಮಾರಮ್ಮಾ ದಂಡಿನಾ ದುಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮಗಳು ನಡೆಯುತ್ತಿವೆ. ನಿತ್ಯವು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ನೂರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಅತ್ಯಂತ ಪುರಾತನವಾದ ಇತಿಹಾಸವನ್ನು ಹೊಂದಿರುವ ಈ ದೇವಾಲಯದಲ್ಲಿ ನವರಾತ್ರಿ ಹಾಗೂ ವಿಜಯದಶಮಿಯ ಉತ್ಸವಗಳು ಅತ್ಯಂತ ವಿಶೇಷವಾಗಿವೆ..
ಹೊನ್ನಾವರ ತಾಲ್ಲೂಕಿನ ಮಂಕಿಯ ದೇವಿಕಾನ ದುರ್ಗಾದೇವಿ ದೇವಿ ದೇವಸ್ಥಾನವು ಅತ್ಯಂತ ವಿಶೇಷ ದೇವಸ್ಥಾನ ವಾಗಿದ್ದು ಇಲ್ಲಿಯು ನವರಾತ್ರಿ ಉತ್ಸವ ವಿಜೃಂಭಣೆಯಿoದ ನಡೆಯುತ್ತವೆ. ಯಕ್ಷಗಾನ ಇಲ್ಲಿಯ ವಿಶೇಷ ಸೇವೆಯಾಗಿದೆ. ನವರಾತ್ರಿ ಒಂಬತ್ತು ದಿನಗಳ ಕಾಲ ನಿತ್ತವು ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಗ್ರಾಮದೇವತೆಯದೆ ಪ್ರಸಿದ್ಧಿ ಪಡೆದ ಈ ದೇವಸ್ಥಾನದಲ್ಲಿ ಗ್ರಾಮದ ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಧನ್ಯರಾಗುತ್ತಾರೆ…

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ.

error: