April 26, 2024

Bhavana Tv

Its Your Channel

ಸಿಬ್ಬಂದಿಗಳಿಗೆ ದೊರೆಯದ ವೇತನ ಹೊನ್ನಾವರ ಡಯಾಲಿಸಿಸ್ ಘಟಕ ಬಂದ

ಹೊನ್ನಾವರ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದ ಸಿಬ್ಬಂದಿಗಳು ಸರಿಯಾಗಿ ವೇತನ ದೊರಕದ ಹಿನ್ನಲೆಯಲ್ಲಿ ಕೆಲಸಕ್ಕೆ ಬಾರದೆ ರೋಗಿಗಳು ಪರದಾಡುವ ಘಟನೆ ಸೋಮವಾರ ನಡೆದಿದೆ.

ಜಿಲ್ಲೆಯ ಎಲ್ಲಾ ಡಯಾಲಿಸಿಸ್ ಘಟಕದ ನೌಕರರು ಸೇರಿ ಕಾರವಾರದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರು. ಹಾಗೆಯೇ ಹೊನ್ನಾವರ ಘಟಕವನ್ನು ಬಂದ್ ಮಾಡಿ ಸಿಬ್ಬಂದಿಗಳು ಕಾರವಾರಕ್ಕೆ ಹೋದ ಕಾರಣ ಹೊನ್ನಾವರ ಘಟಕಕ್ಕೆ ಬೀಗ ಜಡಿಯಲಾಗಿದೆ.

ಪ್ರತಿದಿನದಂತೆ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳು ಹೊನ್ನಾವರ ಸರಕಾರಿ ಆಸ್ಪತ್ರೆಗೆ ಬಂದು ಡಯಾಲಿಸಿಸ್ ಘಟಕದ ಎದುರು ತಮ್ಮ ನೋವು ತೊಡಿಕೊಂಡರು.ನಮಗೆ ಡಯಾಲಿಸಿಸ್ ನಡೆಯುತ್ತಲೆ ಇರಬೇಕು, ಅದು ಒಂದು ಸಲ ಬಂದಾದರು ನಮ್ಮ ಜೀವಕ್ಕೆ ಅಪಾಯವಿದೆ. ಸಿಬ್ಬಂದಿಗಳಿಗೆ ಸಂಬಳ ನೀಡದ ಕಾರಣ ನಮಗೆ ಈ ಕಷ್ಟ ಒದಗಿಬಂದಿದೆ. ಸಂಬAಧ ಪಟ್ಟವರು ಅವರ ಸಮಸ್ಯೆ ಬಗೆಹರಿಸಿಕೊಟ್ಟು, ನಮಗೆ ಅನುಕೂಲ ಮಾಡಿಕೊಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.
ಹೆಚ್ಚಿನದಾಗಿ ಬಡವರೇ ಡಯಾಲಿಸಿಸ್ ಚಿಕಿತ್ಸೆಗೆ ಬರುತ್ತಿದ್ದು, ಒಂದೊಮ್ಮೆ ಇದು ಸ್ಥಗಿತಗೊಂಡಲ್ಲಿ ಖಾಸಗಿ ಆಸ್ಪತ್ರೆಗೆ ಹೋಗುವ ಸಾಮರ್ಥ್ಯ ನಮ್ಮಲಿಲ್ಲ ದಯವಿಟ್ಟು ನಮಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಿ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಸರಕಾರ ನೀಡಿದ ಸಂಬಳವನ್ನು ಸಿಬ್ಬಂದಿಗಳಿಗೆ ಪೂರ್ತಿಯಾಗಿ ನೀಡುತ್ತಿಲ್ಲ, ಕೊಡುವ ವೇತನವನ್ನೇ ಕಡಿತಗೊಳಿಸಿ ನೀಡಲಾಗುತ್ತಿದೆ. ಇದು ಯಾಕೆ ಹೀಗೆ ಮಾಡುತ್ತಿದ್ದಾರೆ. ಪೂರ್ತಿ ವೇತನ ಇಡೀ ಎಂದು ಸಿಬ್ಬಂದಿಗಳು ಪಟ್ಟು ಹಿಡಿದಿದ್ದಾರೆ. ಸಿಬ್ಬಂದಿಗಳಿಗೆ ನೇರ ವೇತನ ನೀಡದೆ ಎಜೆನ್ಸಿ ಮೂಲಕ ನೀಡುತ್ತಿರುವ ಕಾರಣ ಸಂಬಳ ಕಡಿತಗೊಳ್ಳುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಹಲವು ಬಾರಿ ಡಯಾಲಿಸಿಸ್ ಘಟಕದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಜನಪ್ರತಿನಿಧಿಗಳು ಮನವಿ ಮಾಡಿಕೊಂಡರು ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ರೋಗಿಗಳು ಸಮಸ್ಯೆಗಳಿಂದ ಬರದಾಡುವಂತಾoಗಿದೆ.
ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ

error: