May 4, 2024

Bhavana Tv

Its Your Channel

ಅಳ್ಳಂಕಿ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ

ಹೊನ್ನಾವರ ತಾಲೂಕಿನ ಅಳ್ಳಂಕಿಯ ಸರಕಾರಿ ಪ.ಪೂ. ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯoದು ಹಿರಿಯ ಕವಯಿತ್ರಿ ಸೀತಾಲಕ್ಷ್ಮಿ ಹೆಗಡೆ, ಹೈಗುಂದ ಇವರನ್ನು ಸನ್ಮಾನಿಸಲಾಯಿತು.

  ಕಾರ್ಯಕ್ರಮದ ಅತಿಥಿಯಾಗಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಸೀತಾಲಕ್ಷ್ಮಿಯವರು  "ಆದರ್ಶ ಪುರುಷ ಶ್ರೀ ರಾಮನನ್ನು ಲೋಕಕ್ಕೆ ಕಾವ್ಯಮಯವಾಗಿ ಪರಿಚಯಿಸಿದ ವಾಲ್ಮೀಕಿಯಂಥ ಕವಿ ಮತ್ತೊಬ್ಬರಿಲ್ಲ ಎಂಬುದಕ್ಕೆ ರಾಮಾಯಣ ಕಾವ್ಯ ಇಂದಿಗೂ ಪ್ರಸ್ತುತ ವಾಗಿದೆ" ಎಂದು ನುಡಿದರು.
 ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಎಸ್. ಹೆಗಡೆಯವರು " ವಾಲ್ಮೀಕಿ ಜಯಂತಿಯು ಕೇವಲ ಒಂದು ಭಾಷೆಗೆ, ಜನಾಂಗಕ್ಕಲ್ಲ, ವಿಶ್ವದ 'ಕವಿಗಳ ದಿನ' ವಾಗಿ ಆಚರಿಸಲ್ಪಡಬೇಕು, ಅಂತೆಯೇ ಕನ್ನಡದ ವಿವಿಧ ಛಂದಸ್ಸಿನ ಲ್ಲಿ " ರಾಮಾಯಣ ಕಥಾ ವಲ್ಲರಿ' ಎಂಬ ಸಂಕ್ಷಿಪ್ತ ರಾಮಾಯಣ ಕೃತಿ ರಚನೆ ಮಾಡಿದ ಸೀತಾಲಕ್ಷ್ಮಿ ಹೆಗಡೆಯವರನ್ನು  ಇಂದಿನ ದಿನವೇ ಗೌರವಿಸುತ್ತಿರುವುದು ಅರ್ಥಪೂರ್ಣವಾಗಿದೆ" ಎಂದರು.
ಜೀವನ ಹಬ್ಬು ಸ್ವಾಗತಿಸಿದರು. ರಾಮಕೃಷ್ಣ ಆಗೇರ ವಂದಿಸಿದರು. ಶೇಖರ ನಾಯ್ಕ ನಿರೂಪಿಸಿದರು. ಉಪನ್ಯಾಸಕರು ವಾಲ್ಮೀಕಿಗೆ ಪುಷ್ಪ ನಮನ ಸಲ್ಲಿಸಿದರು.
error: