April 27, 2024

Bhavana Tv

Its Your Channel

ಗಣಿತಶಾಸ್ತ್ರದಲ್ಲಿ ‘ಸೈಲ್ಯಾಬ್’ ಅಳವಡಿಕೆ ಶ್ಲಾಘನೀಯ , ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪ್ರೊ. ಹೆಚ್. ಎಸ್. ರಮಾಣೆ ಅಭಿಪ್ರಾಯ

ಹೊನ್ನಾವರ ಬದಲಾವಣೆ ಜಗದ ನಿಯಮ. ಬದಲಾವಣೆಯನ್ನು ಒಪ್ಪಿಕೊಂಡ ಜಗತ್ತು ನಮ್ಮನ್ನು ಒಪ್ಪಿಕೊಳ್ಳುತ್ತದೆ. ಇಲ್ಲದಿದ್ದರೆ ಆಧುನಿಕ ಜಗತ್ತಿನ ಜೊತೆಗೆ ಹೆಜ್ಜೆ ಹಾಕಲು ನಾವು ವಿಫಲರಾಗುತ್ತೇವೆ. ಹೀಗಾಗಿ ಹೊಸ ಶಿಕ್ಷಣ ನೀತಿಯ ಪ್ರಕಾರ ಗಣಿತಶಾಸ್ತçದಲ್ಲಿ ‘ಸೈಲ್ಯಾಬ್’ ಅಳವಡಿಕೆ ಶ್ಲಾಘನೀಯ ಎಂದು ಕ.ವಿ.ವಿ. ಧಾರವಾಡದಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಹೆಚ್. ಎಸ್. ರಮಾಣೆ ನುಡಿದರು.
ಎಂ. ಪಿ. ಇ. ಸೊಸೈಟಿಯ ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಗಣಿತಶಾಸ್ತ್ರ ವಿಭಾಗ ಮತ್ತು ಕ.ವಿ.ವಿ. ಗಣಿತಶಾಸ್ತç ಶಿಕ್ಷಕರ ಸಂಘ ಧಾರವಾಡ ಇದರ ಸಹಯೋಗದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ನಡೆದ ‘ಗಣಿತದಲ್ಲಿ ಸೈಲ್ಯಾಬ್ ಪಠ್ಯಕ್ರಮದ ಅಳವಡಿಕೆ’ ಕುರಿತು ನಡೆದ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿಯು ನಮ್ಮ ಮುಂದೆ ಹೊಸ ಹೊಸ ಸವಾಲು ಮತ್ತು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಗಣಿತಶಾಸ್ತçದಲ್ಲಿ ಸೈಲ್ಯಾಬ್ ಅಳವಡಿಕೆಯಿಂದ ಗಣಿತಶಾಸ್ತçದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳಲಿವೆ. ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಎಂ.ಪಿ.ಇ. ಸಂಸ್ಥೆಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿ ಅವರು ಎಂ.ಪಿ.ಇ. ಸಂಸ್ಥೆಯ ಎಸ್.ಡಿಎಂ. ಕಾಲೇಜು ಕ.ವಿ.ವಿ ಯ ಸಹಯೋಗದಲ್ಲಿ ಪ್ರಾಧ್ಯಾಪಕರ ಅನುಕೂಲಕ್ಕಾಗಿ ಈ ಕಾರ್ಯಾಗಾರ ಆಯೋಜಿಸಿದೆ. ಶಿಕ್ಷಣದ ನೀತಿ ಬದಲಾದಂತೆ ಶಿಕ್ಷಕರು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಸೈಲ್ಯಾಬ್ ಅಳವಡಿಕೆಯಿಂದ ಗಣಿತಶಾಸ್ತçದಲ್ಲಿ ಪರಿಣಾಮಕಾರಿ ಬೋಧನೆ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ಎಂ. ನಾಯ್ಕ ಮಾತನಾಡಿ ನಮ್ಮ ಮಹಾವಿದ್ಯಾಲಯದ ಗಣಿತಶಾಸ್ತç ವಿಭಾಗದಿಂದ ಇಂತಹ ಕಾರ್ಯಾಗಾರ ಏರ್ಪಡಿಸಿರುವುದು ಸಂತಸ ತಂದಿದೆ. ಕ.ವಿ.ವಿ. ವ್ಯಾಪ್ತಿಯ ವಿವಿಧ ಮಹಾವಿದ್ಯಾಲಯಗಳಿಂದ ಎಪ್ಪತ್ತಕ್ಕೂ ಹೆಚ್ಚಿನ ಗಣಿತಶಾಸ್ತç ಪ್ರಾಧ್ಯಾಪಕರು ಇದರ ಪ್ರಯೋಜನ ಪಡೆದು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಲಿದ್ದಾರೆ ಉತ್ತಮ ಶಿಕ್ಷಕರಾಗಲು ಉತ್ತಮ ಬೋಧನಾ ವಿಧಾನ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು.
ಕುಮಾರಿ ಗಾನಾ ಭಂಡಾರಿ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಡಾ. ಮಹೇಶ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ. ಪಿ. ಎಂ. ಹೊನ್ನಾವರ ವಂದಿಸಿದರು. ನಾಗರಾಜ ಹೆಗಡೆ ಅಪಗಾಲ, ಪ್ರಶಾಂತ ಮೂಡಲಮನೆ, ಮತ್ತು ಕೆ. ಆರ್. ಶ್ರೀಲತಾ ಕಾರ್ಯಕ್ರಮವನ್ನು ನಿರೂಪಿಸಿದರು

error: