May 18, 2024

Bhavana Tv

Its Your Channel

ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ- ವಿಧಾನಪರಿಷತ್ ಪಕ್ಷೇತರ ಅಭ್ಯರ್ಥಿ ದತ್ತಾತ್ರೇಯ ನಾಯ್ಕ

ಹೊನ್ನಾವರ :ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದಿದ್ದೆನೆ. ಸಾರ್ವಜನಿಕ ರಂಗದಲ್ಲಿಯು ಸೇವೆ ಸಲ್ಲಿಸಿದ್ದೆನೆ. ನಾನು ಕಳೆದ ಎರಡು ಬಾರಿ ಎಂ ಎಲ್ ಸಿ ಚುನಾವಣೆಯ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೆ. ಆದರೆ ಈ ಬಾರಿಯು ತನ್ನಂತಹ ನಿಷ್ಠಾವಂತ ಕಾರ್ಯಕರ್ತರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವಿಧಾನಪರಿಷತ್ ಪಕ್ಷೇತರ ಅಭ್ಯರ್ಥಿ ದತ್ತಾತ್ರೇಯ ನಾಯ್ಕ ಭಟ್ಕಳರವರು ತಿಳಿಸಿದ್ದಾರೆ.

ಅವರು ಸೋಮವಾರ ಸಂಜೆ ಹೊನ್ನಾವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಸ್ಪರ್ಧೆಗೆ ಕಾರಣಗಳನ್ನು ವಿವರಿಸಿದರು.
ನಾನು ಕಳೆದ ೩೦ ವರ್ಷಗಳಿಂದ ವಿದ್ಯಾರ್ಥಿ ಸಂಘಟನೆಯಿAದ ಸಾರ್ವಜನಿಕ ಕ್ಷೇತ್ರದಲ್ಲಿ ಜನಸೇವೆ ಮಾಡುತ್ತಾ ಬಂದಿದ್ದು, ಕಳೆದ ೩೦ ವರ್ಷಗಳಿಂದ ಒಂದು ದೇಶಭಕ್ತ ರಾಷ್ಟ್ರೀಯ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಹೀಗಿರುವಾಗ ರಾಷ್ಟ್ರೀಯ ಪಕ್ಷದ ಎಂ.ಎಲ್.ಸಿ. ಚುನಾವಣೆಯ ಈ ಹಿಂದೆ ೨ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ನನ್ನನ್ನೂ ಮತ್ತು ನಾನು ಸೇವೆ ಸಲ್ಲಿಸಿದ ಪಕ್ಷದ ನಿಷ್ಠೆಯನ್ನು ಮರೆತು ನನಗೆ ಟಿಕೆಟ್ ನಿರಾಕರಿಸಿದ್ದಾರೆ. “ಕಳೆದ ೧೬ ವರ್ಷಗಳಿಂದ ಹೈಕೋರ್ಟ್ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು. ಕಳೆದ ೧೦ ವರ್ಷದಿಂದ ನಾಗರಿಕ ವೇದಿಕೆ (ರಿ.) ಭಟ್ಟಳ ಎಂಬ ಸಂಘಟನೆಯ ಮೂಲಕ ಗೌರವಾಧ್ಯಕ್ಷವಾಗಿ ಸಾರ್ವಜನಿಕ ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದೇನೆ.” ಹೀಗಿರುವಾಗ ನಾನು ವಿಧಾನ ಪರಿಷತ್‌ಗೆ ಉತ್ತರ ಕನ್ನಡ ಜಿಲ್ಲೆಯ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುತ್ತೇನೆ.

‘ವಿಧಾನ ಪರಿಷತ್’ ಎನ್ನುವುದು ಚಿಂತಕರ ಚಾವಡಿ ಆಗಿದ್ದು, ಅಲ್ಲಿ ಸುಶಿಕ್ಷಿತರಿಗೆ ಮಾತ್ರ ಅವಕಾಶವಿದ್ದು ಆದರೆ ಹೆಚ್ಚಿನ ಸಂಖ್ಯೆ ಭ್ರಷ್ಟರು ಆರಿಸಿ ಹೋಗಿರುವುದರಿಂದ ಚಿಂತಕರ ಚಾವಡಿ ಚಿಂತನೆಯ ಚಾವಡಿಯಾಗಿ ಮಾರ್ಪಾಡಾಗಿರುತ್ತದೆ. ಇದರಿಂದ ವಿದ್ಯಾವಂತರು ಮತ್ತು ಪ್ರಾಮಾಣಿಕರು ಪರಿಷತ್ ಸದಸ್ಯರಾಗಿ ಚುನಾಯಿತವಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನನ್ನನ್ನು ಚುನಾಯಿಸಿದಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಗೌರವ ಮತ್ತು ಪ್ರಾಮಾಣೀಕತೆಯಿಂದ ನಡೆಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ವರದಿ ವೆಂಕಟೇಶ ಮೇಸ್ತ ಹೊನ್ನಾವರ

error: