May 4, 2024

Bhavana Tv

Its Your Channel

ಹೊಸ ನೋಟಗಳಿಂದ ಮೂಡಿ ಬಂದ‘ಕರ್ಣ ಭೇದನ’

ಹೊನ್ನಾವರ :ಯಕ್ಷಲೋಕ ಹಳದೀಪುರ, ಸ್ಫೂರ್ತಿರಂಗ ಹೊನ್ನಾವರ ಇವುಗಳ ಸಂಯುಕ್ತಆಶ್ರಯದಲ್ಲಿ, ೨೭ ನೆಯ‘ಕರ್ಣ ಭೇದನ’ ತಾಳಮದ್ದಳೆ ಹೊಸ ನೋಟಗಳಿಂದ ಅರ್ಥಪೂರ್ಣವಾಗಿ ನಡೆಯಿತು.

ಹಿಮ್ಮೇಳದಲ್ಲಿ ಕಡತೋಕಾ ಗೋಪಾಲಕೃಷ್ಣ ಭಾಗವತ ಹಳದೀಪುರ ತಮ್ಮಕಂಠ ಮಾಧುರ್ಯದಿಂz Àಉತ್ತಮವಾಗಿ ಆದಿಯಿಂದ ಅಂತ್ಯದವರೆಗೂ ಸಮರ್ಥವಾಗಿ ಭಾಗವತಿಕೆ ನಿರ್ವಹಿಸಿದರು. ಮದ್ದಳೆಯಲ್ಲಿ ಪಿ.ಕೆ.ಹೆಗಡೆ ಹರಿಕೇರಿ ಮತ್ತು ಚಂಡೆಯಲ್ಲಿ ಕುಮಾರ ಮಯೂರ, ಹರಿಕೇರಿ ಇವರ ನಾದ ಪ್ರಧಾನ ಮದ್ದಳೆ ಚಂಡೆ ನುಡಿಸುವಿಕೆ ಕುಳಿತ ಪ್ರೇಕ್ಷಕರನ್ನು ಮುದ ನೀಡಿ ಹಲ ಸಾರೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುವಂತಾಯಿತು.
ಮಹಾಭಾರತದಲ್ಲಿ ಅತ್ಯಂತ ಮಹತ್ವದ ಪರ್ವ ಉದ್ಯೋಗ ಪರ್ವ.ಇದರಲ್ಲಿ ಅತ್ಯಂತ ಮುಖ್ಯವಾದದ್ದು‘ಕರ್ಣ ಭೇಧನ’ ಸಂದರ್ಭ.ಇಲ್ಲಿಯ ವಿಶೇಷತೆಯೇನೆಂದರೆ ಮಹಾಭಾರತದಲ್ಲಿ ಕರ್ಣ ಕೃಷ್ಣನನ್ನು, ಕೃಷ್ಣ ಕರ್ಣನನ್ನು ಭೇಟಿಯಾಗಿ ಮಾತಾಡಿದ್ದು, ಕುಂತಿಕರ್ಣನನ್ನು ಮತ್ತುಕರ್ಣಕುಂತಿಯನ್ನು ಮುಖಾಮುಖಿಯಾಗಿ ಸಂವಾದ ನಡೆಸಿದ್ದು ಇಲ್ಲವೇ ಇಲ್ಲ. ಅದಲ್ಲದೇ ಕೌರವ ಸೇನೆಯಲ್ಲಿ ಮೂವರು ಪರಶುರಾಮನಿಂದ ಶಸ್ತಾçಸ್ತç ವಿದ್ಯೆ ಪಡೆದ ಪರಿಣಿತರಲ್ಲಿ ಕರ್ಣ ಕ್ಷತ್ರಿಯನೂ ಅಲ್ಲ. ಬ್ರಾಹ್ಮಣನೂ ಅಲ್ಲ. ಅವನ್ಯಾರುಎಂಬುದನ್ನುಉದ್ದೇಶ ಪೂರ್ವಕ ತಿಳಿಸಿ ಯುದ್ಧ ಸಂಸ್ಕೃತಿಗೆ ಪ್ರೇರಣೆಯಾಗಿ ಹೇತುವಾದ ಸಂಗತಿಯನ್ನು ಪ್ರತ್ಯಕ್ಷವಾಗಿ ತಿಳಿಸುವ ತಾಳಮದ್ದಳೆ ‘ಕರ್ಣ ಭೇದನ’. ಇದನ್ನು ಕೃಷ್ಣನ ಪಾತ್ರಧಾರಿಗಣೇಶಎನ್.ಹೆಗಡೆ ಇವರುಕರ್ಣನೊಡನೆ ನಡೆಸಿದ ಸಂವಾದದ ಸಂದರ್ಭದಲ್ಲಿ ಮನೋಜ್ಷವಾಗಿ ಸಾಕ್ಷಾö್ಯಧಾರಗಳಿಂದ ವಿಶ್ಲೇಷಿಸಿ ವಿವರಿಸಿದರು. ಇದಕ್ಕೆ ಪ್ರತಿಯಾಗಿಕರ್ಣನಅರ್ಥಧಾರಿಉಮಾಮಹೇಶ್ವರ ಭಟ್ಟಕಿತ್ರೆ ಭಟ್ಕಳ ಇವರು ವರ್ತಮಾನದತನ್ನ ಸ್ಥಿತಿ ಸಂಪೂರ್ಣವಾಗಿಕೌರವನ ಪರ.ಕೌರವನೇತನ್ನಜೀವನದ ಸರ್ವಸ್ವ ಹೇಗೆ ಎಂಬುದನ್ನುತಾನು ಹಸ್ತಿನಾವತಿಗೆ ಬಂದ ಸಂದರ್ಭದಲ್ಲಿ ಮೊಟ್ಟ ಮೊದಲು ಭೇಟಿಯಾಗಿತನ್ನ ಮನ ಸೆಳೆದು ತನು ಮನ ಧನ ಒಪ್ಪಿಸಿದ ಸಂಗತಿಯನ್ನು ಸಾಕ್ಷಾö್ಯಧಾರ ಸಹಿತ ತಿಳಿಸಿದರು.ದೇಹ ನೀಡುವವಳು ತಾಯಿ, ಪ್ರಾಣ ನೀಡುವವನುತಂದೆ. ಪ್ರಾಣ ನೀಡಿದ ನಾನು ನಿನಗೆ ಎಚ್ಚರ ನೀಡಿ ಹೋಗಲು ಬಂದಿದ್ದೇನೆ. ಹಿಂದೆ ನೀನು ಇಂದ್ರನಿಗೆ ನೀಡಿದಂತೆ ನಿನಗಿರುವ ೯೯೯ ಕವಚಗಳನ್ನು ನೀಡಿದಂತೆ ಈಗ ನಿನ್ನನ್ನುಕಾಣಲು ಬರುವಕುಂತಿಗೆಯಾವುದೇ ವಚನ ನೀಡಬೇಡಎಂದು, ಸೂರ್ಯನ ಪಾತ್ರಧಾರಿ ಎಮ್.ಎಮ್.ಹೆಗಡೆ ತಿಳಿಸಿದಾಗ, ಕರ್ಣನ ಪಾತ್ರಧಾರಿ ಪಿತೃ ಪ್ರಧಾನ ವ್ಯವಸ್ಥೆಯಅಧಿಕಾರದಾಹ ಎಷ್ಟು ವಿನಾಶಕಾರಿಎಂಬುದನ್ನು ತಿಳಿಸಿದರು.
ತಾಯಿಯ ವಾತ್ಸಲ್ಯ, ಮಮತೆ, ಸಹನೆ, ಮೋಹ ಪ್ರೀತಿಇವನ್ನೆಲ್ಲ ಸಾಮಾಜಿಕ ಭಯಕ್ಕೆ ಕಳೆದುಕೊಂಡು, ಭಯ ಭೀತಿಯಿಂದ ಬದುಕುವಂತಾದ ಹೆಣ್ಣಿನಜೀವಂತಚಿತ್ರಣವನ್ನು ಬಿಂಬಿಸಿದ ಕುಂತಿಯ ಪಾತ್ರ ನಿರ್ವಹಿಸಿದ ರಂಗಯ್ಯ ಹೆಬ್ಬಾರಇವರುತಾಯ್ತನದತವಕದಲ್ಲಿಯ ಹೆಣ್ಣು ಹೇಗೆ ಸಾಮಾಜಿಕ ಸ್ವತ್ತಾಗಿಯೂ ಅಸಹಾಯಕಳಾಗಿ ಬದುಕು ಸಾಗಿಸುವಂತಾಗುತ್ತದೆಎAಬುದನ್ನುಅತ್ಯದ್ಭುತವಾಗಿ ಮನಗಾಣಿಸಿಕೊಟ್ಟರು. ಹೊಸ ಚಿಂತನೆ ಹೊಸ ನೋಟಗಳಿಂದ ಕೂಡಿದಕರ್ಣ ಭೇದನ ಪ್ರಸಂಗ ಸೇರಿದಹಿರಿ ಕಿರಿಯಪ್ರೇಕ್ಷಕರೆಲ್ಲರ ಮನ ಮೆಚ್ಚಿಸಿತು. ಡಾ.ಎಸ್.ಡಿ.ಹೆಗಡೆ ಪ್ರೇಕ್ಷಕರಾಗಿ ಬಂದಎಲ್ಲ ಹಿರಿಕಿರಿಯಕಲಾವಿದರನ್ನು ಸ್ವಾಗತಿಸಿದರು. ಎಮ್.ಎಮ್.ಹೆಗಡೆಎಲ್ಲರಿಗೂಅಭನಂದನೆ ಸಲ್ಲಿಸಿದರು.

error: