May 14, 2024

Bhavana Tv

Its Your Channel

ರೋಟರಿ ಕ್ಲಬ್ ಹೊನಾವರಕ್ಕೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಹೊನ್ನಾವರ ; ಹೊನ್ನಾವರದ ರೋಟರಿ ಕ್ಲಬಿಗೆ ಗುರುವಾರ ಜಿಲ್ಲಾ ಗವರ್ನರ್ ಡಿಜಿ ಗೌರೀಶ್ ಎಂ ಧೋಂಡ್ ಬೇಟಿ ನೀಡಿ ಸಂಘದ ಕಾರ್ಯಚಟುವಟಿಕೆಯನ್ನು ನೋಡಿ ಪ್ರಸಂಶೆ ವ್ಯಕ್ತಪಡಿಸಿದರು.

ಗುರುವಾರ ಸಂಜೆ ಡಾ|| ರೋಹಿತ್ ಎಸ್ ಭಟ್ಟ, ಮೆಮೊರಿಯಲ್ ರೋಟರಿ ಪಾರ್ಕ ಹೌಸ್, ಕರ್ನಲ್ ಹಿಲ್, ಹೊನ್ನಾವರದಲ್ಲಿ ನಡೆದ ರೋಟರಿ ಪರಿವಾರದವರ ಕಾರ್ಯಕ್ರಮಕ್ಕೆ ಜಿಲ್ಲಾ ಗವರ್ನರ್ ಡಿಜಿ ಗೌರೀಶ್ ಎಂ ಧೋಂಡ್‌ಯವರನ್ನು ಸ್ವಾತಿಸಲಾಯಿತು, ಕಾರ್ಯðಕ್ರಮದ ಅಧ್ಯಕ್ಷತೆಯನ್ನು ರೊಟರಿ ಅಧ್ಯಕ್ಷ ಸ್ಟಿಪನ್ ರೋಡ್ರಗಿಸ್ ವಹಿಸಿದ್ದರು.

ವಿದ್ಯಾಥಿನಿಯಿಂದ ಭರತನಾಟ್ಯ ಹಾಗೂ ರೊಟರಿಯನ್ ದಂಪತಿಗಳಾದ ಡಾ|| ಯುವರಾಜ್ ಮತ್ತು ಡಾ|| ಮಂಜುಳಾರವರ ರಾಮ ಸ್ತುತಿ ಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊAಡಿತು, ಇವರಿಗೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಲ್ ಹಾಗೂ ಹಾರ್ಮೋನಿಯಮ್ ನಲ್ಲಿ ಹರೀಶ್ಚಂದ್ರ ನಾಯ್ಕ ಸಾಥ ನೀಡಿದರು,
ಕೆನರಾ ಬ್ಯಾಂಕ್ ಹೊನಾವರ ಸಹಯೋಗದಲ್ಲಿ 1 ರಿಂದ 10 ನೇ ತರಗತಿಯ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ, ಶಾಲಾ ಮಕ್ಕಳಿಗೆ ವಿದ್ಯಾ ಸೇತು ಪುಸ್ತಕ ವಿತರಣೆ ಮಾಡಲಾಯಿತು, ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ, ತಾಲೂಕಾ 6 ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ನೀಡಿ ಸನ್ಮಾನ ಹಾಗೂ ಉತ್ತಮ ಸೇವೆಸಲ್ಲಿಸಿದ ರೋಟರಿ ಸದಸ್ಯರನ್ನು ಸನ್ಮಾನಿಸಲಾಯಿತು.

ರೋಟರಿ ಅಧ್ಯಕ್ಷ ಸ್ಟಿಪ್ ರೊಟ್ರಿಗಿಸ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,
ನಂತರ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರುಗಳಾದ ಜಿ ಟಿ ಹೆಬ್ಬಾರ್, ಜಿ ಜಿ ಶಂಕರ್, ದೀಪಕ್ ಗೋಂಕರ್, ಪ್ರಕಾಶ್ ರೋಡ್ರಿಗಸ್, ದೀಪಕ್ ಲೋಪ್ಸ್ ರವರನ್ನು ಸನ್ಮಾನಿಸಲಾಯಿತು.
ತಾಲೂಕಾ 6 ಶಿಕ್ಷಕರನ್ನು ಸನ್ಮಾನಿಸಲಾಯಿತು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಬ್ರಾಯ್ ಎನ್ ಶಾನಭಾಗ, ಎಲ್ಪಿಎಸ್, ಯಲಕೊಟ್ಟಿಗೆ, ಉಪ್ಪೋಣಿ, ಹೊನಾವರ, ಉಲ್ಲಾಸ್ ಪಟಗಾರ, ಎಚ್‌ಪಿಎಸ್, ಮಹಿಮೆ, ಹೊನಾವರ ಹಾಗೂ ಗಣಪತಿ ಎಸ್ ಹೆಗಡೆ, ಎಚ್ ಪಿಎಸ್-1, ಗುಂಡಿಬೈಲ್, ಹೊನಾವರ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಮಂಜುನಾಥ್ ಎಂ ನಾಯಕ್, ಸರಕಾರಿ ಪ್ರೌಡ ಶಾಲೆ, ಪ್ರಭಾತನಗರ, ಹೊನಾವರ, ಅಶೋಕ್ ನಾಯಕ್, ಎನ್‌ಈಎಸ್(ಕನ್ನಡ ಮಾಧ್ಯಮ), ಹೊನಾವರ, ಎಲ್ ಎಂ ಹೆಗಡೆ, ಶ್ರೀ ಚೆನ್ನಕೇಶವ ಪ್ರೌಢ ಶಾಲೆ, ಕರ್ಕಿ, ಹೊನಾವರ ಇವರುಗಳನ್ನ ದಂಪತಿಗಳ ಸಮೇತ ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯತ ಸೆನಿಟರಿ ಇನ್ಸ್ ಪೆಕ್ಟರ್ ಸುನೀಲ್ ಗಾವಡೆ ಹಾಗೂ ಆಂಬ್ಯುಲೆನ್ಸ್ ಚಾಲಕ ಮಂಜು ನಾಯ್ಕ ಅವರನ್ನು ಸಾರ್ವಜನಿಕ ಸೇವೆ ಪರಿಗಣಿಸಿ ಸನ್ಮಾನಿಸಲಾಯಿತು
ಪಾಲ್ ಹ್ಯಾರಿಸ್ ಪ್ರತಿಮೆಯನ್ನು ಇದೇ ಸಂದರ್ಬದಲ್ಲಿ ರೋಟರಿ ಕ್ಲಬ್ ಪಟಿಯಾಲ ಪಂಜಾಬ್ ರೋಟರಿ ಸದಸ್ಯರಾದ ಬಾಗ್ ಸಿಂಗ್ ಪನ್ನು ಉದ್ಘಾಟಿಸಿದರು.
ಡಿಜಿ ಗೌರೀಶ್ ಎಂ ಧೋಂಡ್ ಈ ಸಂದರ್ಬದಲ್ಲಿ ಮಾತನಾಡಿ ಹೊನ್ನಾವರ ರೋಟರಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅಸಿಸ್ಟಂಟ್ ಗವರ್ನರ ನಾಗರಾಜ ಜೋಶಿ, ಬಾಗ್ ಸಿಂಗ್ ಪನ್ನು, ನರಿಂದೇಲ ಬರವಾಲಾ ಮಾತನಾಡಿದರು.
ಜಿಲ್ಲೆಯ ಪ್ರಥಮ ಮಹಿಳೆ 3170 ರೋಟರಿಯನ್ ಪ್ರತಿಮಾ ಧೋಂಡ್ ರವರನ್ನು ಸಾಂಪ್ರದಾಯಿಕವಾಗಿ ಮಹಿಳಾ ರೋಟರಿಯನ್‌ಗಳು ಉಡಿತುಂಬಿ ಗೌರವಿಸಿದರು.
ವೇದಿಕೆಯಲ್ಲಿ ಮನ್‌ಜಿತ ಸಿಂಘ ಭೋಲವಾಸಿಯಾ, ಡಾ|| ಎ.ಎಸ್ ಶಾಸ್ತಿç ಉಪಸ್ಥಿತರಿದ್ದರು.
ರೋಟರಿ ಕಾರ್ಯದರ್ಶಿ ಮಹೇಶ ಕಲ್ಯಾಣಪುರ ವರದಿ ವಾಚಿಸಿದರು, ಡಾ|| ಗಾಯತ್ರಿ ವಂದಿಸಿದರು. ದಿನೇಶ ಕಾಮತ ಹಾಗೂ ಸತೀಶ ಭಟ್ ನಿರೂಪಿಸಿದರು.

error: